LATEST NEWS
ಸುರತ್ಕಲ್ ಅಕ್ರಮ ಟೋಲ್ ಗೇಟ್ ವಿರೋಧಿ ಹೋರಾಟ ಹೆಚ್ಚುತ್ತಿರುವ ಜನ ಬೆಂಬಲ
ಸುರತ್ಕಲ್ ಅಕ್ರಮ ಟೋಲ್ ಗೇಟ್ ವಿರೋಧಿ ಹೋರಾಟ ಹೆಚ್ಚುತ್ತಿರುವ ಜನ ಬೆಂಬಲ
ಮಂಗಳೂರು ಅಕ್ಟೋಬರ್ 24: ಸುರತ್ಕಲ್ ಅಕ್ರಮ ಟೋಲ್ ಕೇಂದ್ರವನ್ನು ಮುಚ್ಚುವಂತೆ ಒತ್ತಾಯಿಸಿ ಟೋಲ್ ವಿರೋಧಿ ಹೋರಾಟ ಸಮಿತಿಯ ವತಿಯಿಂದ ಸುರತ್ಕಲ್ ಜಂಕ್ಷನ್ ನಲ್ಲಿ ನಡೆಯುತ್ತಿರುವ ಧರಣಿ 2 ದಿನ ಪೂರೈಸಿದೆ. ಮಹಿಳೆಯರು , ವಿದ್ಯಾರ್ಥಿಗಳು , ಹಿರಿಯರು ಬಂದು ಕೆಲ ಹೊತ್ತು ಕುಳಿತು ಅಲ್ಲಿರುವ ದಾಖಲಾತಿ ಪುಸ್ತಕದಲ್ಲಿ ಸಹಿ ಹಾಕಿ ಸುರತ್ಕಲ್ ನಲ್ಲಿರುವ ಅಕ್ರಮ ಟೋಲ್ ಗೇಟ್ ಅನ್ನು ಮುಚ್ಚುವುದಕ್ಕೆ ತಮ್ಮ ಬೆಂಬಲ ಸೂಚಿಸಿ ಹೋಗುತ್ತಿದ್ದಾರೆ.
ಇಷ್ಟೆಲ್ಲಾ ಆಗುತ್ತಿದ್ದರೂ ಸರ್ಕಾರ , ಸಂಸದರು ಮತ್ತು ಹೆದ್ದಾರಿ ಪ್ರಾಧಿಕಾರ ಇದಕ್ಕೂ ತಮಗೂ ಸಂಬಂಧವೇ ಇಲ್ಲವೆಂಬಂತೆ ಕಣ್ಣು ಮುಚ್ಚಿ ಕುಳಿತಿದೆ. ಹೋರಾಟ ಮುಂದುವರೆದಿದ್ದು. ನಿನ್ನೆ ರಾತ್ರಿಯಿಡೀ ಸೊಳ್ಳೆಗಳ ಕಾಟ ಸಹಿಸಿಕೊಂಡು ಧರಣಿ ಸ್ಥಳದಲ್ಲೇ ಕಾಲ ಕಳೆದ ಪ್ರತಿಭಟನಾಕಾರರು ಇಂದೂ ಅಲ್ಲೇ ರಾತ್ರಿ ಕಳೆಯಲಿದ್ದಾರೆ.
ಯಾವುದೇ ಕಾರಣಕ್ಕೂ ಸುರತ್ಕಲ್ ಅಕ್ರಮ ಟೋಲ್ ಸಂಗ್ರಹ ಕೇಂದ್ರ ಇನ್ನು ಮುಂದುವರೆಯಲು ಬಿಡಬಾರದು ಎಂಬ ಸಂಕಲ್ಪ ಹೋರಾಟಗಾರಲ್ಲಿದೆ. ಆದರೆ ಕಳೆದ 2 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಬೆಂಬಲಿಸಿ ಟೋಲ್ ಕೇಂದ್ರವನ್ನು ಮುಚ್ಚಿಸಬೇಕೆನ್ನುವ ಬದ್ಧತೆ ರಾಜಕೀಯ ಮುಖಂಡರಿಗೆ ಇಲ್ಲದೆ ಇರುವುದು ಎದ್ದು ಕಾಣುತ್ತಿದೆ. ಮಂಗಳೂರು ಸಂಸದ ನಳಿನ್ ಕುಮಾರ್ ಟೋಲ್ ಗೇಟ್ ಬಗ್ಗೆ ಯಾವುದೇ ಮಾತು ಆಡದೇ ಇರುವುದಕ್ಕೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.