Connect with us

    FILM

    ಪ್ರಿಯಕರನೊಂದಿಗೆ ಸಂಬಂಧ ಕಡಿದುಕೊಂಡ ಮಾಜಿ ಭುವನ ಸುಂದರಿ ಸುಷ್ಮಿತಾ ಸೇನ್

    ಮುಂಬೈ: ಮಾಜಿ ಭುವನ ಸುಂದರಿ ಸುಷ್ಮೀತಾ ಸೇನ್ ತಮ್ಮ ಗೆಳೆಯನೊಂದಿಗಿನ ಲಿವಿಂಗ್ ರಿಲೇಷನ್ ಶಿಪ್ ನ್ನು ಕೊನೆಗೊಳಿಸಿದ್ದಾರೆ. ಭಾರತದ ಮೊದಲ ‘ಭುವನ ಸುಂದರಿ ಯಾಗಿರುವ ಬಾಲಿವುಡ್‌ ನಟಿ ಸುಷ್ಮಿತಾ ಸೇನ್‌ ಮಾಡೆಲ್ ಪ್ರಿಯಕರ ರೋಹಮನ್ ಶಾಲ್ ಅವರೊಂದಿಗೆ 3 ವರ್ಷಗಳ ಕಾಲ ಡೆಟಿಂಗ್ ನಲ್ಲಿದ್ದರು.


    ಆ ಬಗ್ಗೆ ಸ್ವತಃ ಸುಷ್ಮಿತಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ ಅವರು ಸುಮಾರು ಮೂರು ವರ್ಷಗಳಿಂದ ಸುಷ್ಮಿತಾ ಮತ್ತು ರೋಹಮನ್‌ ಡೆಟಿಂಗ್ ನಲ್ಲಿದ್ದರು. ಆದರೆ ಇತ್ತೀಚೆಗೆ ಇಬ್ಬರೂ ಬೇರೆಯಾಗಿರುವ ಬಗ್ಗೆ ಗಾಳಿ ಸುದ್ದಿಯೂ ಹಬ್ಬಿತ್ತು. ಇದೀಗ ಸುಷ್ಮಿತಾ ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

    ರೋಹಮನ್‌ ಜೊತೆಗಿರುವ ಚಿತ್ರ ಪ್ರಕಟಿಸಿರುವ ಅವರು, ನಾವು ಗೆಳೆಯರಾಗಿ ಮುಂದುವರಿಯಲಿದ್ದೇವೆ ಎಂದಿದ್ದಾರೆ. ನಮ್ಮ ನಡುವೆ ಸ್ನೇಹವು ಮೊದಲಾಯಿತು, ನಾವು ಸ್ನೇಹಿತರಾಗಿಯೇ ಇರುತ್ತೇವೆ! ಸಂಬಂಧ ದೂರವಾಗಿದೆ…ಪ್ರೀತಿ ಉಳಿದಿದೆ!! ಇನ್ನಾವುದೇ ಊಹಾಪೋಹಗಳೂ ಬೇಡ, ಬದುಕಿ ಮತ್ತು ಬದುಕಲು ಬಿಡಿ….’ ಎಂದು ಪ್ರಕಟಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *