LATEST NEWS
ಸುರತ್ಕಲ್ ಬಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ 5 ಜನ ಆರೋಪಿಗಳ ಬಂಧನ

ಸುರತ್ಕಲ್ ಬಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ 5 ಜನ ಆರೋಪಿಗಳ ಬಂಧನ
ಮಂಗಳೂರು ಡಿಸೆಂಬರ್ 5: ಸುರತ್ಕಲ್‌ನಲ್ಲಿನ ಬಾರ್‌ವೊಂದರಲ್ಲಿ ಯುವಕನ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಜನ ಆರೋಪಿಗಳನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸ್ಥಳೀಯ ನಿವಾಸಿಗಳಾದ ಮನೋಜ್ , ಶರತ್ , ಪ್ರವೀಣ್ ಕುಂದರ್ , ದೀಪಕ್ ರಾಜ್ , ಮಿಥುನ್ ಎಂದು ಗುರುತಿಸಲಾಗಿದೆ. ನವೆಂಬರ್ 29ರಂದು ರಾತ್ರಿ ಗುಡ್ಡೆಕೊಪ್ಲದ ಸಂದೇಶ್ ಎಂಬಾತನನ್ನು ಬಾರ್ ವೊಂದರಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು.

ಮೀನುಗಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಸಂದೇಶ್, ಶಬರಿಮಲೆಗೆ ತೆರಳಿ ನವೆಂಬರ್ 28 ರಂದು ವಾಪಸಾಗಿದ್ದ. ಮರುದಿನ ರಾತ್ರಿ ಸುರತ್ಕಲ್ ಜಂಕ್ಷನ್ ಸಮೀಪದ ಖಾಸಗಿ ಬಾರ್ ಮುಂಭಾಗ ತನ್ನ ಸ್ನೇಹಿತರನ್ನು ಭೇಟಿಯಾಗಲು ತೆರಳಿದ್ದ. ನವರಾತ್ರಿ ಸಮಯದಲ್ಲಿ ಹುಲಿವೇಷ ಹಾಕುವ ತಂಡವನ್ನು ಮುನ್ನಡೆಸುವ ವಿಚಾರವಾಗಿ ಗೆಳೆಯರ ನಡುವೆ ಈ ಹಿಂದೆ ಆಗಿದ್ದ ಮನಸ್ತಾಪ ಮುನ್ನಲೆಗೆ ಬಂದು ಕುಡಿದ ಮತ್ತಿನಲ್ಲಿದ್ದ ಆರೋಪಿಗಳು, ಬಾರ್‌ನ ಬಾಗಿಲಿನ ಒಳ ಚಿಲಕ ಹಾಕಿ ಸಂದೇಶ್‌ನನ್ನು ಮಾರಕ ಆಯುಧಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಬಳಿಕ ಪರಾರಿಯಾಗಿದ್ದರುಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.