LATEST NEWS
ಐಷಾರಾಮಿ ಕಾರುಗಳೊಂದಿಗೆ ವಿಧ್ಯಾರ್ಥಿಗಳ ರೀಲ್ಸ್ ಶೋ – ಕ್ರಮಕ್ಕೆ ಮುಂದಾದ ಪೊಲೀಸರು
![](https://i0.wp.com/themangaloremirror.in/wp-content/uploads/2024/04/For-Advertisement-Please-Contact-1.jpg?fit=728%2C90&ssl=1)
ಸೂರತ್ ಫೆಬ್ರವರಿ 11: 30ಕ್ಕೂ ಅಧಿಕ ಐಷಾರಾಮಿ ಕಾರುಗಳೊಂದಿಗೆ ರಸ್ತೆಯಲ್ಲಿ ರೋಡ್ ಶೋ ಮಾಡಿದ ಶಾಲಾ ಮಕ್ಕಳ ವಿರುದ್ದ ಇದೀಗ ಪೊಲೀಸರು ಗರಂ ಆಗಿದ್ದು, ಮಕ್ಕಳ ವಿರುದ್ಧ ತನಿಖೆಗೆ ಪೊಲೀಸರು ಮುಂದಾಗಿದ್ದು, ಕಾರ್ ಮಾಲೀಕರ ವಿರುದ್ಧವೂ ಕೂಡ ಕ್ರಮಕ್ಕೆ ಸಜ್ಜಾಗಿದ್ದಾರೆ.
ಗುಜರಾತ್ನ ಸುರತ್ನಲ್ಲಿರುವ ಜಹಾಂಗೀಪುರದಲ್ಲಿ ನಡೆದ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಮವಸ್ತ್ರ ಧರಿಸಿದ ಶಾಲಾ ವಿದ್ಯಾರ್ಥಿಗಳು ಐಷಾರಾಮಿ ಕಾರುಗಳು ಜೊತೆ ರೋಡ್ ಶೋ ನಡೆಸಿದ್ದಾರೆ. ಅಲ್ಲದೆ ರೋಡ್ ಶೋ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋ಼ಡ್ ಮಾಡಿದ್ದಾರೆ. ಇದು ವೈರಲ್ ಆದ ಬೆನ್ನಲ್ಲೆ ಪೊಲೀಸರು ಗರಂ ಆಗಿದ್ದು. ಕಾರು ಕೊಟ್ಟವರು ಸೇರಿದಂತೆ ವಿಧ್ಯಾರ್ಥಿಗಳ ಮೇಲೆ ಕ್ರಮಕ್ಕೆ ಮುಂದಾಗಿದ್ದಾರೆ.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
ಮಾಧ್ಯಮಗಳ ಜೊತೆ ಮಾತನಾಡಿದ ಪೊಲೀಸ್ ಅಧಿಕಾರಿಗಳು ಶಾಲೆಯೊಂದರ ಬಳಿ ಈ ಒಂದು ವಿಡಿಯೋ ಶೂಟ್ ಮಾಡಲಾಗಿದೆ. ಈಗಾಗಲೇ ನಾವು ಕಾರ್ ಮಾಲೀಕರ ವಿಳಾಸಕ್ಕೆ ಸಮನ್ಸ್ ಕಳುಹಿಸುವ ಕಾರ್ಯ ಆರಂಭ ಮಾಡಿದ್ದೇವೆ. ಒಂದು ಬಾರಿ ತನಿಖೆ ಮುಗಿದ ಬಳಿಕ ಮುಂದಿನ ಕಾನೂನು ಕ್ರಮವನ್ನು ವಿದ್ಯಾರ್ಥಿಗಳಿಗೆ ವಾಹನಗಳನ್ನು ನೀಡಿದವರ ವಿರುದ್ಧ ಕೈಗೊಳ್ಳಲಾಗುವುದು ಎಂದು ಟ್ರಾಫಿಕ್ ಪೊಲೀಸ್ ಕಮಿಷನರ್ ವನಾನಿ ಹೇಳಿದ್ದಾರೆ.
ಇನ್ನು ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು. ಟ್ರಾಫಿಕ್ ನಿಯಮ ಉಲ್ಲಂಘನೆ ಹಾಗೂ ಸಾರ್ವಜನಿಕ ಸುರಕ್ಷತೆಯ ವಿಚಾರದಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ವಿಡಿಯೋದಲ್ಲಿರುವ ಎಲ್ಲರ ವಿರುದ್ಧವೂ ಕಠಿ ಕ್ರಮ ಕೈಗೊಳ್ಳಲಾಗುವುದು ಈಗಾಗಲೇ ವಿಡಿಯೋದಲ್ಲಿ ಕಾಣಸಿಕೊಂಡವರ ಗುರುತುಪತ್ತೆಯ ಕಾರ್ಯವನ್ನು ನಮ್ಮ ಪೊಲೀಸರು ಆರಂಭಿಸಿದ್ದಾರೆ ಎಂದು ಹೇಳಿದ್ದಾರೆ.
રોલા પાડવા સ્કૂલની ફેરવેલમાં વિદ્યાર્થીઓ લક્ઝુરિયસ કાર લઈ પહોંચ્યા
આ કાફલો કોઈ મંત્રી અથવા ઉદ્યોગપતિનો નથી પણ આ કાફલો સ્કૂલમાં ફેરવેર પાર્ટીમાં જતા વિદ્યાર્થીઓનો છે
સુરતની ફાઉન્ટન હેડ સ્કૂલમાં ધો.12 ની વિદ્યાર્થીઓની યોજાયેલ ફેરવેલ પાર્ટીમાં વિદ્યાર્થીઓ 30 જેટલી બીએમડબલ્યુ,… pic.twitter.com/cC1Il0vxgd
— Jay Acharya ( Journalist ) (@AcharyaJay22_17) February 10, 2025