ಗಾಳಿ ಗಾಳಿ ನನ್ನೊಂದಿಗೆ ಮಾತುಕತೆಗೆ ಸಿಕ್ತಿಲ್ಲ .ಅವನಲ್ಲಿ ಒಂದಷ್ಟು ಮಾಹಿತಿ ಕೇಳಬೇಕಿತ್ತು. ಭೂಮಿಯಲ್ಲಿ ನಿಲ್ಲದೆ, ಬಾನಿನಲ್ಲಿ ಸಲ್ಲದೆ, ನಿಂತಲ್ಲಿ ನಿಲ್ಲಲಾಗದೆ ಚಡಪಡಿಕೆಯಿಂದ ಚಲಿಸುತ್ತಿರುವ ಕಾರಣ ಮಾತುಕತೆಗೆ ಸಿಕ್ಕಿಲ್ಲ ಅವನು. ದೀಪವಾರಿಸುವ ಗಾಳಿಯನ್ನ ಆಗಾಗ ಬೈಯುತ್ತೇವೆ, ಕೆಲವೊಮ್ಮೆ...
ಹಣೆಬರಹವಲ್ಲ-ಹಣೆಬೆವರು ಹಸಿವು ಕಲೆಯನ್ನು ಬೀದಿಗಿಳಿಯುತ್ತದೆ. ಇದು ನಾ ಕಂಡ ದೃಶ್ಯ .ಅದಕ್ಕಾಗಿ ನಿಮ್ಮ ಮುಂದಿಡುತ್ತಿದ್ದೇನೆ. ನೆಲ ಒರಟಾಗಿದ್ದರೂ, ಆಯಕಟ್ಟಿನ ಜಾಗವನ್ನು ಗುರುತಿಸಿದ್ದಾರೆ. ಹೊಟ್ಟೆ ಹೊರೆಯೋಕೆ ಆಧಾರ ಇದೆ ಅನ್ನಿಸುತ್ತಿದೆ.ಇದರಲ್ಲಿ ಶಿಕ್ಷಣ, ಜ್ಞಾನಸಂಪಾದನೆ ,ಬದುಕಿನ ಭವಿಷ್ಯದ ಸಾಧ್ಯತೆಗಳು...
ಮಳೆ”ರಾಯ” ಮನೆಯ ಮೇಲಿನ ಮಹಡಿಯಲ್ಲಿ ನಿಂತಿದ್ದೆ. ಮಳೆ ದೂರದಿ ನಡೆದು ಬರುತ್ತಿತ್ತು. ಬರುವಿಕೆಯನ್ನು ಗಾಳಿ ತಂಪಿನಿಂದಲೂ ಶಬ್ದ ಇಂಪಿನಿಂದಲೂ ಹೇಳುತ್ತಿತ್ತು. ದೂರದಿ ಬರುತ್ತಿರುವ ರಾಗವನ್ನು ಗಮನಿಸಿದರೆ ಜೋರಿನ ಸೂಚನೆಯನ್ನು ನೀಡುತ್ತಿತ್ತು. ಆಕಾಶದಿಂದ ಉದುರುತ್ತಿದ್ದ ಹನಿಗಳು ತುಂಬಾ...
ಹೋಲಿಸುವುದೇತಕೆ ನನ್ನದು ನೇರ ಪ್ರಶ್ನೆ. ಸುತ್ತಿಬಳಸಿ ಮಾತನಾಡುವುದಿಲ್ಲ .ನೀವು ಒಂದು ವಾಕ್ಯ ಪ್ರಯೋಗಿಸುತ್ತಾ ಇರುತ್ತೀರಿ “ಹೂವಿನ ಜೊತೆಗೆ ನಾರು ಸ್ವರ್ಗ ಸೇರುತ್ತೆ” ಅಂತ. ನಾನೇ ಆ ನಾರು. ನನಗಿಲ್ಲಿ ಅರ್ಥವಾಗದ್ದು ನನ್ನನ್ನ ಯಾಕೆ ಹೋಲಿಸುತ್ತಾ ಇದ್ದೀರಿ....
ಸ್ಪಂದನೆ ಬೆಳಗಿನ ಹೊತ್ತು ನನಗೆ ಇಂದು ಸಿಕ್ಕವರ ಕೆಲವು ಕತೆಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ . ಇದೆಲ್ಲವೂ ಯಾವುದೋ ಒಂದು ಕೊಂಡಿಗೆ ಬೆಸೆದುಕೊಂಡಿದೆ. ಆ ಕಾರಣ ಜೊತೆಗೂಡಿಸಿದ್ದೇನೆ . ” ಅವಳು ‘ಆಸೆಯೊಂದನ್ನು’ ಎದುರುನೋಡುತ್ತಿದ್ದಾಳೆ, ಕಾಯುವಿಕೆಯ ಮಿತಿಮೀರಿ...
ಜಗಳ ಜಗಳ ಆರಂಭವಾಗಿತ್ತು. ಅವರು ಐದು ಜನ ಆತ್ಮೀಯರು. ಹಲವು ವರ್ಷಗಳ ಬಾಂಧವ್ಯ. ಬಿಟ್ಟು ನಡೆದಿಲ್ಲ ಒಂದಿನವೂ. ಮುನಿಸುಗಳು ಕ್ಷಣಮಾತ್ರದಲ್ಲಿ ಮಾಯವಾಗುತ್ತಿತ್ತು. ಕಲಿಕೆಯ ಹೆಜ್ಜೆಯನ್ನು ಜವಾಬ್ದಾರಿಯ ಕಡೆಗೆ ಇಟ್ಟರು. ಮಾತುಕತೆ ಅಪರೂಪವಾಯಿತು. ಬಾಂಧವ್ಯ ಗಟ್ಟಿಯಾಗಿಯೇ ಇತ್ತು....
ಬೇಡುವಿಕೆ? ಅವನದು ದಿನಚರಿಯೇ ಇದು. ವಯಸ್ಸಿನ್ನೂ ಸಣ್ಣದು. ಬೆಟ್ಟದ ಮೇಲಿನ ಶಿವನಿಗೆ ಬೆಟ್ಟವೇರುತ್ತಾ ಸುತ್ತಮುತ್ತಲೆಲ್ಲಾ ಹೂವನ್ನು ಆರಿಸಿ ಅವನ ಲಿಂಗದ ಮುಂದೆ ಇಟ್ಟು ಬರುತ್ತಾನೆ. ಬಿಸಿಲು ಗಾಳಿಗೆ ಅವನ ಕೆಲಸ ನಿಂತಿಲ್ಲ. ನಾನೊಮ್ಮೆ ಕೇಳಿದ್ದಕ್ಕೆ “ಬಿಸಿಲು...
ಆಗುವುದೆಲ್ಲಾ ಒಳ್ಳೆಯದಕ್ಕೆ ಒಮ್ಮೊಮ್ಮೆ ನಾವು ಯೋಚಿಸುವ ಸ್ಥಿತಿ ಮತ್ತು ಸಮಯ ನಮ್ಮನ್ನು ಧಿಗಿಲಿಗೀಡು ಮಾಡುತ್ತೆ. ನನಗೂ ಹಾಗೆ ಆಗಿತ್ತು. ಕೈಯಲ್ಲಿದ್ದ ಚಂದದ ಕೆಲಸವನತನು ಒಂದು ಕ್ಷಣದ ನಿರ್ಧಾರದಲ್ಲಿ ಬೇಡವೆಂದು ತೊರೆದು ಹೊರಬಂದಿದ್ದೆ. “ದೊಡ್ಡ ಕನಸುಗಳು ಇರುವಾಗ...
ಅವನ ಪ್ರಶ್ನೆ ದಿನವೊಂದು ಬರಬೇಕು. ಸೂರ್ಯನ ಬೆಳಕು, ಬೀಸುವ ಗಾಳಿ, ನೆಲದ ಕಂಪು, ಹಸಿರಿನ ಇಂಪು, ಎಲ್ಲವೂ ಎಂದಿನಂತೆ ಇರಬೇಕು. ಕಾಲದ ಗತಿಯೂ ಹೀಗೆ ಇರಬೇಕು. ಪ್ರಾಣಿ-ಪಕ್ಷಿಗಳು ಭಯವಿಲ್ಲದೆ ಬದುಕುತ್ತಿರಬೇಕು. ಇವೆಲ್ಲವೂ ಸಹಜವಾಗಿರುವ ದಿನವೊಂದು ಬರಬೇಕು....
ವಿದ್ಯುತ್ ಕಂಬ ನನಗೆ ಇಂತಹದೇ ಒಂದು ರೂಪ ಇರಲಿಲ್ಲ .ಕಾರ್ಖಾನೆ ಒಂದರಲ್ಲಿ ಜಲ್ಲಿ ಸಿಮೆಂಟು ಮಿಶ್ರಣ ಸೇರಿಸಿ ಕಬ್ಬಿಣದ ಸರಳುಗಳನ್ನು ಜೋಡಿಸಿ ಗಟ್ಟಿಯಾಗಿ ನಿರ್ಮಿಸಿದರು. ಅಲ್ಲಿಂದ ಅಗತ್ಯವಿರುವ ಕಡೆಗೆ ಸಾಗಾಟ. ನನ್ನನ್ನು ಪೇಟೆಗಿಂತ ದೂರ ಹಳ್ಳಿಯೊಂದರ...