LATEST NEWS
ಸುರತ್ಕಲ್ – ಗ್ಯಾಸ್ ಸಿಲಿಂಡರ್ ಸ್ಪೋ*ಟ ಗಂಭೀರಗಾಯಗೊಂಡಿದ್ದ ಮಹಿಳೆ ಸಾವು
ಸುರತ್ಕಲ್ ಡಿಸೆಂಬರ್ 28: ಡಿಸೆಂಬರ್ 18 ರಂದು ಸಿಲಿಂಡರ್ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡು ಗಂಭೀರವಾಗಿ ಗಾಯಗೊಂಡಿದ್ದ ಮತ್ತೊರ್ವ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ. ಇದರೊಂದಿಗೆ ಘಟನೆಯಲ್ಲಿ ಮೃತ ಪಟ್ಟವರ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ.
ತಡಂಬೈಲ್ ವೆಂಕಟರಮಣ ಕಾಲನಿಯಲ್ಲಿ ಡಿ. 18ರಂದು ಅಡುಗೆ ಮನೆಯಲ್ಲಿದ್ದ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಹತ್ತಿಕೊಂಡ ಪರಿಣಾಮ ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದರು. ಅದರಲ್ಲಿ ಡಿಸೆಂಬರ್ 26 ರಂದು ಮನೆ ಯಜಮಾನ ವಾಮನ ಅವರ ಸಹೋದರಿ ಪುಷ್ಪಾ ಮೃತಪಟ್ಟರೆ, ಶುಕ್ರವಾರ ಪತ್ನಿ ವಸಂತಿ ಸಾವನ್ನಪ್ಪಿದ್ದಾರೆ. ಕಳೆದ 9 ದಿನಗಳಿಂದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿತ್ತು.