FILM
ಹಾರ್ಟ್ ಅಟ್ಯಾಕ್ ನಿಂದ ಚೇತರಿಸಿಕೊಂಡು ಜಿಮ್ ನಲ್ಲಿ ಬೆವರಿಳಿಸುತ್ತಿರುವ ನಟಿ ಸುಶ್ಮಿತಾ ಸೇನ್
ಮುಂಬೈ ಮಾರ್ಚ್ 08 : ಕಳೆದ ವಾರವಷ್ಟೇ ಹಾರ್ಟ್ ಅಟ್ಯಾಕ್ ನಿಂತ ಚೇತರಿಸಿಕೊಂಡಿದ್ದ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಇದೀಗ ಜಿಮ್ ನಲ್ಲಿ ವರ್ಕೌಟ್ ಆರಂಭಿಸಿದ್ದಾರೆ.
ತಮಗೆ ಹೃದಯಾಘಾತದಿಂದಾಗಿ ಸ್ಟಂಟ್ ಆಳವಡಿಸಲಾಗಿದೆ ಎಂದು ನಟಿ ಸುಶ್ಮಿತಾ ಸೇನ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಂತರ ಮಾರ್ಚ್ 4ರಂದು ಇನ್ಸ್ಟಾಗ್ರಾಮ್ ಲೈವ್ನಲ್ಲಿ ಮಾತನಾಡಿದ್ದ 47 ವರ್ಷದ ನಟಿ, ದೊಡ್ಡ ಹೃದಯಾಘಾತದ ಬಳಿಕವೂ ನಾನು ಬದುಕುಳಿದೆ. ನನ್ನ ಅನಾರೋಗ್ಯಕ್ಕೆ ಜೀವನಶೈಲಿಯೇ ಕಾರಣ ಎಂದು ಹೇಳಿದ್ದರು.
ಜೀವನಚಕ್ರಕ್ಕೆ ಹೃದ್ರೋಗ ತಜ್ಞರು ಹಸಿರು ನಿಶಾನೆ ತೋರಿದ್ದಾರೆ. ಸ್ಟ್ರೆಚಿಂಗ್ ಆರಂಭವಾಗಿದೆ. ಎಂತಹ ಅನುಭವ. ನಿಧಾನವಾದ ಉಸಿರಾಟ. ಇದು ನನ್ನ ಅತ್ಯಂತ ಸಂತಸದ ಹೋಳಿ. ನಿಮ್ಮ ಹೋಳಿ ಸಂಭ್ರಮ ಹೇಗಿದೆ? ಐ ಲವ್ ಯೂ’ಎಂದು ಬರೆದುಕೊಂಡಿರುವ ಮಾಜಿ ಭುವನ ಸುಂದರಿ, ತಮ್ಮ ಸ್ಟ್ರೆಚಿಂಗ್ ಚಿತ್ರವನ್ನೂ ಹಂಚಿಕೊಂಡಿದ್ದಾರೆ.