Connect with us

LATEST NEWS

ಮನೆಯವರ ವಿರೋಧಿಸಿ ಮದುವೆಯಾದ ಪ್ರೇಮಿಗಳನ್ನು ಮದುವೆಯಾದ ಮೂರೇ ದಿನದಲ್ಲಿ ಕತ್ತು ಕುಯ್ದು ಹತ್ಯೆ

ತಮಿಳುನಾಡು ನವೆಂಬರ್ 03: ತಮ್ಮ ಮನೆಯವರನ್ನು ವಿರೋಧಿಸಿ ಮದುವೆಯಾದ ಪ್ರೇಮಿಗಳನ್ನು ಮದುವೆಯಾದ ಮೂರು ದಿನಗಳ ನಂತರ ಕತ್ತು ಕೊಯ್ದು ಹತ್ಯೆ ಮಾಡಿದ ಘಟನೆ ಚೆನ್ನೈನಲ್ಲಿ ನಡೆದಿದೆ.


ದಂಪತಿಯನ್ನು 24 ವರ್ಷದ ವಿ ಮರಿಸೆಲ್ವಂ ಮತ್ತು 20 ವರ್ಷದ ಎಂ ಕಾರ್ತಿಗ ಎಂದು ಗುರುತಿಸಲಾಗಿದೆ. ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದು ಪರಸ್ಪರ ಪ್ರೀತಿಸುತ್ತಿದ್ದರು. ಹುಡುಗಿಯ ಮನೆಯವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದಾಗಿ ಅಕ್ಟೋಬರ್ 30ರಂದು ಮರಿಸೆಲ್ವಂ ಅವರೊಂದಿಗೆ ಎಂ ಕಾರ್ತಿಗ ಕೋವಿಲ್ಪಟ್ಟಿಗೆ ತೆರಳಿದ್ದರು. ಅದೇ ದಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹವಾಗಿದ್ದರು. ಆದರೆ ಗುರುವಾರ ಸಂಜೆ 6 ಗಂಟೆ ಸುಮಾರಿಗೆ ದಂಪತಿಯ ಮನೆಗೆ ನುಗ್ಗಿದ ಐವರ ತಂಡವೊಂದು ಇಬ್ಬರ ಕತ್ತು ಕೊಯ್ದು ಪರಾರಿಯಾಗಿದೆ.

ದಂಪತಿಯ ಹತ್ಯೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಲುಪಿದರು, ನಂತರ ಅವರ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ತೂತುಕುಡಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಎರಡು ಮೋಟಾರ್ ಬೈಕ್ ಗಳಲ್ಲಿ ದಂಪತಿಯ ಮನೆಗೆ ಆಗಮಿಸಿದ ಕನಿಷ್ಠ ಆರು ಮಂದಿ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಾಲಾಜಿ ಹಾಗೂ ಗ್ರಾಮಾಂತರ ಉಪ ಪೊಲೀಸ್ ವರಿಷ್ಠಾಧಿಕಾರಿ ಸುರೇಶ್ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು. ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ

Share Information
Advertisement
Click to comment

You must be logged in to post a comment Login

Leave a Reply