ಉಪ್ಪಿನಂಗಡಿ, ಜನವರಿ 19: ಮಧ್ಯಾಹ್ನ ಹೊತ್ತೇ ಪ್ರತ್ಯಕ್ಷಗೊಂಡ ಚಿರತೆಯೊಂದು ಮನೆಯ ವರಾಂಡದಲ್ಲಿದ್ದ ನಾಯಿ ಮರಿಯೊಂದನ್ನು ಹೊತ್ತೊಯ್ದ ಘಟನೆ ಬುಧವಾರ ತಣ್ಣೀರುಪಂಥ ಗ್ರಾಮದ ಅಳಕ್ಕೆ ಎಂಬಲ್ಲಿ ನಡೆದಿದೆ. ತಣ್ಣೀರುಪಂಥ ಗ್ರಾಮದ ಅಳಕ್ಕೆಎಂಬಲ್ಲಿ ಗಣೇಶ್ ಎಂಬವರ ಮನೆಯ ವರಾಂಡದಲ್ಲಿ ಕಾಣಿಸಿಕೊಂಡ ಚಿರತೆ ವರಾಂಡದಲ್ಲಿ ಮಲಗಿದ್ದ 40 ದಿನ ಪ್ರಾಯದ ಪಗ್ ಜಾತಿಯ ನಾಯಿ ಮರಿಯನ್ನು ಕಚ್ಚಿಕೊಂಡು ಹೊತ್ತೊಯ್ದಿದೆ. ಗಣೇಶ್ ಇವರ ಪತ್ನಿ ಕಣಿಯೂರು ಗ್ರಾಮ ಪಂಚಾಯತ್ನಲ್ಲಿ ಪಿಡಿಒ ಆಗಿದ್ದು, ಅವರು ಕಚೇರಿಗೆ ಹೋಗಿದ್ದರು. ಕಲ್ಲೇರಿಯಲ್ಲಿ ಅಂಗಡಿ ಹೊಂದಿದ್ದ ಗಣೇಶ್ ಅವರು ಈ ಸಂದರ್ಭ ಮನೆಯಲ್ಲಿ ಒಬ್ಬರೇ ಇದ್ದಾಗ ಈ ಘಟನೆ ಸಂಭವಿಸಿದೆ. ಚಿರತೆ ಬಂದು ನಾಯಿ ಮರಿಯನ್ನು ಹೊತ್ತೊಯ್ದ ಘಟನೆಯ ಬಗ್ಗೆ ಊರಿನಲ್ಲಿ ಸುದ್ದಿ ಹರಡುತ್ತಿದ್ದಂತೆ ಗ್ರಾಮದಲ್ಲಿರುವ ಚಿರತೆಯ ಬಗ್ಗೆ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ. ಬಾರ್ಯ, ನೀಲಗಿರಿ ಪರಿಸರದಲ್ಲಿ ಸುಮಾರು 2 ತಿಂಗಳಿನಿಂದ ಚಿರತೆ ಅಲ್ಲಲ್ಲಿ ಕಾಣಿಸಿಕೊಂಡಿದ್ದು, ಈ ಬಗ್ಗೆ ಹಲವು ಬಾರಿ ಅರಣ್ಯ ಇಲಾಖೆ ಗಮನಕ್ಕೂ ತರಲಾಗಿದೆ.
ಉಪ್ಪಿನಂಗಡಿ ಸೆಪ್ಟೆಂಬರ್ 22: ಕಾರೊಂದು ಜಿಂಕೆಗೆ ಡಿಕ್ಕಿ ಹೊಡೆದ ಪರಿಣಾಮ ಜಿಂಕೆ ಸಾವನಪ್ಪಿರುವ ಘಟನೆ ಮಂಗಳವಾರ ರಾತ್ರಿ ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯ ಬೆಳಾಲು ಗ್ರಾಮದ ಬೈತಾಡಿ ಎಂಬಲ್ಲಿ ಸಂಭವಿಸಿದೆ. ಕಕ್ಕಿಂಜೆಯ ಸಿದ್ದಿಕ್ ಎಂಬವರು ಉಪ್ಪಿನಂಗಡಿ...
ಲಕ್ನೋ, ಜುಲೈ 13: ಸಾಕಿದ ನಾಯಿಯೊಂದು 82 ವರ್ಷದ ವೃದ್ಧೆಯನ್ನು ಕಚ್ಚಿ ಕೊಂದು ಹಾಕಿರುವ ಘಟನೆ ಲಕ್ನೋದಲ್ಲಿ ಮಂಗಳವಾರದಂದು ನಡೆದಿದೆ. ಕೈಸರ್ ಭಾಗ್ ನಿವಾಸಿ ಸುಶೀಲಾ ತ್ರಿಪಾಠಿ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಜಿಮ್ ಟ್ರೈನರ್ ಆಗಿರುವ ಇವರ...
ಮಂಗಳೂರು, ಜುಲೈ 09: ಕಾನೂನು ವ್ಯಾಪ್ತಿಯಲ್ಲಿ ಪ್ರಾಣಿವಧೆಗೆ ಅವಕಾಶವಿದೆ, ಅದರ ಸ್ಪಷ್ಟ ನಿಯಮಾವಳಿ ಸರ್ಕಾರ ಜನತೆಗೆ ತಿಳಿಸಬೇಕು, ಯಾರೂ ಕಾನೂನು ಮೀರಿ ನಡೆಯಬಾರದು ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಯು.ಟಿ. ಖಾದರ್ ಹೇಳಿದ್ದಾರೆ. ಅಕ್ರಮ...
ಬೆಂಗಳೂರು, ಎಪ್ರಿಲ್ 19: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020ರ ಸೆಕ್ಷನ್ 5 ಅಡಿಯಲ್ಲಿ ರೂಪಿಸಿರುವ ನಿಯಮಗಳನ್ನು ಜಾರಿಗೆ ತರಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿ ಆದೇಶಿಸಿದೆ. ಗೋಹತ್ಯೆ ನಿಷೇಧ ಕಾಯ್ದೆಯ...
ಪುತ್ತೂರು, ಮಾರ್ಚ್ 17: ನರಿಮೊಗರು ಗ್ರಾಮದ ಗಡಿಪ್ಪಿಲ ರೈಲ್ವೆ ಹಳಿಯಲ್ಲಿ ಕಾಡುಕೋಣ ಮತ್ತು ಅದರ ಮರಿ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ಮ.17ರಂದು ಬೆಳಿಗ್ಗೆ ನಡೆದಿದೆ. ಸ್ಥಳೀಯ ಕೃಷಿ ತೋಟಗಳಿಗೆ ಮೇವು ಅರಸಿ ಬಂದಿದ್ದ...
ಮಧ್ಯಪ್ರದೇಶ: ತನ್ನ ಜೀವಿತಾವಧಿಯಲ್ಲಿ 29 ಮರಿಗಳಿಗೆ ಜನ್ಮ ನೀಡಿದ್ದ ಸೂಪರ್ ಮಾಮ್ ಖ್ಯಾತಿಯ ಹುಲಿ ವಯೋಸಹಜ ಕಾಯಿಲೆಯಿಂದ ಸಾವನಪ್ಪಿದ್ದು, ನಿಯಮಗಳವುಸಾರವಾಗಿ ಅಂತ್ಯಕ್ರಿಯೆ ನಡೆಸಲಾಗಿದೆ. ಮಧ್ಯಪ್ರದೇಶದ ಪೆಂಚ್ ನ್ಯಾಷನಲ್ ಪಾರ್ಕ್ನಲ್ಲಿರುವ ಈ ಹುಲಿಗೆ ಕಾಲರ್ವಾಲಿ ಎಂಬ ಹೆಸರು...
ಸುಳ್ಯ, ಡಿಸೆಂಬರ್13: ಹೋರಿಯೊಂದು ತಿವಿದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಮುರುಳ್ಯದ ಕೋಡಿಯಡ್ಕದಿಂದ ವರದಿಯಾಗಿದೆ. ಮುರುಳ್ಯ ಗ್ರಾಮದ ಪೂದೆಯ ಕಿಟ್ಟಣ್ಣ ಗೌಡ ಕೋಡಿಯಡ್ಕ ಎಂಬವರು ಮೃತಪಟ್ಟ ವ್ಯಕ್ತಿ. ತಾನು ಸಾಕಿರುವ ಹೋರಿಯನ್ನು ತೋಟದಲ್ಲಿ ಮೇಯಲು...
ಮಂಗಳೂರು ನವೆಂಬರ್ 27: ಮಂಗಳೂರಿನ ಕಾರಿನ ಶೋರೂಂ ಆವರಣಕ್ಕೆ ಕಾಡು ಹಂದಿಯೊಂದು ನುಗ್ಗಿ ಆತಂಕ ಸೃಷ್ಟಿಸಿದ ಘಟನೆ ನಡೆದಿದ್ದು, ಘಟನೆಯ ಸಿಸಿಟಿವಿ ವಿಡಿಯೋ ವೈರಲ್ ಆಗಿದೆ. ನವೆಂಬರ್ 24 ರಂದು ಈ ಘಟನೆ ನಡೆದಿದ್ದು, ನಗರದ...
ನವದೆಹಲಿ, ಅಕ್ಟೋಬರ್ 07 : ಕೇಂದ್ರ ದೆಹಲಿಯಲ್ಲಿ ಕಟ್ಟಡದ ಎರಡನೇ ಮಹಡಿಯಿಂದ ಕೋತಿ ಎಸೆದ ಇಟ್ಟಿಗೆ ಕಟ್ಟಡದ ಕೆಳಗೆ ನಿಂತಿದ್ದ ವ್ಯಕ್ತಿಯ ತಲೆಗೆ ಬಡಿದ ಪರಿಣಾಮ 30 ವರ್ಷದ ವ್ಯಕ್ತಿ ಮೃತಪಟ್ಟಿದ್ದಾನೆ. ನಬಿ ಕರೀಮ್ ಪ್ರದೇಶದಲ್ಲಿ...