ಎಷ್ಟು ಸಮಂಜಸ ಈ ಮುಳ್ಳು ಸಂತಸವನ್ನು ನೀಡುತ್ತದೆ, ನೋವನ್ನು ನೀಡುತ್ತಿದೆ. ಇಲ್ಲಿ ಬದುಕು ಕ್ಷಣದ ಲೆಕ್ಕದಲ್ಲಿ ಬಿಕರಿಯಾಗುತ್ತದೆ. ನಿಂತರೆ ಕಲ್ಲಾಗುವ ಕಾರಣ ಚಲಿಸುತ್ತಲೇ ಇರಬೇಕಾಗಿದೆ, ಹೀಗೆ ಪಾದ ಸವಿಸಿ ನಿಲ್ದಾಣವೊಂದರಲ್ಲಿ ಸದ್ಯಕ್ಕೆ ನಿಂತಿದ್ದಾನೆ ಭಾರ್ಗವ. ಅವನು...
ಉರುಳಿದ ಮರ ಇದ್ದ ಬಲವನ್ನೆಲ್ಲಾ ಪ್ರಯೋಗಿಸಿ ಬೇರನ್ನರಳಿಸಲು ಶಕ್ತಿ ತುಂಬಿದರು ,ನನ್ನಿಂದ ಸಾಧ್ಯವಾಗುತ್ತಿಲ್ಲ. ನನ್ನೊಳಗಿನ ಜೀವರಾಶಿಗಳಿಗೆ ಕ್ಷಮೆಯಾಚಿಸುತ್ತಾ ಉರುಳುತ್ತಿದ್ದೇನೆ. ಎನ್ನುತ್ತಾ ಆ ಮರ ಧರೆಗುರುಳಿತು ಮರದ ಯಾತನೆ ಭೂಮಿಗರಿವಾದ್ದರಿಂದ ತನ್ನ ಕಂಪನವನ್ನು ತಡೆದು ಮಡಿಲನ್ನ ನೀಡಿತು....
ಬಣ್ಣ ಅಲ್ಲಿ ಬಣ್ಣಗಳು ಮಾತನಾಡುತ್ತವೆ. ಅಲ್ಲಿಗೆ ಬಂದವರು ಮೌನದ ಕಾಲ್ನಡಿಗೆ ನಡೆಸುತ್ತಾರೆ. ನಮ್ಮೊಳಗಿನ ಯೋಚನೆಗೊಂದು ಕೆಲಸ ಕೊಡಿಸಬೇಕಾದರೆ ಇದರೊಳಗೆ ಕಾಲಿಡಲೇಬೇಕು. ಆ ಮೂಲೆಯಲ್ಲಿ ನೆರಳಿನ ನಡುವೆ ಕುಳಿತಿದ್ದಾನೆ ಅವನು. ಆತನ ಕಣ್ಣೊಳಗೆ ಬಣ್ಣಗಳು ಪ್ರತಿಫಲಿಸಿ ಹೊಮ್ಮುತ್ತಿವೆ....
ಕಾಡಳುತ್ತಿದೆ ಕಾಡಳುತಿದೆ?. ರೋದನೆಯ ಕಂಪನ ನಾಡಿನ ವಿವೇಚಕರ ಕಿವಿಯೊಳಗೆ ಕೇಳಿಸದಿರುವುದು ವಿಪರ್ಯಾಸ .ತನ್ನನ್ನ ತಾನು ಉಳಿಸಿಕೊಳ್ಳಲಾಗದೆ ಇರೋದಕ್ಕೆ ವ್ಯಥೆ ಪಡುತ್ತಿದೆ. ತನಗೆ ಚಲಿಸಕ್ಕಾಗದೇ ಇರೋದು ಈಗ ಶಾಪವೆಂದೆನಿಸಿದೆ. “ಮನುಷ್ಯ ಮೃಗ”ಗಳನ್ನು ತೊರೆದು ದೂರ ಚಲಿಸಬೇಕೆಂದು ಯೋಚಿಸುತ್ತಿದೆ...
ಸಂತೆ ಇಲ್ಲೊಂದು ಸಂತೆ ಇದೆ .ಆದರೆ ಇದು ವಾರ, ದಿನಗಳಿಗೆ ಸೀಮಿತವಾದದ್ದಲ್ಲ. ಕ್ಷಣ ಕ್ಷಣದ ಸಂತೆ. ನೆರಳು ಬಿಸಿಲಿನ ಭೇದಭಾವವಿಲ್ಲದೆ ಮಾರಾಟವಾಗುತ್ತಿದೆ ವಸ್ತುಗಳು. ಇಲ್ಲಿ ಖರೀದಿಸುವರು ಮಾತ್ರ ಇದ್ದಾರೆ, ಮಾರಾಟಗಾರನಿಲ್ಲ. ನಾವು ಖರೀದಿಸುವ ವಸ್ತುಗಳ ಬೆಲೆ...
ಮೌನವೇ ಮೌನ ತಾಳಿದ ಹೊತ್ತು. ನಿಶೆಯೊಂದಿಗೆ ತಾರೆಗಳು ಆಗಸದಲ್ಲಿ ಆಟವಾಡುತ್ತಿರುವ ಸಮಯ, ಬಿಸಿಯಾಗಿದ್ದ ರಸ್ತೆ ಉಸಿರೆಳೆದುಕೊಂಡು ನೆಮ್ಮದಿಯ ನಿದ್ರೆಯಲ್ಲಿತ್ತು. ಪಾದಾಚಾರಿ ರಸ್ತೆಗೆ ತಲೆ ಒರಗಿಸಿದ ಡಾಂಬಾರಿಗೆ ನಿದ್ದೆಯ ಮಂಪರು ಆವರಿಸಿತ್ತು. ಆದರೆ ಅಲ್ಲೇ ಪಕ್ಕದ ಗುಡಿಸಲೊಳಗೆ...
ಭಯದ ಸಾವು ಮುಗಿಲಿನ ಬಿರುಕು ದೊಡ್ಡದಿತ್ತೋ ಏನೋ ನೀರು ಧಾರಾಕಾರವಾಗಿ ಹರಿಯುತ್ತಿತ್ತು. ಊರಿನಲ್ಲಿ ಛಾವಣಿಯಂತಿರುವ ಮರಗಳೆಡೆಯಿಂದ ಭೂಮಿನ ಸೀಳುವಷ್ಟು ರಭಸವಾಗಿತ್ತು. ಸೇತುವೆ ಅಡಿಯಲ್ಲಿದ್ದ ನೀರು ಮೇಲೇರಿತು. ಕೆಳಗಿರೋ ಊರಿನ ಜನ ಮೇಲೇರಿದರು .ಆ ರಸ್ತೆಯಲ್ಲಿ ನೀರು...
ಕತೆಯೊಳಗೆ ಬಂದವ ಟಿಕೆಟ್ ಟಿಕೆಟ್ ಬಸ್ಸಿನ ಕೊನೆಯಲ್ಲಿ ಕಂಡೆಕ್ಟರ್ ಕೂಗುತ್ತಿದ್ದ. ನಾನು ಸುಖಾಸೀನನಾಗಿದ್ದೆ. ಡ್ರೈವರ್ ಜೊತೆಯಾದ ಮಾತುಕತೆ ನನ್ನ ಗಮ್ಯ ತಲುಪುವವರೆಗೂ ನಡೆಯುತ್ತದೆ. ಇದು ನನ್ನ ದಿನಚರಿ. ಉದ್ಯಾವರದ ತಿರುವು ದಾಟಿದ ಕೂಡಲೇ ಎಡಬದಿಯ ಮಾರ್ಗ...
ನನ್ನಮ್ಮ ಅವರು ನನ್ನಮ್ಮ. ಆಯುತ್ತಾರೆ, ಉಜ್ಜುತ್ತಾರೆ, ಒರೆಸುತ್ತಾರೆ. ಅವರ ಮುಖ ಅಸಹ್ಯದಿಂದ ಕಿವುಚಿಕೊಂಡಿಲ್ಲ. ಗಲೀಜು ಎಂದು ದೂರ ಸರಿದಿಲ್ಲ. ಅದೊಂದು ದಪ್ಪದ ಬಟ್ಟೆ. ಸೀರೆ ಮೇಲೆ ಹಾಕಿಕೊಳ್ಳುತ್ತಾರೆ. ಪೊರಕೆ ಹಿಡಿದು ಹೆಜ್ಜೆ ಹಾಕುತ್ತಾರೆ. ಎಲೆ-ಅಡಿಕೆ ತಿಂದು...
ವೇಷ ಕುದಿಯುತ್ತಿದೆ ದೇಹ .ಬಿಸಿಗೆ ಮೈಯ್ಯೊಳಗಿನ ನೀರ ಬಿಂದುಗಳು ತೆರೆದು ಹೊರಬಂದು ಧಾರೆಯಾಗಿ ಹರಿಯುತ್ತಿದೆ. ಚಳಿಗೆ ಪಾದದಡಿ ಬಿಟ್ಟ ಬಿರುಕುಗಳಿಂದ ನೆತ್ತರಿಣುಕಿದೆ. ಕುಣಿಯದಿದ್ದರೆ ಕಾಸಿಲ್ಲ. ಧರಿಸಿರೋ ಗೊಂಬೆಯ ಬಟ್ಟೆ ಬಣ್ಣದಿಂದ ಮಿನುಗಿದೆ, ಮಂದಹಾಸ ಬೀರುತ್ತಿದೆ ಗೊಂಬೆಯ...