ಕಣ್ಣೀರು ಕಣ್ಣೀರಿನ ಹನಿಗಳು ಜೋಡಣೆಯಾಗಿ ಕೆನ್ನೆಯ ಮೇಲೆ ಮಾಲೆಗಳಾಗಿ ಇಳಿಯುತ್ತಿದೆ .ಇದು ಯಾವಾಗಲೂ ಒಮ್ಮೆ ಬರುವುದಾದರೆ ಪರವಾಗಿಲ್ಲ ,ದಿನವೂ ಅದೇ ದಿನಚರಿ ಆಗಿದೆ. ಅವಳ ಬದುಕಿನ ಹಳಿತಪ್ಪಿದೆಯೋ ಅಥವಾ ಗುರಿ ದೂರವಿದ್ದು ತಲುಪುವ ಸಮಯ ನಿಧಾನವಾಗಿದೆಯೋ...
ಕಂಬಿಯ ಹಿಂದೆ ಅವನು ಗೀಚುತ್ತಿದ್ದ ವರ್ಣ ರೇಖೆಗಳಲ್ಲಿ ಗೂಡಾರ್ಥವಿತ್ತೆಂದು ಅರಿವಾಗಬೇಕಾದರೆ ಅವನ ಜೀವನದ ಯಾತ್ರೆಯಲ್ಲಿ ನೀವು ಪಯಣಿಗರಾಗಲೇಬೇಕು. ಅವನ ಚಿತ್ರಗಳು ಮೂಲಭೂತವಾಗಿ ಹೇಳುತ್ತಿದ್ದ ಮಾತುಗಳೆಂದರೆ “ಕಂಬಿಯ ಹಿಂದೆ ಒಂದು ಬದುಕಿದೆ” ಆ ಬಂಧನದ ನಡುವೆ ಅರಳುವ...
ಪರಾಶಕ್ತ ದೈನಂದಿನ ಬದುಕಿನ ಅಗತ್ಯಗಳಲ್ಲಿ ನಮ್ಮ ನಡುವೆ ನಮ್ಮಗಳ ಹಾಗೆ ಬದುಕಿದ್ದ ದೈವ-ದೇವರುಗಳು ತಮ್ಮ ರೂಪವನ್ನು ಬದಲಿಸಿಕೊಂಡಿದ್ದಾರೆ. ಇದು ರಮೇಶನ ನೋವಿನ ಕತೆ. ರಮೇಶ ಬ್ಯಾಂಕ್ ಉದ್ಯೋಗಿ, ಬೆಳಗಿನಿಂದ ಸಂಜೆಯವರೆಗೆ ಬರಿಯ ದುಡ್ಡು ಎಣಿಸುವಿಕೆಯ ನಡುವೆ...
ಚಂದಿರ ಖಾರ ಬಿಸಿಲಿಗೆ ಮೈಯೊಡ್ಡಿ ನೆರಳಿನ ಆಶ್ರಯ ಪಡೆದಾಗ ಮನಸ್ಸಿನ ತಂಪು ಸಂತಸಗೊಳ್ಳುತ್ತದೆ. ರಾತ್ರಿಗೆ ಮೈಯೊಡ್ಡಿ ಅಂಬರದ ಕೆಳಗೆ ಅರ್ಧ ದಿಗಂಬರನಾಗಿ ಇಷ್ಟರವರೆಗೂ ಉಳಿದಿರಲಿಲ್ಲ .ಅನಿವಾರ್ಯತೆಯೊಂದು ಇರುಳಿನ ತಂಪಿಗೆ ಆಶ್ರಯಿಸಲು ಕಾರಣವಾಯಿತು. ಅದೇನು ಸೊಗಸು ತಣ್ಣನೆಯ...
ರೇ…. ನನ್ನ ಆತ್ಮಕ್ಕೆ ಆಗಾಗ ರೇಗುವ ರೋಗದ ರಾಗವನ್ನು ದಯಪಾಲಿಸುತ್ತಲೇ ಇರುತ್ತೇನೆ. ನಾನು ಸಾಗುವ ದಾರಿಯಲ್ಲಿ ನೆಲ ನುಣುಪಾಗಿದೆ, ಅಷ್ಟೇನು ಅಡೆತಡೆಗಳಿಲ್ಲ. ಆದರೆ ನಾನೇ ಸೃಷ್ಟಿಸಿಕೊಂಡ ಒಂದಷ್ಟು ತೊಡಕುಗಳಿದೆ. ನಿಜ ನಾನೇ ಸೃಷ್ಟಿಸಿಕೊಂಡಿದ್ದು. ಅದಕ್ಕೊಂದು ಹೆಸರು...
ಮಿಸ್ಸಿಂಗ್ ಕೇಸ್ ಮನೆಯ ಮೂಲೆಯೊಂದರಲ್ಲಿ ಭಯ ಉಸಿರಾಡುತ್ತಿದೆ .ಪಕ್ಕದಲ್ಲಿ ಆತಂಕ ,ಇನ್ನೊಂದೆಡೆ ಭರವಸೆ ನೀಡಿದಾದ ಉಸಿರನ್ನು ಬಿಡುತ್ತಿದೆ. ದಿನವೂ ಬರಿಯ ಗಾಳಿಯನ್ನೇ ತುಂಬಿಕೊಂಡಿದ್ದ ಮನೆ ಸದ್ಯಕ್ಕೆ ಆಮ್ಲಜನಕವನ್ನು ಹೊರಗಡೆ ಕಳುಹಿಸಿ ಕ್ರೂರ ಆತಂಕವನ್ನು ಬರಮಾಡಿಕೊಳ್ಳುತ್ತಿದೆ. ಮನೆಯ...
ಕೊಂಡಿ ಕತ್ತಲೆಯ ದಾರಿಯಲ್ಲಿ ,ಬೀದಿದೀಪಗಳ ಅಡಿಯಲ್ಲಿ ,ಮಿನುಗುವ ರಸ್ತೆಯಲ್ಲಿ ಮೌನ ತಪಸ್ಸಿಗೆ ಕುಳಿತ ಹಾಗಿರುತ್ತದೆ ಆ ಜಾಗ. ಆಲಿಸುವ ಮನಸ್ಸಿದ್ದರೆ ಇಲ್ಲೊಮ್ಮೆ ಕುಳಿತು ಮಾತನಾಡಬಹುದು. ನಿಮಗೊಂದಿಷ್ಟು ಹೆಚ್ಚಿನ ಮೌನದ ಮಾತುಗಳು ಸಿಗಬೇಕಾದರೆ ಅಲ್ಲಿ ಆ ರಸ್ತೆ...
ದಹಿಸು ಅವರವರು ಅವರ ಧರ್ಮ ಕರ್ಮಗಳನ್ನು ನಿಯಮದಿಂದ ಮಾಡಿದರೆ ಯಾರಿಗೂ ನೋವಿಲ್ಲ. ಆದರೆ ನನಗೇಕೋ ನನ್ನ ಕಾರ್ಯದ ಮೇಲೆ ಇವತ್ತು ಅಸಹ್ಯ ಹುಟ್ಟಿದೆ. ನಾ ಆ ಕಾರ್ಯ ಕೈಗೊಳ್ಳಬಾರದಿತ್ತು. ನಿಮಗ್ ಅರ್ಥವಾಗುತ್ತಿಲ್ಲ ?ಅಲ್ವಾ. ಸರಿ ವಿವರಿಸುತ್ತೇನೆ....
ನಾಟಕೀಯ ಬದುಕು ಅನಾಥಳೋ, ದಿಕ್ಕುತಪ್ಪಿದವಳೋ, ಎಲ್ಲಿಂದ ತಪ್ಪಿಸಿಕೊಂಡಳೋ ಗೊತ್ತಿಲ್ಲ .ಮುಖದಲ್ಲಿ ಗಾಬರಿ ,ಕಣ್ಣಲ್ಲಿ ಹಸಿವು ,ಮಣ್ಣಾದ ಬಟ್ಟೆ. ಆಗಾಗ ಹಿಂತಿರುಗಿ ನೋಡುತ್ತಾ ಏದುಸಿರು ಬಿಡುತ್ತಾ ಓಡುತ್ತಾ ನಡೆಯುತ್ತಿದ್ದಾಳೆ. ವೇಗವಾಗಿದ್ದ ಪಾದಗಳು ತಡೆದು ನಿಲ್ಲಿಸಿ ರಸ್ತೆಬದಿಯಲ್ಲಿ ಕೂರಲು...
ಮೀನು ಕೋಲಿಡಿದು ಕೆಸರಿನ ನೆಲವ ಹುಡುಕುತ್ತಾ ಸಾಗಿದೆ. ನನಗೆ ಎರೆಹುಳು ಬೇಕಿತ್ತು. ಅದನ್ನ ತೋರಿಸಿ ಮೀನು ಹಿಡಿಯುವ ಬಯಕೆ.ಈಗ ಕೇಳಿದ್ದರೆ ಪ್ರಾಣಿಹಿಂಸೆ ಬಗ್ಗೆ ಒಂದಷ್ಟು ಭಾಷಣಗಳನ್ನು ಹೊರಡಿಸುತಿದ್ದೆ. ಆಗ ಎಲ್ಲ ತಲೆ ಮೇಲೆ ಹಾದುಹೋಗುತ್ತಿದೆ ಸಂಗತಿಗಳು....