ಕಾರ್ಕಳ ಅಕ್ಟೋಬರ್ 6: ಏಕಾಏಕಿ ರಸ್ತೆಗೆ ಚಿರತೆಯೊಂದು ನುಗ್ಗಿದ ಪರಿಣಾಮ ಕಾರೊಂದು ಡಿಕ್ಕಿ ಹೊಡೆದು ಚಿರತೆ ಸಾವನಪ್ಪಿದ ಘಟನೆ ಹೆಬ್ರಿ ತಾಲೂಕಿನ ಮುದ್ರಾಡಿ ಕಾರ್ಕಳ ರಸ್ತೆಯ ಭಕ್ರೆ ಮಠ ಕ್ರಾಸ್ ಬಳಿ ಗುರುವಾರ ಸಂಜೆ ನಡೆದಿದೆ....
ನವದೆಹಲಿ ಜುಲೈ 15: ಮಕ್ಕಳು ತಮ್ಮ ಪೋಷಕರೊಂದಿಗೆ ದನ ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ಗದ್ದೆಯಲ್ಲಿದ್ದ ಎರಡು ಚಿರತೆ ಮರಿಗಳನ್ನು ಬೆಕ್ಕಿನ ಮರಿ ಎಂದು ಮನೆಗೆ ತೆಗೆದುಕೊಂಡು ಬಂದ ಙಟನೆ ದೆಹಲಿಯ ಗುರಗ್ರಾಮದಲ್ಲಿ ನಡೆದಿದೆ. ಗುರುಗ್ರಾಮ್ನಿಂದ 56...
ಮಂಗಳೂರು, ಜೂನ್ 06 : ಮಂಗಳೂರು ಹೊರವಲಯದ ಕಿನ್ನಿಗೋಳಿ ಸಮೀಪದ ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳೆಪಾಡಿ ಮಿತ್ತಬೆಟ್ಟು ಬಳಿ ಗುಡ್ಡೆಯಲ್ಲಿ ಉರುಳಿಗೆ ಸಿಕ್ಕ ಚಿರತೆ ಒದ್ದಾಡಿ ಸಾವನ್ನಪ್ಪಿದ ಘಟನೆ ನಡೆದಿದೆ. ಇಲ್ಲಿನ ಉಳೆಪಾಡಿ ಮಿತ್ತಬೆಟ್ಟು...
ಬೆಳ್ತಂಗಡಿ ಎಪ್ರಿಲ್ 18: ಹಟ್ಟಿಗೆ ನುಗ್ಗಿದ ಚಿರತೆಯೊಂದು ದನವನ್ನು ಕೊಂದು ತಿಂದು ಹಾಕಿದ ಘಟನೆ ಧರ್ಮಸ್ಥಳ ಗ್ರಾಮದ ನೇರ್ತನೆ ಎಂಬಲ್ಲಿ ನಡೆದಿದೆ. ಇಲ್ಲಿನ ನಿವಾಸಿಯಾಗಿರುವ ತ್ರೇಸ್ಯಾಮ್ಮ ಪಿ.ಕೆ. ಎಂಬವರಿಗೆ ಸೇರಿದ ದನ ಇದಾಗಿದೆ. ತ್ರೇಸ್ಯಾಮ್ಮರ ಮನೆಯ...
ಕಡಬ, ಮಾರ್ಚ್ 17: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಕಾಡಾನೆಗಳ ಸಂಕಷ್ಟದ ಜೊತೆಗೆ ಚಿರತೆ ಹಾವಳಿಯ ಪ್ರಕರಣ ವರದಿಯಾಗುತ್ತಿದ್ದು, ಇಲ್ಲಿನ ಸ್ಥಳೀಯ ನಿವಾಸಿಗಳು ಜೀವ ಭಯದಿಂದ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಬೆತ್ತೋಡಿ ಎಂಬಲ್ಲಿ...
ಕುಂದಾಪುರ ಮಾ.10: ಊರಿನ ಜನರಿಗೆ ತಲೆನೋವಾಗಿದ್ದ ಚಿರತೆಯನ್ನು ಕೊನೆಗೂ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಗ್ರಾಮಪಂಚಾಯತ್ ವ್ಯಾಪ್ತಿಯ ಮಾಲಾಡಿ ಎಂಬಲ್ಲಿ ನಡೆದಿದೆ. ಇಲ್ಲಿನ ಶ್ರೀ ನಂದಿಕೇಶ್ವರ...
ಲಕ್ನೋ ಫೆಬ್ರವರಿ 25: ಚಿರತೆ ಹಿಡಿಯಲು ಇಟ್ಟಿದ್ದ ಕೋಳಿ ಕದಿಯಲು ಹೋಗಿ ವ್ಯಕ್ತಿಯೊಬ್ಬ ಚಿರತೆ ಬೋನಿನಲ್ಲಿ ಸಿಕ್ಕಿ ಬಿದ್ದ ಘಟನೆ ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ನಡೆದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಹಿಡಿಲು ಬೋನಿನೊಳಗೆ ಕೋಳಿಯೊಂದನ್ನು...
ಚಿರತೆ ರಕ್ಷಣೆಗಾಗಿ 25 ಅಡಿ ಆಳದ ಬಾವಿಗಿಳಿದ ಡಾ. ಮೇಘನಾ…..ಕಾರ್ಯಾಚರಣೆಯ ರೋಚಕ ಕಥೆ…!! ಮುದ್ದಾದ ನಾಯಿ, ಬೆಕ್ಕುಗಳ ಜೊತೆ ಆಡೋಕೆ ಚೆನ್ನಾಗಿರುತ್ತದೆ.. ಸಿಂಹ, ಹುಲಿ. ಚಿರತೆಯನ್ನೆಲ್ಲಾ ಕಂಡ್ರೆ ಯಾರಿಗೆ ತಾನೇ ಪ್ರೀತಿಯಿದೆ ಹೇಳಿ. ಅವುಗಳನ್ನು ಏನಿದ್ರೂ...
ಉಡುಪಿ ಜನವರಿ 22: ಚಿರತೆ ದಾಳಿಗೆ ಕೋಣವೊಂದು ಬಲಿಯಾಗಿರುವ ಘಟನೆ ಪರ್ಕಳ ಇಲ್ಲಿನ ಹೆರ್ಗದ ಬಳಿ ಇರುವ ಪ್ರಸಾದ್ ಕಾಲೋನಿಯ 5ನೇ ಕ್ರಾಸ್ ನಲ್ಲಿ ನಡೆದಿದೆ. ಸಾಧಾರಣ ನಾಲ್ಕೈದು ವರ್ಷದ ಸಣ್ಣ ಗಾತ್ರದ ಕೋಣ ಇದಾಗಿದೆ....
ಉಪ್ಪಿನಂಗಡಿ, ಜನವರಿ 19: ಮಧ್ಯಾಹ್ನ ಹೊತ್ತೇ ಪ್ರತ್ಯಕ್ಷಗೊಂಡ ಚಿರತೆಯೊಂದು ಮನೆಯ ವರಾಂಡದಲ್ಲಿದ್ದ ನಾಯಿ ಮರಿಯೊಂದನ್ನು ಹೊತ್ತೊಯ್ದ ಘಟನೆ ಬುಧವಾರ ತಣ್ಣೀರುಪಂಥ ಗ್ರಾಮದ ಅಳಕ್ಕೆ ಎಂಬಲ್ಲಿ ನಡೆದಿದೆ. ತಣ್ಣೀರುಪಂಥ ಗ್ರಾಮದ ಅಳಕ್ಕೆಎಂಬಲ್ಲಿ ಗಣೇಶ್ ಎಂಬವರ ಮನೆಯ ವರಾಂಡದಲ್ಲಿ ಕಾಣಿಸಿಕೊಂಡ ಚಿರತೆ ವರಾಂಡದಲ್ಲಿ ಮಲಗಿದ್ದ 40 ದಿನ ಪ್ರಾಯದ ಪಗ್ ಜಾತಿಯ ನಾಯಿ ಮರಿಯನ್ನು ಕಚ್ಚಿಕೊಂಡು ಹೊತ್ತೊಯ್ದಿದೆ. ಗಣೇಶ್ ಇವರ ಪತ್ನಿ ಕಣಿಯೂರು ಗ್ರಾಮ ಪಂಚಾಯತ್ನಲ್ಲಿ ಪಿಡಿಒ ಆಗಿದ್ದು, ಅವರು ಕಚೇರಿಗೆ ಹೋಗಿದ್ದರು. ಕಲ್ಲೇರಿಯಲ್ಲಿ ಅಂಗಡಿ ಹೊಂದಿದ್ದ ಗಣೇಶ್ ಅವರು ಈ ಸಂದರ್ಭ ಮನೆಯಲ್ಲಿ ಒಬ್ಬರೇ ಇದ್ದಾಗ ಈ ಘಟನೆ ಸಂಭವಿಸಿದೆ. ಚಿರತೆ ಬಂದು ನಾಯಿ ಮರಿಯನ್ನು ಹೊತ್ತೊಯ್ದ ಘಟನೆಯ ಬಗ್ಗೆ ಊರಿನಲ್ಲಿ ಸುದ್ದಿ ಹರಡುತ್ತಿದ್ದಂತೆ ಗ್ರಾಮದಲ್ಲಿರುವ ಚಿರತೆಯ ಬಗ್ಗೆ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ. ಬಾರ್ಯ, ನೀಲಗಿರಿ ಪರಿಸರದಲ್ಲಿ ಸುಮಾರು 2 ತಿಂಗಳಿನಿಂದ ಚಿರತೆ ಅಲ್ಲಲ್ಲಿ ಕಾಣಿಸಿಕೊಂಡಿದ್ದು, ಈ ಬಗ್ಗೆ ಹಲವು ಬಾರಿ ಅರಣ್ಯ ಇಲಾಖೆ ಗಮನಕ್ಕೂ ತರಲಾಗಿದೆ.