LATEST NEWS
ಮಂಗಳೂರಿನಲ್ಲಿ ಮಗನಿಂದಲೇ ತಂದೆಯ ಹತ್ಯೆ – ಶಂಕೆ

ಮಂಗಳೂರಿನಲ್ಲಿ ಮಗನಿಂದಲೇ ತಂದೆಯ ಹತ್ಯೆ – ಶಂಕೆ
ಮಂಗಳೂರು ಜನವರಿ 27: ಮಂಗಳೂರಿನಲ್ಲಿ ವ್ಯಕ್ತಿಯೊರ್ವರು ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದ್ದು, ಮಗನಿಂದಲೇ ತಂದೆಯ ಕೊಲೆ ನಡೆದಿದೆ ಎಂದು ಶಂಕೆ ವ್ಯಕ್ತವಾಗಿದೆ.
ಮಂಗಳೂರಿನ ಬೋಳೂರಿನಲ್ಲಿ ಈ ಘಟನೆ ನಡೆದಿದ್ದು ಮೃತಪಟ್ಟವರನ್ನು ಈಶ್ವರ ಪೂಜಾರಿ(76) ಎಂದು ಗುರುತಿಸಲಾಗಿದೆ. ಲಾರಿ ಚಾಲಕನಾಗಿದ್ದ ಮಗ ರಮೇಶ್ (40)ನಿಂದ ಈ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ.

ತಂದೆ ಮಗ ಪ್ರತಿದಿನ ಮಧ್ಯಪಾನ ಮಾಡಿ ಗಲಾಟೆ ಮಾಡುತ್ತಿದ್ದರು ಎಂದು ತಿಳಿದು ಬಂದಿದ್ದು, ನಿನ್ನೆ ರಾತ್ರಿಯೂ ತಂದೆಯೊಂದಿಗೆ ಮಂಗ ಜಗಳವಾಡಿದ್ದ ಎಂದು ಹೇಳಲಾಗಿದೆ. ಅಲ್ಲದೆ ಚೂರಿ ಹಿಡಿದು ತಂದೆಗೆ ಇರಿಯಲು ಯತ್ನಿಸಿದ್ದ ಎಂದು ಹೇಳಲಾಗಿದೆ. ಈ ಹಿನ್ನಲೆಯಲ್ಲಿ ಮಗನೇ ತಂದೆಯನ್ನು ಕೊಂದು ನೇಣಿ ಹಾಕಿರುವ ಶಂಕೆಯನ್ನು ವ್ಯಕ್ತಪಡಿಸಲಾಗಿದೆ.
ಇಂದು ಮನೆಯೊಳಗೇ ನೇಣು ಬಿಗಿದ ಸ್ಥಿತಿಯಲ್ಲಿ ಈಶ್ವರ ಪೂಜಾರಿ ಮೃತದೇಹ ಪತ್ತೆಯಾಗಿದೆ. ಬರ್ಕೆ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ.