FILM
ಸಹ ನಟನ ಜೊತೆ ಸಿಕ್ಕಿಬಿದ್ದ ಕಿರುತೆರೆ ನಟಿ; ಆರೇ ತಿಂಗಳಿಗೆ ಕೊನೆ ಆಯ್ತು ಮದುವೆ

ಮುಂಬೈ, ಮಾರ್ಚ್ 11: ಇತ್ತೀಚೆಗೆ ಎಲ್ಲಾ ಕ್ಷೇತ್ರಗಳಲ್ಲಿ ವಿಚ್ಛೇದನ ಅನ್ನೋದು ಸರ್ವೇ ಸಮಾನ್ಯ ಆಗಿದೆ. ಈ ಬಗ್ಗೆ ಹೆಚ್ಚು ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಈಗ ಹಿಂದಿ ಕಿರುತೆರೆ ನಟಿ ಅದಿತಿ ಶರ್ಮಾ ಅವರು ವಿಚ್ಛೇದನ ಪಡೆಯುತ್ತಿದ್ದಾರೆ. ಇವರ ಸಂಸಾರಕ್ಕೆ ತುಂಬಿದ್ದು ಕೇವಲ ಆರು ತಿಂಗಳು ಮಾತ್ರ.

ಅಭಿನೀತ್, ಸಮರ್ಥ್ಯ-ಅದಿತಿ (ಜೊತೆಯಾಗಿ ಇರುವವರು)
ಅಭಿನೀತ್ ಕೌಶಿಕ್ ಜೊತೆ ಗುಟ್ಟಾಗಿ ವಿವಾಹ ಆಗಿದ್ದ ಅದಿತಿ ಈಗ ಬೇರೆ ಆಗುವ ನಿರ್ಧಾರಕ್ಕೆ ಬಂದಿದ್ದಾರಂತೆ. ಈ ವಿಚಾರ ಹೊರಬಂದು ಸದ್ದು ಮಾಡುತ್ತಿದೆ. ಅವರ ಅಭಿಮಾನಿಗಳಿಗೆ ಇದು ಶಾಕಿಂಗ್ ಎನಿಸಿದೆ. ಅದಿತಿ ಹಾಗೂ ಅಭಿನೀತ್ ಅವರು 2024ರ ನವೆಂಬರ್ 12ರಂದು ವಿವಾಹ ಆದರು. ಈ ಮದುವೆ ಗುರುಗ್ರಾಮದ ನಿವಾಸದಲ್ಲೇ ನಡೆಯಿತು.

ಕನ್ಪರ್ಮ್ ಟಿಕೆಟ್ ಇದ್ರೆ ಮಾತ್ರ ರೈಲ್ವೆ ನಿಲ್ದಾಣದೊಳಗೆ ಎಂಟ್ರಿ – ರೈಲ್ವೆ ಇಲಾಖೆಯ ಹೊಸ ರೂಲ್ಸ್
ಕೇವಲ ಕುಟುಂಬದವರು ಹಾಗೂ ಕೆಲವೇ ಆಪ್ತರು ವಿವಾಹಕ್ಕೆ ಹಾಜರಿ ಹಾಕಿದ್ದರು. ಈ ಫೋಟೋಗಳು ಎಲ್ಲೂ ಹೊರಬರದಂತೆ ನೋಡಿಕೊಳ್ಳಲಾಗಿತ್ತು. ವಿವಾಹ ಆದ ಬಳಿಕ ಆಫರ್ಗಳು ಇಲ್ಲದಾಗುವ ಪರಿಸ್ಥಿತಿ ಎದುರಾಗುತ್ತದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಅದಿತಿ ಅವರು ಗುಟ್ಟಾಗಿ ವಿವಾಹ ಆಗುವ ನಿರ್ಧಾರಕ್ಕೆ ಬಂದಿದ್ದರು. ಇದಕ್ಕೆ ಅಭಿನೀತ್ ಕೂಡ ಬೆಂಬಲ ಕೊಟ್ಟಿದ್ದರು.