FILM
ಬಿಎಂಟಿಸಿ ಡಿಪೋಗೆ ದಿಢೀರ್ ಭೇಟಿ ನೀಡಿದ ಸೂಪರ್ ಸ್ಟಾರ್ ರಜನಿಕಾಂತ್!

ಬೆಂಗಳೂರು, ಆಗಸ್ಟ್ 29: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರು ಇಂದು ಬೆಂಗಳೂರಿನ ಜಯನಗರದಲ್ಲಿರುವ ಬಿಎಂಟಿಸಿ ಡಿಪೋ ನಂಬರ್ –4ಕ್ಕೆ ದಿಢೀರ್ ಭೇಟಿ ನೀಡಿದ್ದಾರೆ.
ಇದೇ ವೇಳೆ ಡಿಪೋದಲ್ಲಿನ ಮೆಕ್ಯಾನಿಕ್, ಡ್ರೈವರ್, ಕಂಡಕ್ಟರ್‌ಗಳೊಂದಿಗೆ ಮಾತುಕತೆ ನಡೆಸಿದ ರಜನಿಕಾಂತ್, ಸಿಬ್ಬಂದಿಯೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ. ರಜನಿಕಾಂತ್ ಅವರನ್ನು ಕಂಡು ಬಿಎಂಟಿಸಿ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಸುತ್ತಾಟ ನಡೆಸುತ್ತಿರುವ ರಜನಿ, ರಾಘವೇಂದ್ರಸ್ವಾಮಿ ದೇವಸ್ಥಾನ ಹಾಗೂ ಗಾಂಧಿಬಜಾರ್‌ನಲ್ಲಿರುವ ತಾವು ಓದಿದ ಶಾಲೆಗೆ ಭೇಟಿ ನೀಡುವ ಮೂಲಕ ಬಾಲ್ಯದ ದಿನಗಳನ್ನು ಮೆಲುಕು ಹಾಕುತ್ತಿದ್ದಾರೆ.
#WATCH | Superstar Rajinikanth paid a surprise visit to depot number 4 of BMTC (Bengaluru Metropolitan Transport Corporation) in Bengaluru, Karnataka today.
(Video Source: BMTC) pic.twitter.com/luzdpkdnNh
— ANI (@ANI) August 29, 2023
ಇತ್ತೀಚೆಗೆ ರಜನಿ ಅಭಿನಯದ ‘ಜೈಲರ್’ ಚಿತ್ರ ವಿಶ್ವದಾದ್ಯಂತ ತೆರೆಕಂಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.