LATEST NEWS
ಸುರತ್ಕಲ್ – ರಸ್ತೆ ದಾಟುತ್ತಿದ್ದ ವಿಧ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆದ ಕಾರು – ವಿಧ್ಯಾರ್ಥಿನಿ ಸ್ಥಿತಿ ಗಂಭೀರ

ಸುರತ್ಕಲ್ ಡಿಸೆಂಬರ್ 11: ರಸ್ತೆ ದಾಟುತ್ತಿದ್ದ ವಿಧ್ಯಾರ್ಥಿನಿಯರಿಗೆ ರಾಂಗ್ ಸೈಡ್ ನಿಂದ ಬಂದ ಕಾರೊಂದು ಡಿಕ್ಕಿ ಹೊಡೆದ ಘಟನೆ ನಡೆದಿದ್ದು, ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯಗೊಂಡ ಘಟನೆ ಸುರತ್ಕಲ್ ಜಂಕ್ಷನ್ ಬಳಿ ನಡೆದಿದೆ.
ಸ್ಥಳೀಯ ಕಾಲೇಜಿನ ಎರಡನೇ ವರ್ಷದ ‘ಹೆಲ್ತ್ ಅಲೈಡ್ ಸೈನ್ಸ್’ ವಿಭಾಗದ ಕೇರಳ ಮೂಲದ ವಿದ್ಯಾರ್ಥಿನಿಯರಾದ ಭಾವನಾ (19), ಮಯೂರಿ (19) ಗಂಭೀರ ಗಾಯಗೊಂಡವರು.
ಕಾಲೇಜಿಗೆ ಹೋಗಲು ಸುರತ್ಕಲ್‌ನಲ್ಲಿರುವ ಪಿ.ಜಿ.ಯಿಂದ ಹೊರಟು ನಟರಾಜ್ ಟಾಕೀಸ್ ಬಳಿಯ ಬಸ್ ನಿಲ್ದಾಣದ ಬಳಿ ಹೆದ್ದಾರಿ ದಾಟಲು ಯತ್ನಿಸಿದ ವೇಳೆ ‘ಒನ್‌ವೇ’ಯಲ್ಲಿ ಬಂದ ಕಾರು ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ವಿದ್ಯಾರ್ಥಿನಿಯರ ತಲೆ, ಕೈ, ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಸುತ್ತಮುತ್ತಲಿನ ಅಂಗಡಿಯವರು, ಬಾಡಿಗೆ ವಾಹನದ ಚಾಲಕರು ಅವರನ್ನು ಆಸ್ಪತ್ರೆಗೆ ಸೇರಿಸಿದರು. ಇಬ್ಬರೂ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳೂರು ಉತ್ತರ ಸಂಚಾರ ಠಾಣಾ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.