Connect with us

    KARNATAKA

    ತಮಿಳುನಾಡು NTK ಅಭ್ಯರ್ಥಿ ವೀರಪ್ಪನ್ ಪುತ್ರಿಯಿಂದ ಅಪ್ಪ ನಟೋರಿಯಸ್ ಕಾಡುಗಳ್ಳ ವೀರಪ್ಪನ್ ಫೊಟೋ ಬಳಕೆ..! ವಿಡಿಯೋ ವೈರಲ್

    ಕೊಯಂಬತ್ತೂರು : ದೇಶದ್ಯಾಂತ ಲೋಕ ಸಭಾ ಚುನಾವಣೆ ಪ್ರಚಾರ ಭರದಿಂದ ಸಾಗುತ್ತಿದೆ. ಈ ಮಧ್ಯೆ ಪಕ್ಕದ ತಮಿಳುನಾಡು ಲೋಕಸಭೆ ಕ್ಷೇತ್ರ ಈ ಬಾರಿ ದೇಶದಲ್ಲೇ ಭಾರೀ ಸುದ್ದಿಯಲ್ಲಿದೆ. ಕಾರಣ ದೇಶಕಂಡ ನಟೋರಿಯಸ್ ಕಾಡುಗಳ್ಳ ವೀರಪ್ಪನ್ ಪುತ್ರಿ ವಿದ್ಯಾ ರಾಣಿ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾಳೆ.

    ಕೃಷ್ಣಗಿರಿ ಲೋಕಸಭಾ ಕ್ಷೇತ್ರದಿಂದ ತಮಿಳುನಾಡು ನ್ಯಾಷನಲಿಸ್ಟ್ ಪಾರ್ಟಿ(NTK) ಅಭ್ಯರ್ಥಿಯಾಗಿ ವಿದ್ಯಾ ರಾಣಿ ಅದೃಷ್ಟದ ಪರೀಕ್ಷೆಗಿಳಿದಿದ್ದಾರೆ. ನ್ಯಾಯವಾದಿಯಾಗಿರುವ ವಿದ್ಯಾ ರಾಣಿ 2020, ಜುಲೈನಲ್ಲಿ ಬಿಜೆಪಿ ಪಕ್ಷ ಸೇರಿದ್ದರು. ಬಳಿಕ ಅವರಿಗೆ ರಾಜ್ಯ ಬಿಜೆಪಿ ಯುವ ಘಟಕದ ಉಪಾಧ್ಯಕ್ಷೆ ಸ್ಥಾನವನ್ನೂ ನೀಡಲಾಗಿತ್ತು. ಇತ್ತೀಚೆಗೆ ನಟ-ನಿರ್ದೇಶಕ ಸೀಮನ್ ನೇತೃತ್ವದ ಎನ್ಟಿಕೆ ಪಕ್ಷವನ್ನು ಸೇರಿದ್ದಾರೆ. ಎನ್ಟಿಕೆ ಪಕ್ಷವು ತಮಿಳುನಾಡು ಮತ್ತು ಪುದುಚೆರಿ ಸೇರಿ ಒಟ್ಟು 40 ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕೆ ಇಳಿಸಿದೆ. ಕಣಕ್ಕಿಳಿದಿರುವ 40 ಅಭ್ಯರ್ಥಿಗಳಲ್ಲಿ ಬಹುತೇಕರು ವಿವಾದಿತ ಎಲ್ಟಿಟಿ ನಾಯಕ ಪ್ರಭಾಕರನ್ ಸಿದ್ಧಾಂತವನ್ನು ಒಪ್ಪಿಕೊಂಡವರು ಎಂದು ಹೇಳಲಾಗಿದೆ.

    ವಿದ್ಯಾರಾಣಿ ತನ್ನ ತಂದೆ ನಟೋರಿಯಸ್ ಕಾಡುಗಳ್ಳ ವೀರಪ್ಪನ್ ಫೋಟೊ ತನ್ನ ಕಾರಿನ ಮುಂಭಾಗ ಅಳವಡಿಸಿ ಚುನಾವಣಾ ಪ್ರಚಾರ ನಡೆಸುತ್ತಿದ್ದು  ಈ ವಿಡಿಯೋ ಸಾಮಾಜಿಕ ಜಾಲ ತಾಣಗಗಳಲ್ಲಿ ಭಾರಿ ವೈರಲ್ ಆಗಿದೆ.    ಇನ್ನು ವಿದ್ಯಾರಾಣಿ ಅವರು ಕೃಷ್ಣಗಿರಿಯಲ್ಲಿ ಮಕ್ಕಳಿಗಾಗಿ ಶಾಲೆಗಳನ್ನು ನಡೆಸುತ್ತಿದ್ದಾರೆ. ಜೊತೆಗೆ ಬೆಂಗಳೂರಿನ ಜೊತೆ ನಿಕಟ ನಂಟು ಹೊಂದಿದ್ದಾರೆ. ಇವರು ಕಾನೂನು ಪದವಿ ಪಡೆದಿರೋದು ಕೂಡ ಬೆಂಗಳೂರಲ್ಲಿಯೇ ಎಂದು ಹೇಳಲಾಗಿದೆ. ಕಾಡುಗಳ್ಳ ವೀರಪ್ಪನ್, ಮಗಳಿಗೆ ವಕೀಲ ವೃತ್ತಿ ಮತ್ತು ರಾಜಕೀಯದಲ್ಲಿ ಗುರುತಿಸಿಕೊಳ್ಳಿವಂತೆ ಸಲಹೆ ನೀಡಿದ್ದನಂತೆ. ಅದರಂತೆ ವಿದ್ಯಾ ರಾಣಿ ರಾಜಕೀಯ ಪ್ರವೇಶ ಮಾಡಿದ್ದಾರೆ.

     

    ವರದಿಗಳ ಪ್ರಕಾರ, ವಿದ್ಯಾ ರಾಣಿ ಮೂರನೇ ತರಗತಿ ಓದುತ್ತಿದ್ದಾಗ, ತಮಿಳುನಾಡು-ಕರ್ನಾಟಕ ಗಡಿಯಲ್ಲಿರುವ ಅಜ್ಜ ಗೋಪಿನಾಥಮ್ ಮನೆಯಲ್ಲಿ ವೀರಪ್ಪನ್ನನ್ನು ಭೇಟಿಯಾಗಿದ್ದರು. ಸುಮಾರು 30 ನಿಮಿಷಗಳ ಕಾಲ ಅಪ್ಪ ವೀರಪ್ಪನ್ ಮಾತನಾಡಿದ್ದ. ನನ್ನನ್ನು ಎತ್ತಿಕೊಂಡು ಹೇಳಿದ್ದ, ಏನೆಂದರೆ ನೀನು ಜನರ ಸೇವೆಯನ್ನು ಮುಂದುವರಿಸು ಎಂದಿದ್ದ. ಅದರಂತೆ ನಾನು ಈ ಹಾದಿಯಲ್ಲಿದ್ದೇನೆ ಎಂದು ಮಾಧ್ಯವೊಂದಕ್ಕೆ ಹೇಳಿಕೊಂಡಿದ್ದಾರೆ. 2004, ಅಕ್ಟೋಬರ್ 18 ರಂದು ತಮಿಳುನಾಡು ಸ್ಪೆಷಲ್ ಟಾಸ್ಕ್ ಫೋರ್ಸ್ ವೀರಪ್ಪನ್ನನ್ನು  ಎನ್ ಕೌಂಟರ್ ಮಾಡಿದೆ.

     

    Share Information
    Advertisement
    Click to comment

    You must be logged in to post a comment Login

    Leave a Reply