ಅಂಗಾರರಿಗೆ ತಪ್ಪಿದ ಸಚಿವ ಸ್ಥಾನ ಪಟ್ಟ, ಸುಳ್ಯ ಬಿಜೆಪಿ ನಾಯಕರಿಂದ ಅಸಹಕಾರ ಚಳವಳಿಯ ಬಿಗಿಪಟ್ಟು

ಸುಳ್ಯ,ಅಗಸ್ಟ್ 20: ಸುಳ್ಯ ಶಾಸಕ ಎಸ್ ಅಂಗಾರ ಗೆ ಸಚಿವ ಸ್ಥಾನ ಕೈ ತಪ್ಪಿದ ಹಿನ್ನಲೆಯಲ್ಲಿ ಸುಳ್ಯದ ಬಿಜೆಪಿ ಪದಾಧಿಕಾರಿಗಳು ಅಸಹಕಾರ ಚಳುವಳಿ ನಡೆಸಲು ತೀರ್ಮಾನಿಸಿದ್ದಾರೆ.

ಅಂಗಾರರಿಗೆ ಸಚಿವ ಸ್ಥಾನ ನೀಡುವವರೆಗೆ ಪಕ್ಷದ ಎಲ್ಲಾ ಕಾರ್ಯ ಚಟುವಟಿಕೆಗಳಿಂದ ದೂರ ಉಳಿಯಲು ನಿರ್ಧರಿಸಿರುವ ಪದಾಧಿಕಾರಿಗಳು ಪಕ್ಷದ ರಾಜ್ಯ ನಾಯಕರು ಈ ಬಗ್ಗೆ ತೀರ್ಮಾನ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ದಕ್ಷಿಣಕನ್ನಡ, ಉಡುಪಿ, ಕೊಡಗು ಈ ಮೂರು ಜಿಲ್ಲೆಗಳಲ್ಲಿ ಬಿಜೆಪಿಯ ಹೆಚ್ಚಿನ ಶಾಸಕರು ಆಯ್ಕೆಯಾಗಿದ್ದರೆ. ಆದರೆ ಈ ಭಾಗಕ್ಕೆ ಸಚಿವ ಸ್ಥಾನವನ್ನು ನೀಡದೆ ಬಿಜೆಪಿ ನಾಯಕರು ಅನ್ಯಾಯ ಮಾಡಿದ್ದಾರೆ ಎನ್ನುವ ಆಕ್ರೋಶವನ್ನು ಸುಳ್ಯದ ಬಿಜೆಪಿ ನಾಯಕರು ಹೊರಹಾಕಿದ್ದಾರೆ.

ಒಂದು ವೇಳೆ ರಾಜ್ಯ ನಾಯಕರು ಈ ಬಗ್ಗೆ ಗಂಭೀರವಾಗಿ ಪರಿಗಣಿಸದೇ ಹೋದಲ್ಲಿ ಕಾರ್ಯಕರ್ತರು, ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆಯನ್ನು ನೀಡುವ ಎಚ್ಚರಿಕೆಯನ್ನು ಬಿಜೆಪಿ ಹಿಂದುಳಿದ ವರ್ಗಗಳ ಮುಖಂಡ ಸುರೇಶ್ ಮಂಡೆಕೋಲು ಎಚ್ಚರಿಸಿದ್ದಾರೆ.

VIDEO

Facebook Comments

comments