Connect with us

    KARNATAKA

    ಸರಿಯಾಗಿ ಓದದ ವಿದ್ಯಾರ್ಥಿನಿಗೆ ಹೊಡೆದ ಶಿಕ್ಷಕಿಗೆ 3 ವರ್ಷ ಜೈಲು!

    ತುಮಕೂರು, ಜನವರಿ 19: ಸರಿಯಾಗಿ ಓದದ ವಿದ್ಯಾರ್ಥಿನಿಗೆ ಹೊಡೆದ ಶಿಕ್ಷಕಿಗೆ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ.

    ಭಾರತ್​ ಮಾತಾ ಶಾಲೆ ಶಿಕ್ಷಕಿ ರಹತ್​ ಫಾತಿಮಾ ಶಿಕ್ಷೆಗೆ ಗುರಿಯಾದವರು. 2011ರ ಫೆ.17ರಂದು ಸರಿಯಾಗಿ ಓದಲಿಲ್ಲವೆಂದು 7 ವರ್ಷದ ಬಾಲಕಿಗೆ ಕೋಲಿನಿಂದ ಹೊಡೆದ ಪರಿಣಾಮ ಬಾಲಕಿಯ ಎಡಗಣ್ಣಿಗೆ ಗಾಯವಾಗಿತ್ತು.

    ಈ ಸಂಬಂಧ ತಿಲಕ್​ ಪಾರ್ಕ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಠಾಣಾ ಪಿಎಸ್​ಐ ಆಗಿದ್ದ ದಿನೇಶ್​ ಪಾಟೀಲ್​ ಆರೋಪಿ ಶಿಕ್ಷಕಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

    ಭಾರತೀಯ ದಂಡ ಸಂಹಿತೆ 325ರ ಅಡಿಯಲ್ಲಿ ಶಿಕ್ಷಕಿ ಅಪರಾಧವೆಸಗಿರುವುದು ಸಾಬೀತಾಗಿದ್ದು, ಈ ಪ್ರಕರಣದ ವಿಚಾರಣೆ ನಡೆಸಿದ 3ನೇ ಅಪರ ಸಿವಿಲ್​ ಹಾಗೂ ಜೆಎಂಎಸಿ ಕೋರ್ಟ್​ನ ನ್ಯಾಯಾಧೀಶೆ ಶಾರದಾ ಕೊಪ್ಪದ ಅವರು ಶಿಕ್ಷಕಿಗೆ 3 ವರ್ಷ ಕಠಿಣ ಸಜೆ, 10 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *