Connect with us

    FILM

    ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ನಟಿ ಸ್ವರಾ ಭಾಸ್ಕರ್ – ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ

    ಮುಂಬೈ ಜೂನ್ 6: ವಿವಾದಿತ ನಟಿ ಸ್ವರಾಭಾಸ್ಕರ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಡಿರುವ ಅವರು ‘ಕೆಲವೊಮ್ಮೆ ನಿಮ್ಮ ಎಲ್ಲ ಪ್ರಾರ್ಥನೆಗಳಿಗೆ ಒಂದೇ ಬಾರಿ ಉತ್ತರ ಸಿಗುತ್ತದೆ. ಹೊಸ ಅಧ್ಯಯನಕ್ಕೆ ಕಾಲಿಡುವುದಕ್ಕೆ ನಾವು ಉತ್ಸುಕರಾಗಿದ್ದೇವೆ‘ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದರು.


    ಇತ್ತೀಚೆಗಷ್ಟೆ ತನ್ನ ಬಹುಕಾಲದ ಗೆಳೆಯ ಹಾಗೂ ಸಮಾಜವಾದಿ ಪಕ್ಷದ ನಾಯಕ ಫಹದ್‌ ಅಹಮದ್ ಅವರನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಸ್ವರಾ ಭಾಸ್ಕರ್‌, ಇದೀಗ ಮೊದಲನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಖುಷಿ ಹಂಚಿಕೊಂಡಿರುವ ಸ್ವರಾ ಭಾಸ್ಕರ್‌ ತಮ್ಮ ಪತಿ ಫಹದ್ ಅವರನ್ನು ಟ್ಯಾಗ್ ಮಾಡಿದ್ದಾರೆ.


    ಇದೇ ವರ್ಷ ಫೆಬ್ರವರಿಯಲ್ಲಿ ಸ್ವರಾ ಭಾಸ್ಕರ್ ಮತ್ತು ಫಹದ್‌ ಅಹಮದ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಫಹದ್‌ ಅವರು ಸಮಾಜವಾದಿ ಪಕ್ಷದ ಯುವ ಘಟಕ ‘ಸಮಾಜವಾದಿ ಯುವಜನ ಸಭಾ‘ದ ಅಧ್ಯಕ್ಷರಾಗಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *