Connect with us

    DAKSHINA KANNADA

    ದೇವಸ್ಥಾನ ನಿರ್ಮಾಣವೆಂದರೆ ಇತಿಹಾಸ ಸೃಷ್ಟಿಸಿದಂತೆ :ಶಾಸಕ ಸಂಜೀವ ಮಠಂದೂರು

    ಪುತ್ತೂರು, ನವೆಂಬರ್ 28: ಡಿ.21ರಿಂದ 28ರವರೆಗೆ ನಡೆಯಲಿರುವ ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಪುನಃ ನಿರ್ಮಾಣ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ದೇವಸ್ಥಾನದಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.

    ರಾಜರ ಕಾಲದಲ್ಲಿ ಕಟ್ಟಿದ್ದ ದೇವಳಗಳ ವಾಸ್ತುಶಿಲ್ಪ, ಕೆತ್ತನೆಗಳಲ್ಲಿ ಆ ಕಾಲದ ಜೀವನ ಪದ್ಧತಿ, ಸಂಪ್ರದಾಯ ಪ್ರತಿಬಿಂಬಿತವಾಗಿದೆ. ಅದೇ ರೀತಿ ನಮ್ಮ ಕಾಲಘಟ್ಟದಲ್ಲಿ ನಿರ್ಮಾಣವಾಗುವ ದೇವಸ್ಥಾನಗಳು ಮುಂದಿನ ಪೀಳಿಗೆ ಶ್ರದ್ಧೆ, ಭಕ್ತಿಯನ್ನು ವರ್ಗಾಯಿಸುವಂತಾಗಬೇಕು. ಹಿಂದು ಸಮಾಜ ಜಗತ್ತಿಗೆ ಮಾರ್ಗದರ್ಶನ ನೀಡುವಂತಾಗಬೇಕು ಎಂದ ಶಾಸಕರು ಕೋವಿಡ್‌ನಿಂದ ಕಂಗೆಟ್ಟ ಕಾಲಘಟ್ಟದಲ್ಲೂ  ಸರ್ವೆಯ ಭವ್ಯ ದೇಗುವ ನಿರ್ಮಾಣ ಎಂದಿಗೂ ಮರೆಯದ ಕಾರ್ಯ ಎಂದು ಶ್ಲಾಘಿಸಿದರು.

    ದೇವಸ್ಥಾನದ ಅಂಗಳಕ್ಕೆ ಇಂಟರ್‌ಲಾಕ್, ತಡೆಗೋಡೆ, ಸಾರ್ವಜನಿಕ ಶೌಚಗೃಹ ನಿರ್ಮಾಣಕ್ಕೆ ಸರ್ಕಾರದಿಂದ ನೆರವು ದಗಿಸುವಂತೆ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಿವನಾಥ ರೈ ಮೇಗಿನಗುತ್ತು ಶಾಸಕರಲ್ಲಿ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕರು ದೇವಸ್ಥಾನದ ಮೂಲಸೌಕರ್ಯ ಬೇಡಿಕೆಗಳಿಗೆ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು. ದೇವಸ್ಥಾನದ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿ ಸಲಹೆ ಸೂಚನೆಗಳನ್ನು ನೀಡಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *