LATEST NEWS
ಚರ್ಚ್ ದಾಳಿ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ದ ಕ್ರಮ – ಪೊಲೀಸ್ ಕಮಿಷನರ್
ಚರ್ಚ್ ದಾಳಿ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ದ ಕ್ರಮ – ಪೊಲೀಸ್ ಕಮಿಷನರ್
ಮಂಗಳೂರು ಮೇ 18: ಮತ ಎಣಿಕೆ ನಂತರ ಚುನಾವಣಾ ವಿಜಯೋತ್ಸವದಲ್ಲಿ ಸಂದರ್ಭದಲ್ಲಿ ಉಂಟಾದ ಗಲಭೆಗೆ ಸಂಬಂಧಿಸಿದಂತೆ ಎಂಟು ಮಂದಿಯನ್ನು ಬಂಧಿಸಲಾಗಿದೆ.
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ವಿಪುಲ್ ಕುಮಾರ್ ಚುನಾವಣಾ ವಿಜಯೋತ್ಸವದಲ್ಲಿ ಹಿನ್ನಲೆಯಲ್ಲಿ ಅಡ್ಯಾರ್ ಪದವು ಗಲಭೆ ನಡೆದಿದ್ದು, ಈ ಪ್ರಕರಣದಲ್ಲಿ ಎಂಟು ಮಂದಿ ಬಂಧಿಸಲಾಗಿದೆ.
ಬಂಧಿತರನ್ನು ನೌಷದ್, ದಾವೂದ್, ಮುಹಮ್ಮದ್ ಜುನೈರ್, ಶಾಹುಲ್ ಹಮೀದ್, ಹರೀಶ್ ಪೂಜಾರಿ, ಅಭಿಷೇಕ್, ನಿಶಾಂತ್ ಎಂದು ಗುರುತಿಸಲಾಗಿದೆ. ನ್ಯಾಯಾಲಯ ಆರೋಪಿಗಳಿಗೆ ನ್ಯಾಯಂಗ ಬಂಧನ ವಿಧಿಸಿದ್ದಾರೆ.
ಜಿಲ್ಲೆಯಾದ್ಯಂತ ಮಂಗಳೂರಿನಲ್ಲಿ ಚರ್ಚ್ ದಾಳಿ ಆಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು, ಹಳೆಯ ವಿಡಿಯೋ ಬಳಸಿ ವಾಟ್ಸಪ್, ಫೇಸ್‌ಬುಕ್ ನಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗಿದ್ದು, ಚರ್ಚ್ ಗೆ ದಾಳಿ ಆಗಿದೆ ಎಂದು ಹಬ್ಬಿರುವ ಸುಳ್ಳು ಸುದ್ದಿ ಹಿನ್ನೆಲೆ ಸುಮೋಟೋ ಕೇಸು ದಾಖಲಿಸಲಾಗುವುದು ಎಂದು ಪೊಲೀಸ್ ಕಮಿಷನರ್ ವಿಪುಲ್ ಕುಮಾರ್ ಎಚ್ಚರಿಸಿದ್ದಾರೆ.