LATEST NEWS
ಜಿಪಿಎಸ್ ಪ್ಯಾನಿಕ್ ಬಟನ್ ಆಳವಡಿಕೆಗೆ ವಿರೋಧ-ಉಡುಪಿ ಜಿಲ್ಲಾ ಟ್ಯಾಕ್ಸಿಮನ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್ ನಿಂದ ಪ್ರತಿಭಟನೆ
ಉಡುಪಿ ಜುಲೈ 23: ಟೂರಿಸ್ಟ್ ವಾಹನಗಳಿಗೆ ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಆಳವಡಿಕೆ ಮಾಡಲು ರಾಜ್ಯ ಸರಕಾರದ ಆದೇಶಿಸಿರುವುದರ ವಿರುದ್ದ ಜಿಲ್ಲಾ ಟ್ಯಾಕ್ಸಿಮನ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲಾ ಟ್ಯಾಕ್ಸಿಮನ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್ ಅಧ್ಯಕ್ಷ ಕೆ.ರಘುಪತಿ ಭಟ್ ಮಾತನಾಡಿ, ಟ್ಯಾಾಕ್ಸಿ ಉದ್ಯಮದವರು ಒಗ್ಗಟ್ಟಾಗಿ ಇದರ ವಿರುದ್ಧ ಹೋರಾಡಿದರೆ ಯಶಸ್ಸು ಸಿಗಲಿದೆ. ಸರಕಾರ ಮನಸ್ಸು ಮಾಡಿದರೆ ಈ ಸಮಸ್ಯೆಯನ್ನು ಸುಲಭದಲ್ಲಿ ಪರಿಹಾರ ಮಾಡಬಹುದು. ಟ್ಯಾಾಕ್ಸಿಯ ಹೊಸ ವಾಹನಗಳಿಗೆ ಅಳವಡಿಕೆ ಮಾಡುವ ನಿರ್ಧಾರವನ್ನು ಸರಕಾರ ಮಾಡಬೇಕು ಎಂದರು.
ಹಳೆ ವಾಹನಗಳಿಗೆ ಇದನ್ನು ಅಳವಡಿಸುವ ಸ್ಥಿತಿಯಲ್ಲಿ ಚಾಲಕರು-ಮಾಲಕರು ಇಲ್ಲ. ಈಗಾಗಲೇ ಟ್ಯಾಕ್ಸಿ ಚಾಲಕ-ಮಾಲಕರು ಹಲವಾರು ತೆರಿಗೆಗಳನ್ನು ಪಾವತಿಸಿ ನಷ್ಟದಲ್ಲಿ ದಿನ ದೂಡುತ್ತಿದ್ದಾಾರೆ. ಬೆಂಗಳೂರಿನಂತಹ ನಗರಗಳಲ್ಲಿ ಇದು ನಡೆಯಬಹುದು. ಆದರೆ ಸೀಮಿತ ಜನಸಂಖ್ಯೆ ಇರುವ ಉಡುಪಿಯಲ್ಲಿ ಇದು ಅಸಾಧ್ಯದ ಮಾತು ಎಂದು ಹೇಳಿದರು.