DAKSHINA KANNADA
ಸುಳ್ಯ – ಮತ್ತೆ ಕಂಪಿಸಿದ ಭೂಮಿ..ಒಂದು ವಾರದಲ್ಲಿ ನಾಲ್ಕನೇ ಬಾರಿ ಭೂಕಂಪನ

ಸುಳ್ಯ ಜುಲೈ 1: ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಗಡಿಭಾಗದಲ್ಲಿ ಮತ್ತೆ ಭೂಮಿ ಕಂಪಿಸಿದೆ. ಕಳೆದ ಒಂದು ವಾರದಲ್ಲಿ ಇದು ನಾಲ್ಕನೇ ಬಾರಿ ಭೂಕಂಪನವಾಗಿದೆ.
ಸುಳ್ಯದ ಸಂಪಾಜೆ, ಚೆಂಬು, ಕಲ್ಲುಗುಂಡಿ ಗಡಿಭಾಗ ಹಾಗೂ ಕೊಡಗಿನ ಗಡಿಭಾಗಗಳು ಸೇರಿದಂತೆ ಸುಳ್ಯ ತಾಲೂಕಿನ ವಿವಿಧ ಕಡೆ ಮತ್ತೊಮ್ಮೆ ಗುರುವಾರ ತಡರಾತ್ರಿ 1.15ಕ್ಕೆ ಭಾರಿ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಏಕಾಏಕಿ ಉಂಟಾದ ಶಬ್ದ ಗಾಢ ನಿದ್ರೆಯಲ್ಲಿದ್ದ ಜನರನ್ನು ಬಡಿದೆಬ್ಬಿಸಿದೆ. ಮೊದಲಿಗೆ ಭಾರಿ ಶಬ್ದ ಕೇಳಿ ಬಂದಿದ್ದು, ನಂತರ ಒಮ್ಮೆಲೆ ಸುಮಾರು 2 ಸೆಕೆಂಡ್ಗಳ ಕಾಲ ಭೂಮಿ ನಡುಗಿದ ಅನುಭವ ಆಗಿದೆ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಿದ್ದಾರೆ.ಶಬ್ದದಿಂದ ಕೆಲವರು ಹೆದರಿ ಮನೆಯಿಂದ ಹೊರಗಡೆ ಓಡಿ ಬಂದಿದ್ದಾರೆ.
