Connect with us

    DAKSHINA KANNADA

    ಸುರತ್ಕಲ್‌: ಮಾಜಿ ರೌಡಿ ಶೀಟರ್‌ ಕೋಡಿಕೆರೆ ಲೋಕು ವಿರುದ್ಧ FIR ..!

    ಮಂಗಳೂರು, ಎಪ್ರಿಲ್ 01: ಮಾಜಿ ರೌಡಿ ಶೀಟರ್‌ ಲೋಕೇಶ್ ಕೋಡಿಕೆರೆ ಯಾನೆ ಲೋಕು ವಿರುದ್ಧ ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಗಾಂಜಾ ಸೇವನೆ ವಿರುದ್ಧ ಪ್ರಕರಣ ದಾಖಲಾಗಿದೆ.

    ಮಾ.31 ರಂದು ಸಾರ್ವಜನಿಕರಿಗೆ ಮತದಾನಕ್ಕೆ ತೊಂದರೆಯಾಗದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸುರತ್ಕಲ್‌ ಪೊಲೀಸ್‌ ಠಾಣೆಯ ಪಿಎಸ್‌ಐ ಪ್ರದೀಪ್ ಟಿ.ಆರ್ ಠಾಣಾ ವ್ಯಾಪ್ತಿಯ ಹಳೆ ರೌಡಿ ಶೀಟರ್‌ ಲೋಕೇಶ್ ಕೋಡಿಕೆರೆ ಯಾನೆ ಲೋಕು ಮನೆಗೆ ತೆರಳಿದ್ದಾರೆ.

    ಈ ವೇಳೆ ಆತನನ್ನು ವಿಚಾರಣೆ ನಡೆಸುತ್ತಿದ್ದಾಗ ಗಾಂಜಾ ಸೇವಿಸಿದ ಬಗ್ಗೆ ವೈದ್ಯಕೀಯ ದಾಖಲೆ ಧೃಡಪಟ್ಟಿದೆ. ಈ ಬಗ್ಗೆ ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply