LATEST NEWS
ಮಹಾಕುಂಭ ಮೇಳದಿಂದ ಹಿಂತಿರುಗುತ್ತಿದ್ದ ಮಿನಿಬಸ್ ಗೆ ಟ್ರಕ್ ಡಿಕ್ಕಿ – ಆಂಧ್ರಪ್ರದೇಶದ 7 ಮಂದಿ ಸಾವು

ಜಬಲ್ಪುರ ಫೆಬ್ರವರಿ 11: ಪ್ರಯಾಗ್ರಾಜ್ನಲ್ಲಿ ನಡೆದ ಮಹಾ ಕುಂಭ ಮೇಳದಿಂದ ಹಿಂತಿರುಗುತ್ತಿದ್ದ ಮಿನಿ ಬಸ್ ಗೆ ಟ್ರಕ್ ಒಂದು ಡಿಕ್ಕಿ ಹೊಡೆದ ಪರಿಣಾಮ 7 ಮಂದಿ ಸಾವನಪ್ಪಿದ ಘಟನೆ ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.
ಜಿಲ್ಲಾಧಿಕಾರಿ ದೀಪಕ್ ಕುಮಾರ್ ಸಕ್ಸೇನಾ ಅವರ ಪ್ರಕಾರ ಟ್ರಕ್ ರಾಂಗ್ ಸೈಡ್ ನಲ್ಲಿ ಬಂದಿದ್ದು. ಇದು ಮಿನಿ ಬಸ್ ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಹಿಂದಿನಿಂದ ಮಿನಿ ಬಸ್ ಗೆ ಮತ್ತೊಂದು ಕಾರು ಕೂಡ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ. ಮಿನಿ ಬಸ್ ಆಂಧ್ರಪ್ರದೇಶದ ನೊಂದಣಿಯಾಗಿದ್ದು, ಮಿನಿಬಸ್ ನಲ್ಲಿದ್ದವೂ ಆಂದ್ರಪ್ರದೇಶದವರು ಎಂದು ಹೇಳಲಾಗಿದೆ. ಅಪಘಾತದಲ್ಲಿ ಮಿನಿ ಬಸ್ ಛಿದ್ರವಾಗಿದ್ದು, ಏಳು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಮೃತರನ್ನು ಆನಂದ ಕನ್ಸಾರಿ . ಶಶಿ ಕನ್ಸಾರಿ, ರವಿ ಕುಮಾರ್, ಟಿವಿ ಪ್ರಸಾದ್, ಮಲ್ಲರೆಡ್ಡಿ , ಸಂತೋಷ , ರಾಜು ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಜಬಲ್ಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳಿಗ್ಗೆ 9 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ವಾಹನವು ಆಂಧ್ರಪ್ರದೇಶ ನೋಂದಣಿಯನ್ನು ಹೊಂದಿದ್ದು, ಬಸ್ನಲ್ಲಿದ್ದವರೆಲ್ಲರೂ ಆ ರಾಜ್ಯದವರು. ಬಸ್ನ ಹಿಂದೆಯೇ ಪ್ರಯಾಣಿಸುತ್ತಿದ್ದ ಮತ್ತೊಂದು ವಾಹನವೂ ಡಿಕ್ಕಿ ಹೊಡೆದಿದೆ ಆದರೆ ವಾಹನದ ಏರ್ಬ್ಯಾಗ್ಗಳು ತೆರೆದಿದ್ದರಿಂದ ಪ್ರಯಾಣಿಕರು ಬದುಕುಳಿದರು” ಎಂದು ಜಬಲ್ಪುರ ಉಪವಿಭಾಗೀಯ ಪೊಲೀಸ್ ಅಧಿಕಾರಿ (SDPO) ಪಾರುಲ್ ಶರ್ಮಾ ತಿಳಿಸಿದ್ದಾರೆ.
ಎರಡನೇ ವಾಹನದ ಕೆಲವು ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಸಿಹೋರಾ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿದೆ” ಎಂದು ಎಸ್ಡಿಪಿಒ ಶರ್ಮಾ ಹೇಳಿದರು. ಅಪಘಾತಕ್ಕೀಡಾದ ಟ್ರಕ್ ಸಿಮೆಂಟ್ ಸಾಗಿಸುತ್ತಿತ್ತು ಮತ್ತು ಸೇತುವೆಯ ಮೇಲೆ ಅಪಘಾತ ಸಂಭವಿಸಿದೆ ಎಂದು ಅವರು ಹೇಳಿದರು. ರಕ್ಷಣಾ ಕಾರ್ಯಾಚರಣೆಗಳು ಇನ್ನೂ ಮುಂದುವರೆದಿವೆ. ಕಳೆದ ಮೂರ್ನಾಲ್ಕು ದಿನಗಳಿಂದ 25-30 ಕಿಲೋಮೀಟರ್ಗಳಷ್ಟು ಭಾರಿ ಸಂಚಾರ ದಟ್ಟಣೆಗೆ ಸಾಕ್ಷಿಯಾಗಿದ್ದ ಅದೇ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ.