Connect with us

    LATEST NEWS

    ಸೆಖೆ ಎಂದು ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಕೆಳಗೆ ಬಿದ್ದು ಸಾವು….!!

    ಉಡುಪಿ ಮೇ 03: ವಿಪರೀತ ಸೆಖೆ ಹಿನ್ನಲೆ ರಾತ್ರಿ ಮಲಗಲು ಮನೆಯ ಟೆರೇಸ್ ಮೆಲೆ ತೆರಳಿದ್ದ ಶಿಕ್ಷಕರೊಬ್ಬರು ಟೆರೇಸ್ ನಿಂದ ಕೆಳಗೆ ಬಿದ್ದು ಸಾವನಪ್ಪಿದ ಘಟನೆ ಅಜೆಕಾರು ಆಶ್ರಯನಗರದಲ್ಲಿ ನಡೆದಿದೆ. ಮೃತರನ್ನು ಕಾರ್ಕಳ ತಾಲೂಕಿನ ಎಣ್ಣೆ ಹೊಳೆ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿರುವ ಸುಂದರ ನಾಯ್ಕ್ ( 55) ಎಂದು ಗುರುತಿಸಲಾಗಿದೆ.


    ರಾತ್ರಿ ಸುಮಾರು 10:30 ರ ವೇಳೆಗೆ ಟೆರೇಸ್ ಮೇಲೆ ಮಲಗಲು ತೆರಳಿದ್ದರು. ಬೆಳಿಗ್ಗೆ 6:30 ವೇಳೆಗೆ ಗಮನಿಸಿದಾಗ ಟೆರೇಸ್ ಮೇಲಿಂದ ಕೆಳಗೆ ಬಿದ್ದಿರೋದು ಬೆಳಕಿಗೆ ಬಂದಿದೆ.  ಗಾಢ ನಿದ್ರೆಯಲ್ಲಿ ಆಯತಪ್ಪಿ ಟೆರೇಸ್ ಮೇಲಿಂದ ಕೆಳಗೆ ಬಿದ್ದು ಮೃತಪಟ್ಟಿರುವುದಾಗಿ ಶಂಕೆ ವ್ಯಕ್ತವಾಗಿದೆ. ಇನ್ನು ನೆಚ್ಚಿನ ಶಾಲಾ ಶಿಕ್ಷಕ ಸಾವನ್ನಪ್ಪಿದ ಸಂಗತಿ ತಿಳಿದು ವಿದ್ಯಾರ್ಥಿಗಳು ಕಣ್ಣೀರು ಸುರಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply