Connect with us

    LATEST NEWS

    ರಾಷ್ಟ್ರಪಕ್ಷಿ ನವಿಲಿನ ಕರಿ ಮಾಡಿದ ಯುಟ್ಯೂಬರ್ ಅರೆಸ್ಟ್

    ತೆಲಂಗಾಣ ಅಗಸ್ಟ್ 12: ರಾಷ್ಟ್ರಪಕ್ಷಿ ನವಿಲಿನ ಕರಿ ಮಾಡುವುದು ಹೇಗೆ ಎಂದು ಯುಟ್ಯೂಬ್ ವಿಡಿಯೋ ಮಾಡಿದ ಯುಟ್ಯೂಬರ್ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅರೆಸ್ಟ್ ಆದವರನ್ನು ಕೋಡಂ ಪ್ರಣಯ್ ಕುಮಾರ್ ಎಂದು ಗುರುತಿಸಲಾಗಿದೆ. ಇವರು ತಮ್ಮ ಚಾನೆಲ್‌ಗೆ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಲು ಈ ಸಾಹಸವನ್ನು ಮಾಡಿದ್ದಾರೆ.


    ನವಿಲನ್ನು ಕೊಂದು ಅದರ ಮಾಂಸದಿಂದ ಅಡುಗೆ ಮಾಡಿದ್ದಾನೆ. ಅಡುಗೆ ಮಾಡುವುದನ್ನೆಲ್ಲ ವಿಡಿಯೋ ಮಾಡಿಕೊಂಡು ಬಳಿಕ ಅದನ್ನು ಯೂಟ್ಯೂಬ್​​​ಗೆ ಅಪ್​ಲೋಡ್ ಮಾಡಿದ್ದಾನೆ. ವಿಡಿಯೋ ನೋಡುತ್ತಿದ್ದಂತೆ ನೆಟ್ಟಿಗರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಅಧಿಕಾರಿಗಳು ಆರೋಪಿ ಇರೋ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಅಡವಿ ಹಂದಿ, ಉಡಾ ಇತ್ಯಾದಿ ಪ್ರಾಣಿಗಳ ಮಾಂಸದಿಂದ ಅಡುಗೆ ಮಾಡಿರುವುದು ಅವರ ಯೂಟ್ಯೂಬ್​ನಲ್ಲಿದೆ ಎಂದು ಹೇಳಲಾಗುತ್ತಿದೆ.

    ಅರಣ್ಯಾಧಿಕಾರಿಗಳ ತಂಡ ತಂಗಲ್ಲಪಲ್ಲಿ ಗ್ರಾಮಕ್ಕೆ ಆಗಮಿಸಿ ವ್ಯಕ್ತಿಯ ಮನೆಯಿಂದ ನವಿಲಿನ ಸಾರನ್ನು ವಶಪಡಿಸಿಕೊಂಡರು. ಅದನ್ನು ವಿಧಿವಿಜ್ಞಾನ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
    ನವಿಲು ರಾಷ್ಟ್ರೀಯ ಪಕ್ಷಿಯಾಗಿದ್ದು ಅದರ ರಕ್ಷಣೆಯನ್ನು ಇಲ್ಲಿ ಕಡೆಗಣಿಸಲಾಗಿದೆ. ಅಲ್ಲದೇ ಅದನ್ನು ಹತ್ಯೆ ಮಾಡಿ ವಿಡಿಯೋ ಮೂಲಕ ಪ್ರಚಾರ ಮಾಡಿರುವ ಆರೋಪದ ಮೇಲೆ ವ್ಯಕ್ತಿಯನ್ನ ಬಂಧಿಸಲಾಗಿದೆ. ಯೂಟ್ಯೂಬರ್‌ನ ರಕ್ತದ ಮಾದರಿ ಹಾಗೂ ಆಹಾರದ ಮಾದರಿಯನ್ನು ಪರೀಕ್ಷೆಗಾಗಿ ಫೋರೆನ್ಸಿಕ್​ಗೆ ಕಳುಹಿಸಲಾಗಿದೆ. ನವಿಲು ಮಾಂಸ ತಿಂದಿರುವುದು ದೃಢವಾದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *