Connect with us

    DAKSHINA KANNADA

    ಶಿರೂರು ಸ್ವಾಮೀಜಿ ಸಾವಿನ ಸುತ್ತ ಅನುಮಾನಗಳ ಹುತ್ತ..!!

    ಶಿರೂರು ಸ್ವಾಮೀಜಿ ಸಾವಿನ ಸುತ್ತ ಅನುಮಾನಗಳ ಹುತ್ತ..!!

    ಉಡುಪಿ, ಜುಲೈ 19 : ಇಂದು ಮುಂಜಾನೆ ಮಣಿಪಾಲದ ಆಸ್ಪತ್ರೆಯಲ್ಲಿ ವಿಧಿವಶರಾದ ಶಿರೂರು ಶ್ರೀಗಳ ದೇಹ ಆಸ್ಪತ್ರೆಯಿಂದ ಶವಗಾರಕ್ಕೆ ರವಾನೆ ಮಾಡಲಾಗಿದೆ.

    ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕೃಷ್ಣ ಮಠಕ್ಕೆ ತಂದು ಅಲ್ಲಿ ಧಾರ್ಮಿಕ ವಿಧಿವಿಧಾನಗಳು ನಡಯಲಿವೆ.

    ಆ ಬಳಿಕ ಮಧ್ವ ಸರೋವರದಲ್ಲಿ ಶುದ್ಧಿ ಆರತಿ ಬಳಿಕ ಕೃಷ್ಣ ದರ್ಶನ ಇಷ್ಟು ವಿಧಿಗಳು ಮುಗಿದ ಬಳಿಕ ಸ್ವಾಮೀಜಿ ದೇಹವನ್ನು ಮೂಲಮಠದಲ್ಲಿ ಸಮಾಧಿ ಮಾಡಲಾಗುವುದು ಎಂದು ಮಠದ ಮೂಲಗಳು ತಿಳಿಸಿವೆ.

    ಶಿರೂರು ಶ್ರೀಗಳ ನಿಧನ ವಾರ್ತೆ ಕೇಳಿ ಅನೇಕ ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.

    ವಿಪರೀತ ರಕ್ತಸ್ರಾವ ಕಾರಣ ?:

    ಶಿರೂರು ಸ್ವಾಮೀಜಿಗೆ ವಿಪರೀತ ರಕ್ತ ಸ್ರಾವ ಆಗಿತ್ತು. ಇಂದು ಮುಂಜಾನೆ 8:30 ರ ಸುಮಾರಿಗೆ ಚಿಕಿತ್ಸೆ ಫಲಕಾರಿ ಆಗದೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.

    ಸದಾ ಒಂದಲ್ಲ ಒಂದು ವಿವಾದಗಳಿಂದಲೇ ಚಿರಪರಿಚಿತರಾಗಿರುವ ಶಿರೂರು ಸ್ವಾಮೀಜಿ ಹಠತ್ ಸಾವಿನ ಹಿಂದೆ ಆನೇಕ ಸಂಶಯಗಳು ಹುಟ್ಟು ಹಾಕಿವೆ.

    ಸ್ವಾಮೀಜಿಗೆ ವಿಷಪ್ರಾಷನ ವಾದ ಶಂಕೆ ವ್ಯಕ್ತವಾಗಿದೆ.

    ಮತ್ತೊಂದೆಡೆ ಫುಡ್ ಪಾಯಿಸನ್ ನಿಂದಲೂ ಇದು ಆಗಿರ ಬಹುದು ಎಂದು ಅಂದಾಜಿಸಲಾಗಿದೆ.

    ಈ ಬಗ್ಗ ಪ್ರತಿಕ್ರೀಯಿಸಿರುವ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಅವಿನಾಶ್ ಶೆಟ್ಟಿ ಈ ಬಗ್ಗೆ ಈಗಾಗಲೇ ಪೋಲಿಸರಿಗೆ ಮಾಹಿತಿ ನೀಡಿದ್ದೇವೆ.

    ಮರಣೋತ್ತರ ಪರೀಕ್ಷೆ ನಡೆಯುತ್ತದೆ. ಆ ಬಳಿಕ ಸಾವಿನ ಬಗ್ಗೆ ನಿಖರತೆ ಗೊತ್ತಾಗಲಿದೆ ಎಂದು ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply