LATEST NEWS
ಬಾಗಿಲು ಮುಚ್ಚಿದ ಶಬರಿಮಲೆ – 53 ಲಕ್ಷಕ್ಕೂ ಅಧಿಕ ಭಕ್ತರು ಭೇಟಿ
ಶಬರಿಮಲೆ ಜನವರಿ 20: ಶಬರಿಮಲೆಯಲ್ಲಿ ಮಂಡಲ-ಮಕರವಿಳಕ್ಕು ಯಾತ್ರೆ ಸೋಮವಾರ ಮುಕ್ತಾಯಗೊಂಡಿದೆ. ಇದರೊಂದಿಗೆ ಶಬರಿಮಲೆಯ ಅಯ್ಯಪ್ಪ ದೇಗುಲವನ್ನು ಸೋಮವಾರ ಬೆಳಿಗ್ಗೆ ವಿಧ್ಯುಕ್ತವಾಗಿ ಮುಚ್ಚಲಾಯಿತು.
ನವೆಂಬರ್ 15 ರಂದು ಮಂಡಲ-ಮಕರವಿಳಕ್ಕು ಉತ್ಸವದ ಪ್ರಾರಂಭದಿಂದ ಜನವರಿ 17 ರವರೆಗೆ ಒಟ್ಟು ಸಂದರ್ಶಕರ ಸಂಖ್ಯೆ 51,92,550 ರಷ್ಟಿದೆ. ಡಿಸೆಂಬರ್ 30 ರಂದು ಮಕರವಿಳಕ್ಕು ಋತುವಿನ ಆರಂಭವಾಗಿತ್ತು, ಅಂದಿನಿಂದ ಸುಮಾರು 19,00,789 ಅಯ್ಯಪ್ಪ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ಶನಿವಾರ ಬಿಡುಗಡೆಯಾದ ಅಧಿಕೃತ ಪ್ರಕಟಣೆಯಲ್ಲಿ ಟಿಡಿಬಿ ತಿಳಿಸಿದೆ.
ಪಂದಳ ರಾಜ ಕುಟುಂಬದ ಪ್ರತಿನಿಧಿ ತ್ರಿಕ್ಕೇಟನಲ್ ರಾಜರಾಜ ಶರ್ಮಾ ಅವರು ದರ್ಶನ ಪಡೆದ ಬಳಿಕ ಬೆಳಿಗ್ಗೆ 6.30ಕ್ಕೆ ದೇಗುಲವನ್ನು ಮುಚ್ಚಲಾಯಿತು. ಬೆಳಿಗ್ಗೆ 5 ಗಂಟೆಗೆ ತೆರೆದ ದೇಗುಲದ ಪೂರ್ವ ಮಂಡಪಂನಲ್ಲಿ ಗಣಪತಿ ಹೋಮ ನಡೆಯಿತು. ಈ ಬಾರಿ ಶಬರಿಮಲೆಯ ಯಾತ್ರೆ ಸಂದರ್ಭ ಯಾವುದೇ ರೀತಿಯ ಲೋಪಗಳಾಗದಂತೆ ದೇವಸ್ವಂ ಮಂಡಳಿ, ವಿವಿಧ ಸರ್ಕಾರಿ ಇಲಾಖೆಗಳು ಮುನ್ನೆಚ್ಚರಿಕೆ ವಹಿಸಿದ್ದವು, ಕೇರಳ ಹೈಕೋರ್ಟ್ ಕಣ್ಗಾವಲಿನಲ್ಲಿ ಈ ಬಾರಿ ಶಬರಿಮಲೆ ಋತುವಿನಲ್ಲಿ ಯಾವುದೇ ಸಮಸ್ಯೆಗಳು ಕಾಣಿಸಲಿಲ್ಲ. ಗಮನಾರ್ಹವಾಗಿ ಪೊಲೀಸರು ಭಕ್ತಾಧಿಗಳಿಗೆ ದರ್ಶನಕ್ಕಾಗಿ ವಿಶೇಷವಾಗಿ ಸಹಕರಿಸಿದ್ದರು.