KARNATAKA
ಕೌಟುಂಬಿಕ ಕಲಹ ಬಗೆಹರಿಸಲು ಬಂದ ಸ್ವಾಮೀಜಿ ಮಾಂಗಲ್ಯದೊಂದಿಗೆ ಪರಾರಿ..!
ಕೌಟುಂಬಿಕ ಕಲಹ ಸರಿ ಮಾಡಲು ಮನೆಗೆ ಬಂದ ಸ್ವಾಮೀಜಿ ಮನೆಯೊಡತಿಯ ಮಾಂಗಲ್ಯ ಸರದೊಂದಿಗೆ ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು : ಕೌಟುಂಬಿಕ ಕಲಹ ಸರಿ ಮಾಡಲು ಮನೆಗೆ ಬಂದ ಸ್ವಾಮೀಜಿ ಮನೆಯೊಡತಿಯ ಮಾಂಗಲ್ಯ ಸರದೊಂದಿಗೆ ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕುಟುಂಬದ ಸಮಸ್ಯೆಯನ್ನು ಬಗೆಹರಿಸಲು ಪೂಜೆ ಮಾಡಬೇಕು ಎಂದು ತಮಿಳುನಾಡಿನಿಂದ ಬಂದ ಸ್ವಾಮೀಜಿ 2.40 ಲಕ್ಷ ಮೌಲ್ಯದ ಚಿನ್ನದ ಮಾಂಗಲ್ಯ ಸರದೊಂದಿಗೆ ಎಸ್ಕೇಪ್ ಆಗಿದ್ದಾನೆ.
ಇಂದಿರಾನಗರ ಠಾಣಾ ವ್ಯಾಪ್ತಿಯ ಕದಿರಯ್ಯನಪಾಳ್ಯದಲ್ಲಿ ಈ ಘಟನೆ ನಡೆದಿದೆ.
ಮಾಂಗಲ್ಯ ಸರ ಕಳೆದುಕೊಂಡ ಸುಗುಣಾ ಎಂಬಾಕೆ ಇದೀಗ ಠಾಣೆ ಮೆಟ್ಟಲೇರಿದ್ದು ಆಕೆಯ ದೂರಿನನ್ವಯ ಇಂದಿರಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ :
ಕೌಟುಂಬಿಕ ಕಲಹದಿಂದ ಬೇಸತ್ತಿದ್ದ ಸುಗುಣ, ತಮಿಳುನಾಡು ಮೂಲದ ರಾಜ ಎಂಬ ಸ್ವಾಮೀಜಿಯನ್ನ ಫೋನ್ ಮೂಲಕ ಸಂಪರ್ಕಿಸಿ ಸಮಸ್ಯೆಗೆ ಪರಿಹಾರ ಕೇಳಿದ್ದರು.
ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳ ಸ್ವಾಮಿ ಮನೆಗೆ ಬಂದು ಪೂಜೆ ಮಾಡಿ ಸಮಸ್ಯೆ ಬಗೆಹರಿಸುತ್ತೇನೆ ಎಂದಿದ್ದ ಆರೋಪಿ ಸುಗುಣಾರ ಮನೆಗೆ ಬಂದಿದ್ದ. ಸಂಜೆ 4ರಿಂದ 4:45ರವರೆಗೂ ಮನೆಯೊಳಗೆ ಪೂಜೆ ಮಾಡಿ ಬಳಿಕ ಪೂಜೆ ಸಲ್ಲಿಸಿದ್ದ ಸ್ಥಳದಲ್ಲಿ ಮಾಂಗಲ್ಯ ಸರವನ್ನ ಬಿಚ್ಚಿಡುವಂತೆ ಮಹಿಳೆಗೆ ಸೂಚಿಸಿದ್ದನೆ.
ಅದರಂತೆ ಸುಗುಣಾ ತಮ್ಮ ಮಾಂಗಲ್ಯ ಸರವನ್ನ ಬಿಚ್ಚಿಟ್ಟು ಮನೆಯ ಹೊರಗಡೆ ಪೂಜೆ ಸಲ್ಲಿಸಲು ಹೋದಾಗ ಆರೋಪಿ ಕಳ್ಳ ಸ್ವಾಮೀಜಿ ಸರ ಸಮೇತ ಪರಾರಿಯಾಗಿದ್ದಾನೆ.
ಸದ್ಯ ಇಂದಿರಾನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.