FILM
ವಿಟಮಿನ್ ಇದೆ ಎಂದು ಸೊರೆಕಾಯಿ ಜ್ಯೂಸ್ ಕುಡಿದ ನಟಿ ಐಸಿಯುನಲ್ಲಿ…!!

ಮುಂಬೈ : ವಿಟಮಿನ್ ಜಾಸ್ತಿ ಸಿಗುತ್ತದೆ ಎಂದು ಸೋರೆಕಾಯಿ ಜ್ಯೂಸ್ ಕುಡಿದ ನಟಿ ಕೊನೆಗೆ ಐಸಿಯುಗೆ ದಾಖಲಾಗಿದ್ದಾಳೆ. ಬರಹಗಾರ್ತಿ, ನಟಿ ಮತ್ತು ಸಿನಿಮಾ ನಿರ್ಮಾಪಕಿ ತಾಹಿರಾ ಕಶ್ಯಪ್ ಸೊರೆಕಾಯಿ ಕುಡಿಯುವುದರಿಂದ ದೇಹಕ್ಕೆ ಅತಿ ಹೆಚ್ಚು ವಿಟಮಿನ್ ಸಿಗುತ್ತದೆ. ಅಲ್ಲದೆ ನಾನು ಹೆಚ್ಚಾಗಿ ಕುಡಿಯುತ್ತೇನೆ ಎಂದು ಈ ಮೊದಲು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದರು,. ಆದರೆ ಇದೀಗ ಸೊರೆಕಾಯಿ ಜ್ಯೂಸ್ ಕುಡಿದು ಆಸ್ಪತ್ರೆಗೆ ದಾಖಲಾಗಿದ್ದು, ಅವರು ಜನರಿಗಾಗಿ ಈ ವಿಷಯವನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಜ್ಯೂಸ್ ತಮಗೆ ಹೇಗೆ ವಿಷವಾಯ್ತು ಎಂದು ವಿವರಿಸಿದ್ದಾರೆ.
ಪ್ರತಿದಿನ ಅರಶಿನ ಮತ್ತು ಆಮ್ಲಾದೊಂದಿಗೆ ಸೋರೆಕಾಯಿಯ ಜ್ಯೂಸ್ ಕುಡಿಯುತ್ತಿದ್ದೇನೆ. ಇದು ತುಂಬಾ ಒಳ್ಳೆಯದು ಕೂಡ. ಆದರೆ ಒಂದೇ ಒಂದು ಎಡವಟ್ಟಿನಿಂದ ನನಗೆ ಹೀಗೆ ಆಯಿತು. ಈ ಬಾರಿ ಸೇವಿಸಿದಾಗ ನನಗೆ 17 ಬಾರಿ ವಾಂತಿಯಾಯಿತು. ರಕ್ತ ಪರೀಕ್ಷೆ ಮಾಡಿಸಿದಾಗ ರಕ್ತದೊತ್ತಡ 40 ಕ್ಕೆ ಇಳಿದಿತ್ತು. ನಂತರ ವೈದ್ಯರಿಗೆ ವಿಷಯ ತಿಳಿಸಿದಾಗ ಈ ರೀತಿ ನೀವು ಜ್ಯೂಸ್ ಕುಡಿದದ್ದು ಸೆನೈಡ್‌ಗೆ ಸಮ ಎಂದರು. ಇದರಿಂದ ನಾನು ಗಾಬರಿಯಾದೆ.

ಸೋರೆಕಾಯಿ ಜ್ಯೂಸ್‌ನಲ್ಲಿ ವಿಟಮಿನ್ ಇರುವುದು ಹಾಗೂ ಇದರ ಸೇವನೆಯಿಂದ ತೂಕ ಇಳಿಯುವುದು ಎಲ್ಲವೂ ನಿಜ. ಆದರೆ ಒಂದೇ ಒಂದು ಮಾತನ್ನು ನೆನಪಿಟ್ಟುಕೊಳ್ಳಬೇಕು. ಅದೇನೆಂದರೆ, ಸೋರೆಕಾಯಿಯನ್ನು ಮೊದಲು ತಿಂದು ನೋಡಬೇಕು. ಇದು ತುಂಬಾ ಕಹಿಯಾಗಿದ್ದರೆ ದಯವಿಟ್ಟು ಯಾವುದೋ ಕಾರಣಕ್ಕೂ ಅದರ ಜ್ಯೂಸ್ ಮಾಡುವ ಸಾಹಸ ಮಾಡಬೇಡಿ. ಏಕೆಂದರೆ ಕಹಿ ಸೋರೆಕಾಯಿ ಜ್ಯೂಸ್ ಕುಡಿಯುವುದು ವಿಷಕ್ಕೆ ಸಮ.
ಇದು ಗೊತ್ತಿಲ್ಲದೇ ನಾನು ಕುಡಿದಿದ್ದೆ. ವಾಂತಿಯಿಂದ ಎರಡು ದಿನ ಐಸಿಯುನಲ್ಲಿ ಇರಬೇಕಾಯಿತು. ಈ ರೀತಿ ಕಹಿ ಸೋರೆಕಾಯಿಯ ಜ್ಯೂಸ್ ಕುಡಿಯುವುದರಿಂದ ಬಹುತೇಕರು ಅನಾರೋಗ್ಯಪೀಡಿತರಾಗಿದ್ದಾರೆ ಎಂದಿರುವ ನಟಿ, ಈ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದ್ದಾರೆ.