LATEST NEWS
ದೆಹಲಿ ಹೈಕೋರ್ಟ್ ಜಡ್ಜ್ ಮನೆಯ ಸ್ಟೋರ್ ರೂಂ ನಲ್ಲಿಸುಟ್ಟು ಕರಕಲಾದ ನೋಟುಗಳ ಕಂತೆ

ನವದೆಹಲಿ ಮಾರ್ಚ್ 23: ದೆಹಲಿ ಹೈಕೋರ್ಟ್‌ನ ಜಡ್ಜ್ ಯಶವಂತ್ ವರ್ಮಾ ಮನೆಯ ಸ್ಟೋರ್ ರೂಂ ನಲ್ಲಿ ಅಪಾರ ಪ್ರಮಾಣದ ಹಣ ಸುಟ್ಟು ಕರಕಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ತನಿಖಾ ವರದಿಯನ್ನು ಸುಪ್ರೀಂ ಕೋರ್ಟ್ ಶನಿವಾರ ತಡರಾತ್ರಿ ತನ್ನ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ. ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಅವರು ಸುಪ್ರೀಂಕೋರ್ಟ್ ಗೆ 25 ಪುಟಗಳ ತನಿಖಾ ವರದಿ ಸಲ್ಲಿಸಿದ್ದಾರೆ.
ಯಶವಂತ್ ವರ್ಮ ಮನೆಯಲ್ಲಿ ಪತ್ತೆಯಾದ ಹಣದ ಬಗ್ಗೆ ವಿಸ್ತೃತ ತನಿಖೆ ನಡೆಸುವ ಅಗತ್ಯವಿದೆ ಎಂದು ಅವರು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ. ದೆಹಲಿ ಹೈಕೋರ್ಟ್ ಸಿಜೆ ದೇವೇಂದ್ರ ಕುಮಾರ್ ಉಪಾಧ್ಯಾಯ ಅವರು ನೀಡಿದ ದೆಹಲಿ ಹೈಕೋರ್ಟ್‌ನ ತನಿಖಾ ವರದಿಯನ್ನು ಸುಪ್ರೀಂ ಕೋರ್ಟ್ ಶನಿವಾರ ತಡರಾತ್ರಿ ತನ್ನ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ.

ತನಿಖಾ ವರದಿಯಲ್ಲಿರುವ ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ಯಶವಂತ್ ವರ್ಮಾ ನಿರಾಕರಿಸಿದ್ದಾರೆ. ಬೆಂಕಿ ಹೊತ್ತಿಕೊಂಡ ಮತ್ತು ನಗದು ಪತ್ತೆಯಾಗಿದೆ ಎಂದು ಹೇಳಲಾದ ಕೊಠಡಿ ಔಟ್‌ಹೌಸ್ ಆಗಿತ್ತು, ನ್ಯಾಯಾಧೀಶರು ಮತ್ತು ಕುಟುಂಬ ವಾಸಿಸುವ ಮುಖ್ಯ ಕಟ್ಟಡವಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ನಾನು ಅಥವಾ ನನ್ನ ಕುಟುಂಬದ ಯಾವುದೇ ಸದಸ್ಯರು ಆ ಸ್ಟೋರ್ ರೂಂನಲ್ಲಿ ಯಾವುದೇ ಹಣವನ್ನು ಇಟ್ಟಿಲ್ಲ ಎಂದು ನಾನ ಹೇಳುತ್ತೇನೆ ಮತ್ತು ಆಪಾದಿತ ನಗದು ನಮಗೆ ಸೇರಿದೆ ಎಂಬ ವಿಷಯವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಈ ಹಣವನ್ನು ನಾವು ಇಟ್ಟುಕೊಂಡಿದ್ದೇವೆ ಅಥವಾ ಸಂಗ್ರಹಿಸಿದ್ದೇವೆ ಎಂಬ ಕಲ್ಪನೆಯೇ ಸಂಪೂರ್ಣವಾಗಿ ಅಸಂಬದ್ಧವಾಗಿದೆ. ಕ್ವಾರ್ಟರ್ಸ್ ಬಳಿ ಅಥವಾ ಔಟ್‌ಹೌಸ್ ಗೆ ಯಾರಾದರೂ ಮುಕ್ತವಾಗಿ ಪ್ರವೇಶಿಸಬಹುದಾಗಿದೆ. ಅದು ನನ್ನ ವಾಸಿಸುತ್ತಿರುವ ಮನೆಯಿಂದ ಸಂಪೂರ್ಣವಾಗಿ ಬೇರ್ಪಟ್ಟ ಕೋಣೆಯಾಗಿದೆ ಮತ್ತುಕಾಂಪೌಂಡ್ ಗೋಡೆಯು ನನ್ನ ವಾಸಸ್ಥಳವನ್ನು ಆ ಔಟ್‌ಹೌಸ್‌ನಿಂದ ಪ್ರತ್ಯೇಕಿಸುತ್ತದೆ. ಪತ್ರಿಕೆಗಳು ಹಾಗೂ ಮಾಧ್ಯಮಗಳು ದೋಷಾರೋಪಣೆ ಮಾಡುವ ಮುನ್ನ ಸ್ವಲ್ಪ ವಿಚಾರಣೆ ನಡೆಸಬೇಕು ಎಂದು ನಾನು ಬಯಸುತ್ತೇನೆ” ಎಂದು ನ್ಯಾಯಮೂರ್ತಿ ವರ್ಮಾ ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.