LATEST NEWS
ತಬ್ಲಿಘಿಗಳ ವಿಚಾರದಲ್ಲಿ ಸಿಎಂ ವಿರುದ್ದ ಹೆಚ್ಚಾಗುತ್ತಿದೆ ಅಸಮದಾನದ ಹೊಗೆ

ತಬ್ಲಿಘಿಗಳ ವಿಚಾರದಲ್ಲಿ ಸಿಎಂ ವಿರುದ್ದ ಹೆಚ್ಚಾಗುತ್ತಿದೆ ಅಸಮದಾನದ ಹೊಗೆ
ಉಡುಪಿ ಎಪ್ರಿಲ್ 09: ಸಿಎಂ ಯಡಿಯೂರಪ್ಪ ಅವರ ತಬ್ಲಿಘಿಗಳ ವಿಚಾರದಲ್ಲಿನ ಹೇಳಿಕೆ ಈಗ ಬಿಜೆಪಿಯಲ್ಲೇ ಅಪಸ್ವರ ಉಂಟಾಗಿದೆ. ಈಗಾಗಲೇ ಈ ವಿಚಾರಕ್ಕೆ ಸಂಸದ ಅನಂತ ಕುಮಾರ್ ಹೆಗ್ಡೆ, ಶಾಸಕ ಯತ್ನಾಳ ವಾಗ್ದಾಳಿ ನಡೆಸಿದ್ದು, ಈಗ ಇದೇ ವಿಚಾರಕ್ಕೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಟ್ವೀಟ್ ಮಾಡಿ ತಬ್ಲಿಘಿಗಳ ವಿರುದ್ಧ ಮಾತನಾಡಿದ ಕಾರ್ಯಕರ್ತರ ಬೆಂಬಲಕ್ಕೆ ನಾನು ನಿಲ್ಲುತ್ತೇನೆ ಎಂದು ತಿಳಿಸಿದ್ದಾರೆ.
ಈಗಾಗಲೇ ಬಿಜೆಪಿ ಕೆಲವು ನಾಯಕರು ದೆಹಲಿ ನಿಜಾಮುದ್ದಿನ್ ತಬ್ಲಿಘಿಗಳ ವರ್ತನೆ ಬಗ್ಗೆ ಕಿಡಿಕಾರಿದ್ದಾರೆ. ಈಗ ಮತ್ತೊಂದು ಸೇರ್ಪಡೆ ಕಾರ್ಕಳ ಶಾಸಕ ಸುನಿಲ್ ಕುಮಾರ್. ಈ ಕುರಿತಂತೆ ಟ್ವೀಟ್ ಮಾಡಿದ್ದು, ತಬ್ಲೀಘಿ ಗಳ ವರ್ತನೆಯನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ಅವರ ವಿರುದ್ಧ ಮಾತನಾಡಿದ ಕಾರ್ಯಕರ್ತರ ಬೆಂಬಲಕ್ಕೆ ನಾನು ನಿಲ್ಲುತೇನೆ. ಇದೆ ನನ್ನ ಪ್ರಥಮ ಆದ್ಯತೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿ ನಿಜಾಮುದ್ದಿನ್ ಧಾರ್ಮಿಕ ಸಮಾವೇಶದ ಬಗ್ಗೆ ಕೆಲವೊಂದು ಅಹಿತಕರ ಘಟನೆ ನಡೆದಿದೆ. ಆ ಬಗ್ಗೆ ತನಿಖೆ ನಡೆಸಿ, ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಅವುಗಳನ್ನೇ ದೊಡ್ಡದು ಮಾಡುವ ಅವಶ್ಯಕತೆ ಇಲ್ಲ. ಈ ಸಂದರ್ಭದಲ್ಲಿ ಕೋಮು ಭಾವನೆ ಕೆರಳಿಸಿದರೆ ಸರಿ ಇರುವುದಿಲ್ಲ ಎಂದು ಹೇಳಿಕೆ ನೀಡಿದ್ದರು.
ಮುಖ್ಯಮಂತ್ರಿ ಯಡಿಯೂರಪ್ಪ ತಬ್ಲಿಘಿಗಳ ಪರವಹಿಸಿ ಮಾತನಾಡಿದ್ದಾರೆ ಎಂದು ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳ ಮುಖಂಡರು ಸಿಎಂ ವಿರುದ್ದ ಕಿಡಿಕಾರಿದ್ದರು.ದೆಹಲಿ ನಿಜಾಮುದ್ದಿನ್ ಧಾರ್ಮಿಕ ಸಮಾವೇಶದಿಂದಾಗಿ ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂದು ಬಿಜೆಪಿ ಶಾಸಕರು, ಸಂಸದರು ಆರೋಪಿಸಿದ್ದರು.
ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಸಾಮಾಜಿಕ ಜಾಲತಾಣದಲ್ಲಿ ಸುಧೀರ್ಘವಾದ ಲೇಖನವನ್ನೇ ಬರೆದು ಕೊರೊನಾ ವೈರಸ್ ಹಾಗೂ ತಬ್ಲಿಘಿ ಜಮಾತ್ ನಂಟಿನ ಬಗ್ಗೆ ಉಲ್ಲೇಖಿಸಿದ್ದರು. ಅಲ್ಲದೆ ಈ ವಿಚಾರವಾಗಿ ಟ್ವೀಟ್ ಮಾಡಿದ್ದ ಯತ್ನಾಳ್, ಕಾನೂನು ಕ್ರಮದ ಎಚ್ಚರಿಕೆ ಕೊಡಬೇಕಾದದ್ದು ಕೊರೊನಾ ಹಬ್ಬಿಸುವ ಮತಾಂಧರಿಗೆ. ಅವರನ್ನು ಸಮರ್ಥಿಸುವ ಮಾನವೀಯತೆ ಇರದ ಧಾರ್ಮಿಕ ರಾಜಕೀಯ ನಾಯಕರಿಗೆ ಹೊರತು ದೇಶಭಕ್ತ ಸಮುದಾಯಗಳಿಗೆ ಅಲ್ಲ. ತಬ್ಲಿಘಿ ಜಮಾತ್ ಜಿಹಾದಿಗಳಿಗೆ ಅಂತಿಮ ಎಚ್ಚರಿಕೆ ಕೊಡಿ, ಸಹಕರಿಸದಿದ್ದರೆ ಗುಂಡಿಕ್ಕಿ. ನಿಮಗೆ ಇದು ಪ್ರಚೋದನೆ ಎನಿಸಿದರೆ ನನ್ನ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದರು.
ಇದೀಗ ಬಿಜೆಪಿಯ ಭದ್ರಕೋಟೆ ಕರಾವಳಿಯ ಉಡುಪಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ಕೂಡ ತಬ್ಲಿಘಿಗಳ ವಿರುದ್ದ ನಿಂತಿದ್ದು, ಸಿಎಂ ವಿರುದ್ದ ದಿನದಿಂದ ದಿನಕ್ಕೆ ಬಿಜೆಪಿ ಪಾಳಯದಲ್ಲಿ ಅಸಮಧಾನದ ಹೊಗೆ ಜಾಸ್ತಿಯಾಗುತ್ತಿದೆ.