ವಿಪರ್ಯಾಸ ಸರತಿ ಸಾಲಿನ ಕೊನೆಯೇ ಕಾಣುತ್ತಿಲ್ಲ. ಆರಂಭದ ಮುಂದಿರುವ ಬಾಗಿಲಿನಲ್ಲಿ ತೂಗುಹಾಕಿದ ಪಲಕ ಹೇಳುತ್ತಿದೆ,ಡಾ. ನಂದೀಶ್ ,ಬೆಳಗ್ಗೆ 8ರಿಂದ ರಾತ್ರಿ 8.ಪ್ರಸಿಧ್ದಿ ಊರಿನ ಪರಿಧಿ ದಾಟಿ ಜಿಲ್ಲೆಗಳ ಗಡಿಯನ್ನು ಮೀರಿದೆ. ನಾಡಿಮಿಡಿತದಿಂದ ದೇಹದೊಳಗಿನ ಸಣ್ಣ ಅಲುಗಾಟವನ್ನು...
ನರಕ ನಂದನೂರನ್ನು ದಾಟಿದ ಮೇಲೆ ಸಿಗುವುದೇ ನರಕ. ನಂದನೂರು ಬಿಸಿಲಿನ ತಾಣ. ಬಿಸಿಯನ್ನು ಅನುಭವಿಸಿ ಮುಂದುವರೆದಾಗ ನಾವು ನರಕವನ್ನು ತಲುಪಬಹುದು. ಹೌದು ಇದೇ ನರಕವೇ. ಮಳೆಬಿದ್ದ ನೀರು ಎಲ್ಲೋ ವ್ಯರ್ಥವಾಗಿ ಹರಿಯುವುದಿಲ್ಲ. ಮರಗಳ ಬೃಹದಾಕಾರವಾಗಿ ನೆಲೆಯೂರಿದ್ದಾವೆ....
ಸ್ಪರ್ಧೆ ಇದು ನನ್ನ ನೇರ ಪ್ರಶ್ನೆ. ಕೆಲವರು ಮಾಡುತ್ತಿರುವುದು ಸರಿಯಾ?. ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ ಒಪ್ಪಿಕೊಳ್ಳುತ್ತೇನೆ. ಅದ್ಯಾಕೆ ದೇವರನ್ನು ಸ್ಪರ್ಧೆಗೆ ಒಡ್ಡುತ್ತಿದ್ದೇವೆ?. ಮುಗ್ಧತೆಯನ್ನು ಹೊತ್ತು ಓಡಾಡುತ್ತಿರುವ ಕಂದಮ್ಮಗಳ ನಡುವೆ ಸ್ಪರ್ಧೆಯನ್ನು ಯಾಕೆ ಸೃಷ್ಟಿಸಿದ್ದೇವೆ. ಪಿಳಿ ಪಿಳಿ...
ಹೆಜ್ಜೆ ಡಣ್… ಅದರ ನಾದ ಕೆಲ ಕ್ಷಣದವರೆಗೂ ಸುತ್ತಲೂ ತುಂಬಿತ್ತು.ನಾನು ಕೈಮುಗಿದು ನಿಂತು ಮನಸ್ಸಲ್ಲಿ ಮಾತನಾಡುತ್ತಿದ್ದೆ. ಅಲ್ಲಿ ಬಂದಿರೋ ಹೆಚ್ಚಿನವರೆಲ್ಲ ಕೈಮುಗಿದು ಜೋರು ಸ್ವರ ಮಾಡಿ ಮಾತನಾಡುತ್ತಿದ್ದರು. ದುಃಖವನ್ನು ತೊಡುತ್ತಿದ್ದರು. ಪ್ರಾರ್ಥನೆಯನ್ನ ಮನಸ್ಸಲ್ಲಿ ಕೇಳಿ ತಿರುಗಿ...
ಸ್ವಾತಂತ್ರ್ಯ ಮೇಲೇರಿದ ತಿರಂಗ ಪದರಗಳನ್ನು ಕಳಚಿ ಗಾಳಿಯೊಂದಿಗೆ ಗುದ್ದಾಡಿ ಹಾರಾಡಿತು. ಅದರೊಳಗಿಂದ ಉದುರಿದ ಹೂವಿನ ಎಸಳುಗಳು ಸ್ವಾತಂತ್ರ್ಯದ ಪ್ರತೀಕವನ್ನು ತನ್ನೊಂದಿಗೆ ಹೊತ್ತು ಸುತ್ತಲೂ ಚದುರಿತು, ಭೂಮಿಗೂ ತಿಳಿಸಲು ಧಾವಿಸಿದವು. ಎಲ್ಲರ ಕೈಗಳು ಹೆಮ್ಮೆಯ ನಮಸ್ಕಾರವನ್ನು ಅರ್ಪಿಸಿ...
ನೆರಳಿನಾಟ ನಾವೆಲ್ಲ ನೋಡಿರದ ಊರಿದು. ಇಲ್ಲಿಯ ಒಂದೆರಡು ಮಾಹಿತಿಯನ್ನ ಬಲ್ಲಮೂಲಗಳಿಂದ ಪಡೆದು ನಿಮಗೆ ದಾಟಿಸುತ್ತಿದ್ದೇನೆ .ಅಲ್ಲೊಂದು ಮಂದಬೆಳಕಿನ ಕೋಣೆಯೊಂದರಲ್ಲಿ ಚರ್ಚೆ ಆರಂಭವಾಗಿದೆ .ಅದರೊಳಗೆ ಊಟ ತಿಂಡಿಗೆ ವ್ಯವಸ್ಥೆಯೂ ಇದೆ. ಇದು ಮುಂದಿನ ಹಾದಿಯನ್ನು ನಿಭಾಯಿಸುವ ಮಾತುಕತೆ...
ಕರುವಿನ ಸ್ವಗತ ಅಮ್ಮ ನನ್ನವಳು ,ನನ್ನವಳು ಮಾತ್ರಾ. ಅವಳ ಮೇಲೆ ಹಕ್ಕು ಚಲಾಯಿಸಲು ನೀನ್ಯಾರು?. ನೀನು ಏನೋ ತಂದು ಹಾಕ್ತೀಯಾ ಅಂದ ಮಾತ್ರಕ್ಕೆ ಅಧಿಕಾರ ಚಲಾಯಿಸುವುದು ತಪ್ಪು. ನಾನು ಅವಳ ಹೊಟ್ಟೆ ಒಳಗೆ ಇರುವಾಗ ತುಂಬಾ...
ಸಂಸಾರಿ? ಅವಳು ಜೀವ ನೀಡುವವಳು. ಜೀವವೊಂದನ್ನು ಉದರದೊಳಗೆ ಪೋಷಿಸಲಾರಂಬಿಸುವಾಗ ನಾನು ಜೊತೆಗಿರಬೇಕು. ಅವಳ ಬಯಕೆಗಳು ಏನು ಎಂಬುದು ನನಗೆ ತಿಳಿಯಬೇಕಾದರೆ ನಾನು ಅವಳ ಕೈ ಹಿಡಿದಾಗಿನಿಂದ ಅವಳನ್ನ ಅರ್ಥೈಸಿಕೊಂಡಿರಬೇಕು. ಅವಳ ಮನಸ್ಸಿನ ಆಳ ಸಿಗುವುದು ಕಷ್ಟವಾದರೂ...
ಉತ್ತೀರ್ಣ ಅಲ್ಲಿ ಘೋಷಣೆಯಾಗಿದೆ .”ಎಲ್ಲರನ್ನು ಮುಂದಿನ ಮೆಟ್ಟಿಲಿಗೆ ವರ್ಗಾಯಿಸಿ” ಶಾಲೆಯ ಅಧ್ಯಾಪಕರು ದಾಟಿಸಿದರು. ಈಗ ಶಿಕ್ಷಕರು ಮಾತನಾಡುತ್ತಿದ್ದಾರೆ “ಅಲ್ಲಾ ನೀವು ಹೇಳಿದ್ದಕ್ಕೆ ನಾವು ದಾಟಿಸಿದ್ದೇವೆ. ಹೀಗೆ ದಾಟಿದವರಲ್ಲಿ ಎಷ್ಟು ಜನ ಅಲ್ಲಿ ನಿಲ್ಲಲು ಅರ್ಹರಾಗಿದ್ದಾರೆ. ಮತ್ತೆ...
ಪದಕ ಚಿನ್ನ, ಬೆಳ್ಳಿ ,ಕಂಚುಗಳು ಬೇರೆಬೇರೆಯಾಗಿ ಕರಗುತ್ತಿವೆ .ಅಲ್ಲೇ ಮೂಲೆಯಲ್ಲಿ ಕಬ್ಬಿಣವೂ ಕೂಡ ಕಾದು ನೀರಾಗುತ್ತಿದೆ. ಇವೆಲ್ಲವನ್ನು ತಾಳಿಕೊಳ್ಳಲೇ ಬೇಕು. ಬಿಸಿಯನ್ನು ಅರ್ಧದಲ್ಲಿ ನಿಲ್ಲಿಸುವ ಹಾಗಿಲ್ಲ. ಘನವು ದ್ರವವಾಗಲೇ ಬೇಕು ಯಾಕೆಂದರೆ ರೂಪ ಪಡೆದುಕೊಳ್ಳಲು. ಅವುಗಳಿಗೂ...