LATEST NEWS
ಸುರತ್ಕಲ್ : ರಸ್ತೆ ಬದಿ ಸತ್ತ ಕುರಿಗಳನ್ನು ಎಸೆದು ಹೋದ ಪ್ರಕರಣ,ಕಾವೂರು ಪೊಲೀಸ್ ಠಾಣೆಯಲ್ಲಿ FIR ದಾಖಲು..!

ಸುರತ್ಕಲ್ : ಮಂಗಳೂರು ಹೊರಲಯದ ಸುರತ್ಕಲ್ ಹಳೇ ಟೋಲ್ ಗೇಟ್ ಬಳಿ ಸತ್ತ ಕುರಿಗಳನ್ನು ಎಸೆದು ಹೋದವರ ಮೇಲೆ ನಗರದ ಕಾವೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಯಾರೋ ದುಷ್ಕರ್ಮಿಗಳು ಸುಮಾರು 15 ಸತ್ತ ಕುರಿಗಳನ್ನು ಸುರತ್ಕಲ್ NITK ಹಳೆ ಟೋಲ್ ಗೇಟ್ ಬಳಿ ಭಾನುವಾರ ಬೆಳಿಗ್ಗೆ ಎಸೆದು ಹೋಗಿದ್ದು, ಸ್ಥಳೀಯರು 2 ನೇ ವಾರ್ಡ್ ನ ಕಾರ್ಪೋರೇಟರ್ ಶ್ವೇತಾ ಪೂಜಾರಿ ಇವರಿಗೆ ಮಾಹಿತಿ ನೀಡಿದ ಮೇರೆಗೆ ಅವರು ಮಹಾನಗರಪಾಲಿಕೆಯ ಅಧಿಕಾರಿ ಹಾಗೂ ಸಿಬ್ಬಂದಿ ರೊಂದಿಗೆ ಸ್ಥಳಕ್ಕೆ ಹೋಗಿ ಸತ್ತ ಕುರಿಗಳ ಮೃತ ದೇಹಗಳನ್ನು ಸುರಕ್ಷಿತ ಸ್ಥಳದಲ್ಲಿ ಧಫನ ಮಾಡಿಸಿದ್ದರು. ಉತ್ತರ ಕರ್ನಾಟಕ ಕಡೆಯಿಂದ ಕುರಿಸಾಗಾಟ ವಾಹನಗಳಲ್ಲಿ ಮಂಗಳೂರಿಗೆ ಕುರಿ ಮಾರಾಟ ಮಾಡುವ ವ್ಯಾಪಾರಿಗಳು ಸಾಗಾಟದ ವೇಳೆ ಮೃತ ಪಟ್ಟ ಕುರಿಗಳನ್ನು ವಾಪಾಸು ಹೋಗುವ ವೇಳೆಗೆ ರಸ್ತೆ ಪಕ್ಕದಲ್ಲಿ ಪೊದೆಗಳಲ್ಲಿ ಎಸೆದು ಹೋಗಿರುತ್ತಾರೆ ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ. ಅಂತಹ ವ್ಯಕ್ತಿಗಳ ಪತ್ತೆಗೆ ಕ್ರಮ ವಹಿಸಲಾಗಿದೆ ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
