Connect with us

BANTWAL

ಅಕ್ರಮ ಗೋ ಹತ್ಯೆ ವಿರುದ್ದ ಕಠಿಣ ಕ್ರಮಕ್ಕೆ ಹಿಂದೂ ಸಂಘಟನೆಗಳ ಆಗ್ರಹ

ಅಕ್ರಮ ಗೋ ಹತ್ಯೆ ವಿರುದ್ದ ಕಠಿಣ ಕ್ರಮಕ್ಕೆ ಹಿಂದೂ ಸಂಘಟನೆಗಳ ಆಗ್ರಹ

ಬಂಟ್ವಾಳ ಮೇ.22: ಬಂಟ್ವಾಳ ತಾಲೂಕಿನ ವಿವಿಧ ಕಡೆಗಳಲ್ಲಿ ಅಕ್ರಮವಾಗಿ ಗೋವುಗಳನ್ನು ಕಳವು ನಡೆಸಿ ಹತ್ಯೆ ಮಾಡುತ್ತಿರುವುದು ಅವ್ಯಾಹತವಾಗಿ ನಡೆಯುತ್ತಿರುವುದು ಖಂಡನೀಯ ಈ ಬಗ್ಗೆ ತನಿಖೆ ನಡೆಸಿ ಅಂತಹವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಲು ವಿಶ್ವ ಹಿಂದೂ ಪರಿಷತ್ ಬಜರಂಗದಳ ಬಂಟ್ವಾಳ ಪ್ರಖಂಡ ಬಂಟ್ವಾಳ ನಗರ ಠಾಣಾ ಎಸ್.ಐ.ಅವಿನಾಶ್ ಹಾಗೂ ಬಂಟ್ವಾಳ ಗ್ರಾಮಾಂತರ ಠಾಣಾ ಎಸ್. ಐ.ಪ್ರಸನ್ನ ಅವರಿಗೆ ಮನವಿ ಮಾಡಿದರು.

ಕಳೆದ ವಾರ ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ಕೂಟೇಲು ಎಂಬಲ್ಲಿ ಗೋ ಹತ್ಯೆ ಮಾಡಿ ಅದರ ತ್ಯಾಜ್ಯ ನದಿಗೆ ಎಸೆದಿದ್ದರು ಬಳಿಕ ಅಮ್ಟಾಡಿ ಗ್ರಾಮದ ಲೋರೆಟ್ಟೋಪದವು ಎಂಬಲ್ಲಿ ಅನಧಿಕೃತ ಕಸಾಯಿಕಾನೆ ನಡೆಸುತ್ತಿರುವುದರ ಬಗ್ಗೆ ಪ್ರಕರಣ ದಾಖಲಾಗಿದೆ.

ಹಾಗಾಗಿ ಇದೇ ರೀತಿ ತಾಲೂಕಿನ ಅನೇಕ ಕಡೆಗಳಲ್ಲಿ ಗಮನಕ್ಕೆ ಬರದೆ ಅಕ್ರಮವಾಗಿ ದನಗಳನ್ನು ಹತ್ಯೆ ಮಾಡುತ್ತಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಗೋವುಗಳನ್ನು ಕದ್ದು ಹತ್ಯೆ ಮಾಡುವುದರಿಂದ ಸಮಾಜದಲ್ಲಿ ಅಶಾಂತಿ ಯ ವಾತಾವರಣ ನಿರ್ಮಾಣವಾಗಬಹುದು ಅದಕ್ಕೆ ಅವಕಾಶ ಸಿಗದ ರೀತಿಯ ಲ್ಲಿ ಬಂಟ್ವಾಳ ಪೋಲೀಸರು ಕಾರ್ಯೋನ್ಮುಖರಾಗಬೇಕೆಂದು ಪೋಲೀಸರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *