FILM
ನಡು ರಸ್ತೆಯಲ್ಲೇ ಲವರ್ ಕೆನ್ನೆಗೆ ಭಾರಿಸಿದ ಯುವಕ…ಕಾರಿನಿಂದ ಇಳಿದು ಕ್ಲಾಸ್ ತೆಗೆದುಕೊಂಡ ತೆಲುಗು ನಟ ನಾಗಶೌರ್ಯ

ತೆಲಂಗಾಣ ಮಾರ್ಚ್ 1: ರಸ್ತೆಯಲ್ಲಿ ಯುವಕನೊಬ್ಬ ತನ್ನ ಲವರ್ ಗೆ ಕೆನ್ನೆಗೆ ಭಾರಿಸಿದ್ದಕ್ಕೆ ತೆಲುಗು ಯುವ ನಟ ನಾಗ ಶೌರ್ಯ ಅವರು ರಸ್ತೆ ಮಧ್ಯೆಯೇ ಆ ಯುವಕನಿಗೆ ಸರಿಯಾಗೇ ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದೆ.
ಇತ್ತೀಚೆಗೆ ಹೈದರಾಬಾದ್‌ನ ಜನನಿಬಿಡ ರಸ್ತೆಯಲ್ಲಿ ಈ ಘಟನೆ ನಡೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಸಿಗ್ನಲ್ ಒಂದರಲ್ಲಿ ನಿಂತಿದ್ದಾಗ ಯುವಕನೊಬ್ಬ ಬೈಕ್‌ನಲ್ಲಿಯೇ ಯುವತಿಯ ಕೆನ್ನೆಗೆ ಭಾರಿಸಿದ್ದ. ಕಾರಿನಲ್ಲಿದ್ದ ನಾಗ ಶೌರ್ಯ ಅವರು ಇದನ್ನು ಕಂಡು ಕಾರಿನಿಂದ ಕೆಳಗಿಳಿದು ಆ ಯುವಕನನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಯುವಕ ಯುವತಿ ಬಳಿ ಕ್ಷಮೆ ಕೇಳುವವರೆಗೂ ನಾಗಶೌರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬಳಿಕ ಆ ಯುವಕ ಯುವತಿಗೆ ಕ್ಷಮೆ ಕೇಳಿದ್ದರಿಂದ ಪ್ರಕರಣ ಅಲ್ಲಿಗೆ ಮುಗಿದಿದೆ.