Connect with us

    LATEST NEWS

    ರಾತ್ರಿ ಸುರಿದ ಭಾರೀ ಮಳೆ ಧರೆಗುರುಳಿದ ಬೃಹತ್ ಮರ

    ರಾತ್ರಿ ಸುರಿದ ಭಾರೀ ಮಳೆ ಧರೆಗುರುಳಿದ ಬೃಹತ್ ಮರ

    ಮಂಗಳೂರು ಮೇ 18: ಹವಾಮಾನ ವೈಫರಿತ್ಯದ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ನಿನ್ನೆ ತಡರಾತ್ರಿ ಸುರಿದ ಗಾಳಿ ಮಳೆಗೆ ಭಾರೀ ಗಾತ್ರದ ಮರ ಉರುಳಿ ಬಿದ್ದು, ನಾಲ್ಕು ಕಾರು ಜಖಂಗೊಂಡಿದೆ.

    ಮಂಗಳೂರಿನ ಅತ್ತಾವರದ ಬಾಬುಗುಡ್ಡೆಯಲ್ಲಿ ಘಟನೆ ನಡೆದಿದ್ದು ಮರದ ಬಳಿ ಇದ್ದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಹಾಗೂ ಮೂರು ವಿದ್ಯುತ್ ಕಂಬ ಕೂಡ ಉರುಳಿ ಬಿದ್ದಿದೆ. ಇದರಿಂದಾಗಿ ಮರದ ಬಳಿ ನಿಲ್ಲಿಸಿದ್ದ ನಾಲ್ಕು ಕಾರು ಜಖಂ ಆಗಿದ್ದು ಭಾರೀ ನಷ್ಟವಾಗಿದೆ.

    ರಾತ್ರಿ ಸಮಯ ಆಗಿದ್ದರಿಂದ ವಿದ್ಯುತ್ ಶಾಕ್ ದುರಂತದಿಂದ ಜನ ಪಾರಾಗಿದ್ದಾರೆ. ಅಗ್ನಿಶಾಮಕ ಸಿಬಂದಿ ಹಾಗೂ ಸ್ಥಳೀಯರು ಮರ ತೆರವು ಕಾರ್ಯ ನಡೆಸುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply