ಹುಡುಕಾಟ ಜಲ್ಲಿಗಳ ಮೇಲೆ ಮಲಗಿರುವ ಹಳಿ ಮೌನವಾಗಿದೆ .ಬಂಡಿ ಚಲಿಸುವಾಗ ಒಂದಷ್ಟು ಶಬ್ದವನ್ನು ಸೃಷ್ಟಿಸಿ ಮತ್ತೆ ಮೌನವಾಗುತ್ತದೆ. ಆ ಮೌನದ ನಡುವೆ ಅಲ್ಲೆರಡು ಜೀವಗಳು ಮಾತುಕತೆಗೆ ಇಳಿದಿವೆ. ಇಲ್ಲಿ ಮೌನವೇ ಮಾತನಾಡುತ್ತಿದೆ. ಇಬ್ಬರು ನೇರವಾಗಿರುವ ಹಳಿಗಳನ್ನು...
ಮನೆಯೊಂದರ ಕತೆ ಊರು ಕೆಲಸಕಾರ್ಯಗಳಿಗೆ ತೆರೆದಿದ್ದಾಗ ಅಡುಗೆ ಮನೆಯಲ್ಲಿ ಒಲೆ ಉರಿಯುತ್ತಿತ್ತು .ಹೊರಗೆ ಕಾರ್ಯ ಸ್ತಬ್ಧಗೊಂಡ ಬೆಂಕಿ ನಂದಲಾರಂಬಿಸಿತು. ರೋಗವೊಂದನ್ನು ಕಟ್ಟಿ ಹಾಕಲು ಒಳಗೇ ಇರಬೇಕೆಂಬ ಘೋಷಣೆಯಾಯಿತು. ಹಸಿವೆ ಹೊರಗೆ ಬಂದು ಅಳುವಾಗ ತೆರಳುವುದೆಲ್ಲಿಗೆ. ಮೂರು...
ನನ್ನ ಚೀಲ ನನ್ನಲ್ಲೊಂದು ಚೀಲವಿದೆ.ಅದು ಸ್ವಲ್ಪ ತುಂಬಿದೆ. ಇನ್ನೂ ತುಂಬಬಹುದಾದದ್ದು ಇದೆ. ನನಗೆ ಬುದ್ಧಿ ತಿಳಿದಾಗಿನಿಂದ ನನ್ನ ಅರ್ಥ ಮಾಡಿಕೊಂಡವರು ,ನನ್ನ ಏಳಿಗೆ ಬಯಸಿದವರು, ಇದರೊಳಗೆ ಒಂದಷ್ಟನ್ನು ತುಂಬಿಸಿದ್ದಾರೆ. ಕೆಲವರು ಅನಗತ್ಯವಾದುದನ್ನು ತುಂಬಿಸಿದ್ದಾರೆ. ಪ್ರತಿ ಹೆಜ್ಜೆಯಲ್ಲೂ...
ಕಳೆದುಕೊಂಡಿರುವುದು ಅವನು ಮನೆಯಿಂದ ಹೊರಬಿದ್ದ. ತುಂಬಾ ದಿನಗಳ ನಂತರ.ಮತ್ತದೇ ಗದ್ದಲ,ಶೇಂಗಾ ಮಾರುತ್ತಿರುವ ಅಜ್ಜಿ ,ಮೂಲೆ ಅಂಗಡಿ ರಾಜಯ್ಯ, ಜೋರಾಗಿ ಹೆಚ್ಚಿದ ಬಿಸಿಲು .ಹೊರಗೆ ಎಂದಿನಂತೆ ಇದೆ. ಅವನೊಳಗೆ ಮಾತ್ರ ಒಂದಿಷ್ಟು ಬದಲಾವಣೆಗಳಾಗಿವೆ. ಸತೀಶನನ್ನು ಕಳೆದುಕೊಂಡು ದಿನ...
ಅನಾರೋಗ್ಯಕ್ಕೆ ಮದ್ದೆಲ್ಲಿ ರಸ್ತೆ ನೇರವಾಗಿದೆ ಕೊನೆ ಕಾಣುತ್ತಿಲ್ಲ .ಆ ಕೊನೆಯನ್ನು ಬೇಗ ತಲುಪಬೇಕು ಅನ್ನುವ ಕಾರಣಕ್ಕೆ ಇಲ್ಲಿ ಗಾಡಿಯ ವೇಗ ಹೆಚ್ಚುತ್ತದೆ. ಚಕ್ರಗಳ ತಿರುಗುತ್ತಾ ನೆಲವನ್ನು ಬಿಟ್ಟು ಮೇಲೇರುತ್ತವೆ. ಕ್ಷಣದ ಆಯ ತಪ್ಪುವಿಕೆ ,ಮುಖಾಮುಖಿ ಘರ್ಷಣೆ,...
ದಾಟಿಸಬೇಕಾಗಿದೆ ಇಲ್ಲ ನನಗೊಂದು ಮಂತ್ರದ ಅವಶ್ಯಕತೆ ಇದೆ. ತುಂಬಾ ತುರ್ತಾಗಿ ಬೇಕಾಗಿದೆ. ಎಲ್ಲೂ ಸಿಕ್ತಾ ಇಲ್ಲ. ನಿಮಗೆ ಗೊತ್ತಿದ್ದರೆ ತಿಳಿಸುತ್ತೀರಾ?. ಯಾವ ಮಂತ್ರ ಅಂತನಾ… ಯಾವ ಮಂತ್ರವನ್ನು ನಾನು ಹೇಳಿ ಈ ನೋವು ದುಃಖ ಕಷ್ಟ...
ಬೇಟೆ ಅವತ್ತು ಭಾನುವಾರ ಮನೇಲಿ ಮಾಡೋಕೆ ಕೆಲಸ ಇರಲಿಲ್ಲ. ಅಪ್ಪನ ಜೊತೆ ಏಡಿ ಹಿಡಿಯೋಕೆ ನಮ್ಮೂರ ಸಣ್ಣ ಕಿಂಡಿ ಅಣೆಕಟ್ಟಿನ ಜಾಗಕ್ಕೆ ಹೋದೆ. ಅಲ್ಲಿ ಏಡಿ ಹೆಚ್ಚಾಗಿರುತ್ತದಂತೆ. ಸ್ವಲ್ಪ ಕೋಳಿ ಮಾಂಸ ಸಣ್ಣಕತ್ತಿ ಹಿಡಿದು ರಣಭೂಮಿಗೆ...
ಬುದ್ಧಿಮಾತು ಅಪ್ಪನ ಕೋಳಿ ಅಂಕದ ಕಲದಲ್ಲಿ ನಮ್ಮನೆ ಹುಂಜ ಅದ್ವಿತೀಯ ಪ್ರದರ್ಶನ ತೋರಿ ಮನೆಗೆ ಪದಾರ್ಥಕ್ಕೆ ಇನ್ನೊಂದು ಕೋಳಿಯನ್ನು ಜೊತೆಗೆ ತಂದಿತ್ತು. ಆದರೆ ತನ್ನ ಬಲ ಕಾಲಿನ ಸ್ವಾಧೀನವನ್ನು ಕಳೆದುಕೊಂಡಿತ್ತು. ಮನೆಯಲ್ಲಿ ಅದಕ್ಕೆ ಶಸ್ತ್ರಕ್ರಿಯೆ ನಡೆದು...
ಮಣ್ಣೊಳಗಿನ ಬಣ್ಣ ನಾನು ರಸಾಯನಶಾಸ್ತ್ರಜ್ಞನಲ್ಲ, ವಿಜ್ಞಾನವನ್ನು ಆಳವಾಗಿ ಅಧ್ಯಯನ ಮಾಡಿದವನೂ ಅಲ್ಲ. ಆದರೆ ಅದ್ಭುತವೊಂದನ್ನ ಕಂಡು ಹಿಡಿದಿದ್ದೇನ. ನಿಜ ಹೇಳಬೇಕೆಂದರೆ ಇದು ನಿಮಗೂ ಗೊತ್ತಿರೋದೆ. ನಾವು ನಡೆದಾಡೋ ನೆಲವಿದೆಯಲ್ಲಾ ಅದೊಂದು ಅದ್ಭುತ. ಕಣ್ಣಿಗೆ ಕಾಣೋ ಬಣ್ಣ...
ಬಡಿತ “ಅವನು ಬಂದು ಕರೆದಾಗ ಹೊರಡಲೇ ಬೇಕು.ಇಲ್ಲಪ್ಪ ಇನ್ನೊಂದೆರಡು ಸ್ವಲ್ಪ ಕೆಲಸ ಇದೆ ಆಮೇಲೆ ಬರ್ತೇನೆ ಅನ್ನೋಕೆ ಅವನು ನಮ್ಮ ಪರಿಚಿತನಲ್ಲ. ಅಪರಿಚಿತ ಆದರೂ ನಮ್ಮನ್ನು ಹುಡುಕಿಕೊಂಡು ಬಂದೇ ಬರ್ತಾನೆ ಅನ್ನೋದು ನಮಗೆ ಗೊತ್ತಿರುತ್ತೆ. ಆದರೂ...