LATEST NEWS
ಉಡುಪಿ – ಪ್ರಚೋದನಕಾರಿ ಭಾಷಣ ಚಿಂತಕಿ ಮೀನಾಕ್ಷಿ ಸೆಹರಾವತ್ ವಿರುದ್ದ ಎಫ್ಐಆರ್
ಉಡುಪಿ ಜನವರಿ 07: ಗಾಂಧಿ ಅವರು ಜಿನ್ನಾ ಜೊತೆಗೆ ಸೇರಿಕೊಂಡು ಪಾಕಿಸ್ತಾನಕ್ಕೆ ಜನ್ಮ ನೀಡಿದ್ದಾರೆ. ನಾವು ಮಹಾತ್ಮ ಗಾಂಧಿ ಅವರನ್ನು ರಾಷ್ಟ್ರಪಿತ ಎಂಬುದಾಗಿ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿಕೆ ನೀಡಿದ್ದ ಡೆಹ್ರಾಡೂನ್‌ನ ಚಿಂತಕಿ ಮೀನಾಕ್ಷಿ ಸೆಹರಾವತ್ ಅವರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.
ಉಡುಪಿಯ ಪೂರ್ಣಪ್ರಜ್ಞಾ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ವಿಶ್ವಾರ್ಪಣಂ ಕಾರ್ಯಕ್ರಮದಲ್ಲಿ ಪ್ರಚೋದನಕಾರಿಯಾಗಿ ಭಾಷಣ ಮಾಡಿದ ಆರೋಪದಲ್ಲಿ ಡೆಹ್ರಾಡೂನ್‌ನ ಚಿಂತಕಿ ಮೀನಾಕ್ಷಿ ಸೆಹರಾವತ್ ಮೇಲೆ ಉಡುಪಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.
ಅಲ್ಲದೆ ಕಾರ್ಯಕ್ರಮ ಆಯೋಜಕರಾದ ಗೋವಿಂದರಾಜು ಎಂಬುವವರ ವಿರುದ್ಧವೂ ಪ್ರಕರಣ ದಾಖಲಾಗಿದೆ. ದೇಶದ ಬೇರೆ ಬೇರೆ ಧರ್ಮದ, ಗುಂಪುಗಳ ನಡುವೆ ವೈಮನಸ್ಸು ಹಾಗೂ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ರೀತಿಯಲ್ಲಿ ಮೀನಾಕ್ಷಿ ಅವರು ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದಾರೆ ಎಂಬುದು ಎಫ್‌ಐಆರ್‌ನಲ್ಲಿದೆ.