DAKSHINA KANNADA
ಸುಳ್ಯ: ಅಕ್ಕಿ ರುಬ್ಬುತ್ತಿದ್ದ ಟಿಲ್ಟಿಂಗ್ ಗ್ರೈಂಡರ್ ಭಸ್ಮ, ತಪ್ಪಿದ ಭಾರಿ ಅನಾಹುತ..!

ಸುಳ್ಯ : ಗ್ರೈಂಡರ್ ನಲ್ಲಿ ಅಕ್ಕಿ ರುಬ್ಬುತ್ತಿದ್ದ ಸಂದರ್ಭ ಗ್ರೈಂಡರ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಗ್ರೈಂಡರ್ ಸಂಪೂರ್ಣ ಭಸ್ಮಗೊಂಡ ಘಟನೆ ದಕ್ಷಿಣ ಕನ್ನಡಜಿಲ್ಲೆ ಸುಳ್ಯ ಹಳೆಗೇಟು ಮನೆಯೊಂದರಲ್ಲಿ ನಡೆದಿದೆ.
ಇಲ್ಲಿನ ಗುಂಡಿಯಡ್ಕ ಜಿ ಸಾಧಿಕ್ ಎಂಬುವರ ಮನೆಯಲ್ಲಿ ಗ್ರೈಂಡರ್ ನಲ್ಲಿ ಅಕ್ಕಿ ರುಬ್ಬಲು ಹಾಕಿ ಮನೆಯವರು ಮನೆ ಕೆಲಸದಲ್ಲಿ ತೊಡಗಿಕೊಂಡಿದ್ದರು. ಆಗ ಯಾವುದೋ ಸುಟ್ಟ ವಾಸನೆ ಬಂದಿದೆ, ಮನೆಯವರು ಅಡಿಗೆ ಕೋಣೆಗೆ ಹೋಗಿ ನೋಡಿದಾಗ ಗ್ರೈಂಡರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನೋಡು ನೋಡುತಿದ್ದಂತೆ ಏಕಾಏಕಿ ಬೆಂಕಿ ಬೃಹತಾಕಾರದಲ್ಲಿ ಬೆಳೆದು ಅಡಿಗೆ ಕೋಣೆ ಸಂಪೂರ್ಣ ವ್ಯಾಪಿಸಿಕೊಂಡಿತು. ಆತಂಕಗೊಂಡ ಮನೆಯವರು ಕೂಡಲೆ ಹೋಗಿ ಮೈನ್ ಸ್ವಿಚ್ ಓಫ್ ಮಾಡಿದ್ದು ಹೊತ್ತಿ ಉರಿಯುತ್ತಿದ್ದ ಗ್ರೈಂಡರ್ ನ ಪಕ್ಕದಲ್ಲಿದ್ದ ಗ್ಯಾಸ್ ಸಿಲಿಂಡರನ್ನು ಮನೆಯ ಹೊರಗೆ ತಂದರು. ಇದರಿಂದ ಸಂಭವಿಸಬಹುದಾದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಘಟನೆಯಿಂದ ಗ್ರೈಂಡರ್ ಸುಟ್ಟು ಭಸ್ಮವಾಗಿದ್ದು,ಈ ಗ್ರೈಂಡರನ್ನು ಕಳೆದ ಐದು ತಿಂಗಳ ಹಿಂದೆಯಷ್ಟೇ ಖರೀದಿಸಲಾಗಿತ್ತು ಎಂದು ಮನೆಯವರು ಹೇಳಿದ್ದಾರೆ.
