Connect with us

LATEST NEWS

ಸೌಜನ್ಯಳ ಘಟನೆಗೂ ನರೇಂದ್ರ ಮೋದಿಗೆ ಏನು ಸಂಬಂಧ- ಶಾಸಕ ಸುನಿಲ್ ಕುಮಾರ್

ಕಾರ್ಕಳ ಅಕ್ಟೋಬರ್ 15: ಸೌಜನ್ಯಳಿಗೆ ನ್ಯಾಯ ಸಿಗಬೇಕು ಎಂದು ಹೋರಾಟದ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಉಲ್ಲೇಖವಾಗಿತ್ತು, ಸೌಜನ್ಯಳ ಘಟನೆಗೂ ನರೇಂದ್ರ ಮೋದಿಗೆ ಏನು ಸಂಬಂಧ ಎಂದು ಶಾಸಕ ಸುನಿಲ್ ಪ್ರಶ್ನೆ ಮಾಡಿದ್ದಾರೆ.


ಕಾರ್ಕಳದಲ್ಲಿ ನಡೆದ ಧರ್ಮಸಂರಕ್ಷಣಾ ಸಮಾವೇಶದಲ್ಲಿ ಮಾತನಾಡಿದ ಶಾಸಕ ಸುನಿಲ್ ಕುಮಾರ್ ಸೌಜನ್ಯ ಳಿಗೆ ನ್ಯಾಯ ಸಿಗಬೇಕೆನ್ನುವುದಕ್ಕೆ ನಮ್ಮೆಲ್ಲರ ಬೆಂಬಲವೂ ಇದೆ. ಆದರೆ ಅದನ್ನು ನೆಪವಾಗಿಟ್ಟುಕೊಂಡು ಧಾರ್ಮಿಕ ಕೇಂದ್ರಗಳ ಅಪಮಾನ ಮಾಡುವುದು ಸರಿಯಲ್ಲ. ಇದನ್ನು ನಾಗರಿಕ ಸಮಾಜ ಒಪ್ಪ ಬಾರದು. ಅದಕ್ಕಾಗಿ ಇಂದು ಯುದ್ಧ ಆರಂಭಿಸಲಾಗಿದೆ. ಇದು ನಿಲ್ಲುವುದು ಧರ್ಮಸ್ಥಳದಲ್ಲಿ. ಈ ಸಮಾವೇಶ ಗಟ್ಟಿಯಾಗಿ ವಿರೋಧಿಗಳಿಗೆ ಎಚ್ಚರಿಕೆ ನೀಡುವ ಸಂದೇಶ ಸಾರಬೇಕು. ಧರ್ಮ ಎಚ್ಚರಿಕೆಯ ಕೆಲಸ ನಮ್ಮ ನಮ್ಮ ಗ್ರಾಮಗಳಲ್ಲಿ ಮಾಡೋಣ ಎಂದರು. ಸೌಜನ್ಯಳ ಹೋರಾಟ ವನ್ನು ದಿಕ್ಕು ತಪ್ಪಿಸಲಾಗುತ್ತಿದೆ. ಹಾದಿ ಬೀದಿಯಲ್ಲಿ ಜನ ಯಾರೋ ಅಪರಾಧಿ ಎಂದು ಜನ ಮಾತನಾಡಬಾರದು, ಹೋರಾಟದ ನೇಪದಲ್ಲಿ ಕಾನೂನಿನ ಬಗ್ಗೆ ಗೌರವ ಇಲ್ಲ, ಆಣೆ ಪ್ರಮಾಣಕ್ಕೆ ಗೌರವ ಇಲ್ಲ, ಯಾರನ್ನ ನಂಬಿ ಹೋರಾಟ ಮಾಡುತ್ತಾ ಇದ್ದೀರ ಎಂದು ಸೌಜನ್ಯ ಹೋರಾಟಗರರನ್ನು ಪ್ರಶ್ನಿಸಿದರು.


ಇವತ್ತು ಧರ್ಮಸ್ಥಳ ಅವಹೇಳನ ಮಾಡುವ ಇವರನ್ನು ಸುಮ್ಮನೆ ಬಿಟ್ಟರೆ ನಾಳೆ ನಮ್ಮ ಕಾಲ ಬುಡಕ್ಕೆ ಬರುತ್ತಾರೆ. ಧರ್ಮಸ್ಥಳದ ಖಾವಂದರ ಬಗ್ಗೆ ಅನಗತ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡುತ್ತಿದ್ದಾರೆ.

Share Information
Advertisement
Click to comment

You must be logged in to post a comment Login

Leave a Reply