LATEST NEWS
ಹೆಜಮಾಡಿಯಲ್ಲಿ ಸುರತ್ಕಲ್ ಟೋಲ್ – ಉಡುಪಿಯಲ್ಲಿ ಜನಪ್ರತಿನಿಧಿಗಳ ಸಭೆ
ಉಡುಪಿ ಡಿಸೆಂಬರ್ 3: ಹೆಜಮಾಡಿಯಲ್ಲಿ ಸುರತ್ಕಲ್ ಟೋಲ್ ವಸೂಲಿಗೆ ನವಯುಗ ಸಂಸ್ಥೆ ಪತ್ರಿಕಾ ಪ್ರಕಟಣೆ ಹೊರಡಿಸಿದ ಬೆನ್ನಲ್ಲೆ ಉಡುಪಿಯಲ್ಲಿ ಜನಪ್ರತಿನಿಧಿಗಳ ಹಾಗೂ ಅಧಿಕಾರಗಳ ತುರ್ತು ಸಭೆ ನಡೆದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಶಾಸಕ ರಘುಪತಿ ಭಟ್ ಸುರತ್ಕಲ್ ಟೋಲನ್ನು ಹೆಜಮಾಡಿ ಟೋಲ್ ಗೆ ವಿಲೀನಗೊಳಿಸಿದ್ದು ಅವೈಜ್ಞಾನಿಕವಾಗಿದ್ದು, ಇದರ ಬಗ್ಗೆ ರಾಜ್ಯ ಮಟ್ಟದಲ್ಲಿ ಸರ್ಕಾರದ ಹಂತದಲ್ಲಿ ಸಭೆ ನಡೆಸಿ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದ್ದು. ಸುರತ್ಕಲ್ ಟೋಲ್ ನಲ್ಲಿ ನೀಡಲಾದ ರಿಯಾಯಿತಿ ಸೌಲಭ್ಯವನ್ನು ಯಥವತ್ತಾಗಿ ಹೆಜಮಾಡಿ ಟೋಲಿಗೆ ಅನುಷ್ಠಾನಗೊಳಿಸುವಂತೆ ಚರ್ಚಿಸಲಾಗಿದೆ ಎಂದಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಸುನಿಲ್ ಕುಮಾರ್ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ತಪ್ಪಿನಿಂದ ಅವೈಜ್ಞಾನಿಕ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಸುರತ್ಕಲ್ ಟೋಲ್ ರದ್ದು ಮಾಡುವ ವೇಗದಲ್ಲಿ ದರ ಹೆಚ್ಚು ಮಾಡಿ ಹೆಜಮಾಡಿ ಮೇಲೆ ವರ್ಗಾಯಿಸಲಾಗಿದೆ ಶಾಸಕ ರಘುಪತಿ ಭಟ್ ದೆಹಲಿಯಲ್ಲಿ ಮಾತುಕತೆಯನ್ನು ಮಾಡಿದ್ದಾರೆ . ಮುಂದಿನ ವಾರ ಮುಖ್ಯಮಂತ್ರಿಗಳ ಜೊತೆ ನಾವು ಚರ್ಚೆ ಮಾಡುತ್ತೇವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಎರಡು ಪ್ರಸ್ತಾವನೆಗಳನ್ನ ನೀಡುತ್ತೇವೆ, ಒಂದು ಉಡುಪಿ ಜಿಲ್ಲೆಯ ಎಲ್ಲಾ ವಾಹನಗಳಿಗೆ ರಿಯಾಯಿತಿ ಕೊಡಬೇಕು, ಹೆಚ್ಚುವರಿ ಟೋಲ್ ಸಂಗ್ರಹ ಮಾಡಬಾರದು ಎಂಬುದು ನಮ್ಮ ಮೊದಲ ಬೇಡಿಕೆ, ಸುರತ್ಕಲ್ ಮೊತ್ತವನ್ನು ಹೆಜಮಾಡಿ ಮೇಲೆ ಹೇರದೆ ಯಾವ ರೀತಿ ನಿಭಾಯಿಸ ಬೇಕು ಎಂದು ದೆಹಲಿ ಮಟ್ಟದಲ್ಲಿ ಚರ್ಚೆ ಮಾಡಬೇಕು ಅಲ್ಲದೆ ಯಾವುದೇ ಸೂಕ್ತ ನಿರ್ಧಾರವಾಗದೆ ಹೆಚ್ಚುವರಿ ಟೂಲ್ ಸಂಗ್ರಹಿಸಬಾರದು ಎಂದರು.
ಈ ಬಗ್ಗೆ ಉಸ್ತುವಾರಿ ಸಚಿವ ಅಂಗಾರ ನಾವು ಎಲ್ಲಾ ಶಾಸಕರು ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇವೆ, ಲೋಕಸಭಾ ಸದಸ್ಯ ಶೋಭಾ ಕರಂದ್ಲಾಜೆ ಜೊತೆ ಮಾತನಾಡುತ್ತೇವೆ ಎಂದರು.