ಸುಳ್ಯ ನವೆಂಬರ್ 09: ಯುವತಿ ಅಪ್ರಾಪ್ತೆಯಾಗಿರುವ ವೇಳೆ ಪ್ರೀತಿಸುತ್ತಿದ್ದ ಜೋಡಿ ಮದುವೆಗೆ ಮೊದಲೇ ದೈಹಿಕ ಸಂಪರ್ಕ ಬೆಳೆಸಿದ ಪರಿಣಾಮ ಆಕೆ ಗರ್ಭಿಣಿ ಯಾಗಿದ್ದು ಬಳಕೆ ಅವರಿಬ್ಬರು ಮದುವೆಯಾಗಿ ಜತೆಯಾಗಿದ್ದರೂ ಇದೀಗ ಪತಿಯ ಮೇಲೆ ಪೋಕೋ ಪ್ರಕರಣ ದಾಖಲಾಗಿರುವುದಾಗಿ ತಿಳಿದುಬಂದಿದೆ.

ಬಳ್ಪದ ಯುವತಿ ಹಾಗೂ ಕಡಬ ನೆಕ್ಕಿಲದ ಯುವಕ ಪರಸರ ಪ್ರೀತಿಸುತ್ತಿದ್ದರೆಂದೂ ಅವರಿಬ್ಬರು ದೈಹಿಕ ಸಂಪರ್ಕ ಬೆಳೆಸಿದರು. ಆದರೆ ಈ ವೇಳೆ ಯುವತಿಗೆ 18 ವರ್ಷ ತು೦ಬಿರಲಿಲ್ಲವೆ೦ದು ತಿಳಿದುಬಂದಿದೆ. ಯುವತಿ ಗರ್ಭಿಣಿಯಾಗಿದ್ದು ಬಳಿಕ ಆ ಜೋಡಿ ಮದುವೆಯಾಗಿತ್ತು. ಕೆಲ ದಿನಗಳ ಹಿಂದೆ ಯುವತಿ ಪರೀಕ್ಷೆಗಾಗಿ ಆಸ್ಪತ್ರೆಗೆ ಹೋದಾಗ ಆಕೆಯ ವಯಸ್ಸಿನ ಕಾರಣದಿಂದ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೆರಿದೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿರುವುದಾಗಿ ತಿಳಿದುಬಂದಿದೆ.



