LATEST NEWS
ರೈ ಅವರನ್ನು ಚುನಾವಣೆ ಸೋಲಿಸಿ ಮನೆಯಲ್ಲಿ ನಿದ್ರಿಸಲು ಕಳುಹಿಸಿದ್ದಾರೆ ಜನ – ನಳಿನ್ ಕುಮಾರ್ ಕಟೀಲ್

ರೈ ಅವರನ್ನು ಚುನಾವಣೆ ಸೋಲಿಸಿ ಮನೆಯಲ್ಲಿ ನಿದ್ರಿಸಲು ಕಳುಹಿಸಿದ್ದಾರೆ ಜನ – ನಳಿನ್ ಕುಮಾರ್ ಕಟೀಲ್
ಮಂಗಳೂರು ಜುಲೈ 02: ಮಾಜಿ ಸಚಿವ ರಮಾನಾಥ ರೈ ಅವರ ಸೊಂಬೇರಿ ಹೇಳಿಕೆಗೆ ಸಂಸದ ನಳಿನ್ ಕುಮಾರ್ ತಿರುಗೇಟು ನೀಡಿದ್ದಾರೆ. ರಾಜ್ಯದ ಜನರಿಗೆ ಅದರಲ್ಲೂ ದಕ್ಷಿಣಕನ್ನಡದವರಿಗೆ ಯಾರು ಸೊಂಬೇರಿ ಎನ್ನುವುದು ತಿಳಿದಿದೆ ಎಂದು ಹೇಳಿದ ಅವರು, ಅದಕ್ಕಾಗಿಯೇ ಕಳೆದ ಚುನಾವಣೆಯಲ್ಲಿ ರೈ ಅವರನ್ನು ಸೋಲಿಸಿ ಮನೆಯಲ್ಲಿ ನಿದ್ರಿಸಲು ಕಳುಹಿಸಿದ್ದಾರೆ ಎಂದು ತಿರುಗೇಟು ನೀಡಿದರು.
ಸಚಿವ ಸ್ಥಾನವನ್ನು ನಿಭಾಯಿಸಲಾಗದ ಅರಣ್ಯ ಸಚಿವರನ್ನು ಚುನಾವಣೆಯಲ್ಲಿ ಸೋಲಿಸಿ ಜನರು ಅವರನ್ನ ಕಾಡಿಗೆ ಕಳುಹಿಸಿದ್ದಾರೆ ಎಂದು ಅವರು ವ್ಯಂಗ್ಯ ವಾಡಿದರು. ರಮಾನಾಥ್ ರೈ ಗಳ ಆರೋಪಗಳಿಗೆ ನಾನು ಕಿವಿಗೊಡಲ್ಲ. ಕಳೆದ 30 ವರ್ಷಗಳಲ್ಲಿ ತಾನು ಸಚಿವನಾಗಿದ್ದೇ ಎನ್ನುವುದು ಅವರ ಸಾಧನೆ. ಏನೂ ಕೆಲಸ ಇಲ್ಲದವರು ಈ ರೀತಿ ಹೇಳಿಕೆ ನೀಡುತ್ತಾರೆ . ಇನ್ನೊಂದು ಅದ್ಬುತ ವಿಚಾರ ಅಂದರೆ ಪ್ರಪಂಚದ ಎಲ್ಲಾ ವಿಷಯದಲ್ಲಿ ರಮಾನಾಥ ರೈ ಸರ್ವಜ್ಞ ಎಂದು ಅವರು ವ್ಯಂಗ್ಯ ವಾಡಿದರು.
