LATEST NEWS
ಸುರತ್ಕಲ್ – ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಕರಾವಳಿ ಸ್ಪೋಟ್ಸ್ ಮಳಿಗೆ

ಸುರತ್ಕಲ್ ಮೇ 13: ಆಕಸ್ಮಿಕ ಬೆಂಕಿಗೆ ಸುರತ್ಕಲ್ ನಲ್ಲಿರುವ ಕರಾವಳಿ ಸ್ಪೋಟ್ಸ್ ಮಳಿಗೆ ಹೊತ್ತಿ ಉರಿದಿದೆ.
ಕ್ರೀಡಾ ಸಾಮಗ್ರಿ ಸಿಗುವ ಬೃಹತ್ ಮಳಿಗೆ ಇದಾಗಿದ್ದು ಮಳಿಗೆಯ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಸಂಪೂರ್ಣ ಮಳಿಗೆಯನ್ನು ಆವರಿಸಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಸುತ್ತಮುತ್ತಲಿನ ಅಂಗಡಿ ವ್ಯಾಪಾರಸ್ಥರು ಮಳಿಗೆ ಬಂದ್ ಮಾಡಿ ಹೊರಬಂದರು.

ಸ್ಥಳಕ್ಕೆ ಅಗ್ನಿಶಾಮಕ ಇಲಾಖೆ ದೌಡಾಯಿಸಿದ್ದು ಅಗ್ನಿಶಾಮಕ ಇಲಾಖೆಯಿಂದ ಬೆಂಕಿನಂದಿಸುವ ಕಾರ್ಯಾಚರಣೆ ನಡೆಯುತ್ತಿದೆ. ಇನ್ನು ನೀರು ಹಾಯಿಸಿದಷ್ಟು ಮಳಿಗೆ ಹೊತ್ತಿ ಉರಿಯುತ್ತಿದೆ ಎಂದು ತಿಳಿದು ಬಂದಿದೆ. ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.