Connect with us

    LATEST NEWS

    ಗುರುಪುರ ಕಂದಾವರದಲ್ಲಿ ತಲವಾರು ದಾಳಿ ನಡೆಸಿ ಜಮಾಅತಿನ ಮಾಜಿ ಅಧ್ಯಕ್ಷರ ಕೊಲೆಗೆ ಯತ್ನ

    ಮಂಗಳೂರು ನವೆಂಬರ್ 16: ಗುರುಪುರ ಕಂದಾವರದಲ್ಲಿ ತಲವಾರು ದಾಳಿ ನಡೆಸಿ ಜಮಾಅತಿನ ಮಾಜಿ ಅಧ್ಯಕ್ಷರ ಕೊಲೆಗೆ ಯತ್ನಿಸಿದ ಘಟನೆ ‌ ರವಿವಾರ ರಾತ್ರಿ ಸುಮಾರು 10:30 ಗಂಟೆಗೆ ನಡೆದಿದೆ.


    ಭಾನುವಾರ ರಾತ್ರಿ 10.30ರ ಸುಮಾರಿಗೆ ಕಂದಾವರ ಮಸೀದಿ ಬಳಿ ನಡೆದುಕೊಂಡು ಹೋಗುತ್ತಿದ್ದ ಜನಾಬ್‌ ಅಬ್ದುಲ್‌ ಅಝೀಝ್‌ ವೆನ್ಫ್‌ ಎಂಬವರ ಕೊಲೆಗೆ ದುಷ್ಕರ್ಮಿಗಳಿಬ್ಬರು ಯತ್ನಿಸಿದ್ದಾರೆ. ಗುರುಪುರ ಕೈಕಂಬ ಸುನ್ನೀ ಸಂಘ ಕುಟುಂಬದ ಪ್ರಮುಖ ಉಮರಾ ನಾಯಕರೂ , ಅಲ್ ಮಸ್ಜಿದುಲ್ ಬದ್ರಿಯಾ ಕಂದಾವರ ಜಮಾಅತಿನ ಮಾಜಿ ಅಧ್ಯಕ್ಷರೂ, ಆದ ಜನಾಬ್ ಅಬ್ದುಲ್ ಅಝೀಝ್ ವೆನ್ಝ್ ಇವರನ್ನು ದುಷ್ಕರ್ಮಿಗಳು ಹತ್ಯೆ ಗೈಯ್ಯಲು ಯತ್ನಿಸಿದ್ದು ಗಂಭೀರಾವಸ್ಥೆಯಲ್ಲಿದ್ದ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಈ ದಾಳಿಯು ವೈಯಕ್ತಿಕ ದ್ವೇಷದಿಂದ ನಡೆದಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.


    ನಿನ್ನೆ ರಾತ್ರಿ ಇಬ್ಬರು ದುಷ್ಕರ್ಮಿಗಳು ಅಝೀಝ್ ಅವರನ್ನು ಹಿಂಬಾಲಿಸಿಕೊಂಡು ಮಾರಕಾಸ್ತ್ರಗಳಿಂದ ಅವರ ಕಾಲಿಗೆ ಕಡಿದು ಪರಾರಿಯಾಗಿದ್ದಾರೆ. ಈ ದೃಶ್ಯಗಳು ಅಲ್ಲಿ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ದಾಖಲಾಗಿದ್ದು, ಬಜಪೆ ಠಾಣಾ ಪೊಲೀಸರು ಸಿಸಿಟಿವಿ ಫೂಟೇಜ್‌ ಆಧಾರದಲ್ಲಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *