Connect with us

    DAKSHINA KANNADA

    ಕಾಲೇಜಿಗೆ ಹಿಜಾಬ್ ಧರಿಸಿ‌ ಬಂದಲ್ಲಿ ಸಸ್ಪೆಂಡ್‌: ಶಾಸಕ ಸಂಜೀವ ಮಠಂದೂರು ವಾರ್ನಿಂಗ್‌

    ಪುತ್ತೂರು, ಜೂನ್ 07: ಹಿಜಾಬ್ ಪರ ಪ್ರತಿಭಟನೆ ನಡೆಸಿದ 24 ವಿದ್ಯಾರ್ಥಿನಿಯರನ್ನು ನಿನ್ನೆ ಸಸ್ಪೆಂಡ್ ಮಾಡಲಾಗಿದೆ. ಇವತ್ತು ಪ್ರತಿಭಟನೆ ಮಾಡಿದಲ್ಲಿ ಅದೇ ರೀತಿಯ ಕ್ರಮ ಜರುಗಿಸಲಾಗುವುದು ಎಂದು ಉಪ್ಪಿನಂಗಡಿ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗು ಪುತ್ತೂರು ಶಾಸಕ ಸಂಜೀವ ಮಠಂದೂರು ಆರೋಪಿಸಿದ್ದಾರೆ.

    ಪುತ್ತೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಹೈಕೋರ್ಟ್ ಮತ್ತು‌ ಕಾಲೇಜು‌ ಅಭಿವೃದ್ಧಿ ಸಮಿತಿಯ ಆದೇಶ ಉಲ್ಲಂಘಿಸಿದವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದ ಅವರು ಹಿಜಾಬ್ ಪರ ಪ್ರತಿಭಟನೆ ನಡೆಸಿದ 24 ವಿದ್ಯಾರ್ಥಿನಿಯರನ್ನು ನಿನ್ನೆ ಸಸ್ಪೆಂಡ್ ಮಾಡಲಾಗಿದೆ. ಇವತ್ತು ಪ್ರತಿಭಟನೆ ಮಾಡಿದಲ್ಲಿ ಅದೇ ರೀತಿಯ ಕ್ರಮ ಜರುಗಿಸಲಾಗುವುದು.

    ವಿದ್ಯಾರ್ಥಿನಿಯರಿಗೆ ಪಾಠ ಮುಖ್ಯವೋ, ಧಾರ್ಮಿಕತೆ ಮುಖ್ಯವೋ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಕಾಂಗ್ರೆಸ್ ಮುಖಂಡ ಯು.ಟಿ.ಖಾದರ್ ಹಿಜಾಬ್ ಕುರಿತ ವಾಸ್ತವಿಕತೆಯನ್ನು ಹೇಳಿದ್ದಾರೆ. ಓರ್ವ ಮುಸ್ಲಿಂ ಮುಖಂಡನ ಮಾತನ್ನು ವಿದ್ಯಾರ್ಥಿಗಳು ಒಪ್ಪಿಕೊಳ್ಳಬೇಕು. ವಿದ್ಯಾರ್ಥಿಗಳ ಬೇಜಾವಬ್ದಾರಿಯ ನಡೆಯನ್ನು ಇನ್ನು ಸಹಿಸುವುದಿಲ್ಲ. ಸರಕಾರಿ ಕಾಲೇಜು ಸರ್ವ ಧರ್ಮೀಯರಿಗೆ ಪಾಠ, ಪ್ರವಚನ ನೀಡುವ ಕೇಂದ್ರವಾಗಿದೆ. ಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು ಎಲ್ಲಾ ಪ್ರಯತ್ನಗಳನ್ನು ನಡೆಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

    ಕಾಲೇಜಿಗೆ ವರದಿಗೆ ತೆರಳಿದ ಪತ್ರಕರ್ತರ ಮೇಲೆ ಹಲ್ಲೆ ಪ್ರಕರಣ ಸಂಬಂಧಿಸಿದಂತೆ ಈಗಾಗಲೇ ಎಫ್.ಐ.ಆರ್ ದಾಖಲಾಗಿದೆ. ಆರೋಪಿಗಳ ಮೇಲೆ ಸೂಕ್ತ ಕ್ರಮಕೈಗೊಳ್ಳಲು ಎಸ್.ಪಿ ಮತ್ತು ಡಿವೈಎಸ್ಪಿ ಗೆ ಸೂಚಿಸಿದ್ದೇನೆ. ಪತ್ರಕರ್ತರು ಈಗಾಗಲೇ ಮನವಿ ಮತ್ತು ಪ್ರತಿಭಟನೆಯನ್ನೂ ಮಾಡಿದ್ದಾರೆ. ಗೃಹಸಚಿವರು ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮದ ಭರವಸೆಯನ್ನೂ ನೀಡಿದ್ದಾರೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *