Connect with us

LATEST NEWS

ಶಿಕ್ಷಕನ ಕತ್ತು ಕೊಯ್ದು ಕೊಲೆ

ಶಿಕ್ಷಕನ ಕತ್ತು ಕೊಯ್ದು ಕೊಲೆ

ಪ್ಯಾರೀಸ್, ಅಕ್ಟೋಬರ್ 17: ಫ್ರಾಫೆಟ್ ಮಹಮ್ಮದ್ ರ ವ್ಯಂಗ್ಯ ಚಿತ್ರವನ್ನು ವಿದ್ಯಾರ್ಥಿಗಳಿಗೆ ತೋರಿಸಿದರು ಎನ್ನುವ ಕ್ಷುಲ್ಲಕ ಕಾರಣಕ್ಕೆ ಶಿಕ್ಷಕನ ಕತ್ತು ಕೊಯ್ದು ಕೊಲೆ ಮಾಡಿದ ಪೈಶಾಚಿಕ ಘಟನೆ ಪ್ಯಾರೀಸ್ ನಲ್ಲಿ ನಡೆದಿದೆ.

ತರಗತಿಯಲ್ಲಿ ಇಸ್ಲಾಂ ಬಗ್ಗೆ ಪಾಠ ಮಾಡುತ್ತಿದ್ದ ಈ ಶಿಕ್ಷಕ ಫ್ರಾಫೆಟ್ ಮಹಮ್ಮದ ಬಗ್ಗೆ ಬಂದಿರುವ ವ್ಯಂಗ್ಯ ಚಿತ್ರವನ್ನು ವಿದ್ಯಾರ್ಥಿಗಳಿಗೆ ತೋರಿಸಿರುವುದೇ ಕೊಲೆಗೆ ಕಾರಣವಾಗಿದೆ.

ವ್ಯಂಗ್ಯ ಚಿತ್ರ ತೋರಿಸಿದ ಶಿಕ್ಷಕನ್ನು ಆತನ ವಿದ್ಯಾರ್ಥಿಯ ತಂದೆಯೋರ್ವ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.

ಆರೋಪಿಯನ್ನು ಬೆನ್ನಟ್ಟಿದ ಪ್ಯಾರೀಸ್ ಪೋಲೀಸರು ಆತನನ್ನು ಗುಂಡಿಕ್ಕಿ ಕೊಂದಿದ್ದಾರೆ.

ಪ್ಯಾರೀಸ್ ನಲ್ಲಿ ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ಮೂಲಭೂತವಾದಿಗಳ ಅಟ್ಟಹಾಸ ಹೆಚ್ಚಾಗುತ್ತಿದೆ.

ಚಾರ್ಲಿ ಹೆಬ್ಡೋ ಎನ್ನುವ ಪತ್ರಿಕೆ ಫ್ರಾಫೆಟ್ ಮಹಮ್ಮದ್ ರ ವ್ಯಂಗ್ಯ ಚಿತ್ರ ಪ್ರಕಟಿಸಿದ ಒಂದೇ ಕಾರಣಕ್ಕೆ ಪತ್ರಿಕೆಯ 12 ಸಿಬ್ಬಂದಿಗಳನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.

ಬಳಿಕದ ದಿನಗಳಲ್ಲಿ ಮತ್ತೆ ಪತ್ರಿಕೆ ಅದೇ ರೀತಿಯ ವ್ಯಂಗ್ಯ ಚಿತ್ರವನ್ನು ಪ್ರಕಟಿಸಿದ ಸಂದರ್ಭದಲ್ಲೂ ಪತ್ರಿಕೆಯ ಮೂವರು ಸಿಬ್ಬಂದಿಗಳ ಮೇಲೆ ಚೂರಿಯಿಂದ ಹಲ್ಲೆ ನಡೆಸಿ ಕೊಲೆ ಮಾಡುವ ಪ್ರಯತ್ನ ನಡೆದಿತ್ತು.

ಇದೀಗ ಮತ್ತೆ ಇದೇ ರೀತಿಯ ಘಟನೆ ನಡೆದಿರುವುದು ಪ್ಯಾರೀಸ್ ಸರಕಾರವನ್ನು ಚಿಂತೆಗೀಡು ಮಾಡಿದೆ.